Headlines

Godman scandal video ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ, ಗರ್ಭಿಣಿ ಮಹಿಳೆಯನ್ನೂ ಬಿಟ್ಟಿಲ್ಲ | Ashok Kharat Scandal 100 Obscene Videos Of Godman Found Pregnant Woman Among Victims

Godman scandal video ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ, ಗರ್ಭಿಣಿ ಮಹಿಳೆಯನ್ನೂ ಬಿಟ್ಟಿಲ್ಲ | Ashok Kharat Scandal 100 Obscene Videos Of Godman Found Pregnant Woman Among Victims



Godman scandal video ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ, ಗರ್ಭಿಣಿ ಮಹಿಳೆಯನ್ನೂ ಬಿಟ್ಟಿಲ್ಲ | Ashok Kharat Scandal 100 Obscene Videos Of Godman Found Pregnant Woman Among Victims

ಗಾಡ್‌ಮ್ಯಾನ್ ಗುರೂಜಿಯ 100 ರಾಸಲೀಲೆ ವಿಡಿಯೋ ಪತ್ತೆ, ಗರ್ಭಿಣಿ ಮಹಿಳೆಯನ್ನೂ ಬಿಟ್ಟಿಲ್ಲ, ಜ್ಯೋತಿಷಿ ಹಾಗೂ ಸ್ವಯಂಘೋಷಿತ ದೇವಮಾನವನ ರಾಸಲೀಲೆ ತನಿಖೆ ನಡುವೆ ಹಲವು ಸ್ಫೋಟಕ ಮಾಹಿತಿ ಜೊತೆಗೆ ವಿಡಿಯೋಗಳು ಪತ್ತೆಯಾಗಿದೆ. 

ನಾಸಿಕ್ (ಮಾ.23) ಸ್ವಯಂ ಘೋಷಿತ ದೇವಮಾನವ, ಜ್ಯೋತಿಷಿ ಅಶೋಕ್ ಕುಮಾರ್ ಎಕನಾಥ್ ಖಾರಟ್ ರಾಸಲೀಲೆ ಪ್ರಕರಣದಲ್ಲಿ ಈಗಾಗಲೆ ಅರೆಸ್ಟ್ ಆಗಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ತನಿಖೆ ನಡುವೆ ಕೆಲ ಸ್ಫೋಟಕ ಮಾಹಿತಿಗಳು ಹಾಗೂ ವಿಡಿಯೋಗಳು ಹೊರಬಂದಿದೆ. ಅರೆಸ್ಟ್ ಬೆನ್ನಲ್ಲೇ 58 ವಿವಿಧ ಮಹಿಳೆಯರೊಂದಿಗೆ ಬಲವಂತದ, ಧಾರ್ಮಿಕ ಆಚರಣೆ, ಆಧ್ಯಾತ್ಮ ಹೆಸರಿನಲ್ಲಿ ಅತ್ಯಾ**ರ ನಡೆಸಿರುವ ವಿಡಿಯೋ ಹಾಗೂ ಮಾಹಿತಿ ಬಯಲಾಗಿತ್ತು. ಇದೀಗ 58 ಅಲ್ಲ 100 ವಿಡಿಯೋಗಳು ಲಭ್ಯವಾಗಿದೆ. ದುರಂತ ಎಂದರೆ ಈ ಕಾಮುಕ ಸ್ಪಯಂಘೋಷಿತ ದೇವಮಾನವ ಗರ್ಭಿಣಿ ಮಹಿಳೆಯನ್ನೂ ಬಿಡದೇ ಕಾಮಕ್ಕೆ ಬಳಸಿಕೊಂಡಿದ್ದಾನೆ.

ನೆಗಟೀವ್ ಪವರ್ ಹೆಸರಿನಲ್ಲಿ ಗಂಡನ ಹೊರಗೆ ಕಳುಹಿಸಿದ್ದ ಕಾಮುಕ

ಗುರೂಜಿ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ದಂಪತಿಗಳು ಬರುತ್ತಿದ್ದರು. ಅವರಿಗೆ ಕೆಲ ಧಾರ್ಮಿಕ, ಆಧ್ಯಾತ್ಮಿಕ ಪ್ರಕ್ರಿಯೆಗಳನ್ನು ಹೇಳುತ್ತಿದ್ದರು. ಬಳಿಕ ಗಂಡನ ಹೊರಗೆ ಕಳುಹಿಸಿ ಕಳಶ ಹಿಡಿಯಬೇಕು, ದಾರ ಕಟ್ಟಬೇಕು, ಮಹಿಳೆಯ ದೇಹದಲ್ಲಿರುವ ನೆಗಟೀವ್ ಪವರ್ ಹೋಗಬೇಕು. ತಾನು ಮಾಡು ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ ನೆಗಟೀವ್ ಪವರ್ ಮಹಿಳಯ ದೇಹದಿಂದ ಹೊರಹೋಗುವಾಗ ದುರ್ಬಲಾಗಿರು ಗಂಡನ ದೇಹ ಸೇರಿಕೊಳ್ಳಬಹುದು. ಹೀಗಾಗಿ ಗಂಡನ ಛೇಂಬರ್‌ನಿಂದ ಹೊರಗೆ ಕಳುಹಿಸುತ್ತಿದ್ದ. ಬಳಿಕ ಆಚರಣೆ, ಪದ್ಧತಿ ಹೆಸರಿನಲ್ಲಿ ಮಹಿಳೆಯರನ್ನು ಮುಟ್ಟುತ್ತಿದ್ದ. ಪ್ರಸಾದ ಹೆಸರಿನಲ್ಲಿ ವಯಾಗ್ರ ನೀಡಿ ಎಲ್ಲೆಡೆ ಮುಟ್ಟಿ ಪ್ರಚೋದಿಸುತ್ತಿದ್ದ. ಬಳಿಕ ಚೇಂಬರ್‌ನಲ್ಲೇ ಮಹಿಳೆಯನ್ನು ಬಳಸಿಕೊಳ್ಳುತ್ತಿದ್ದ. ಈ ವಿಡಿಯೋಗಳನ್ನು ಮಾಜಿ ಉದ್ಯೋಗಿ ಸೆರೆ ಹಿಡಿದಿದ್ದಾನೆ.

ಗರ್ಭಿಣಿ ಮಹಿಳೆಯನ್ನು ಬಿಡದೆ ಕೃತ್ಯಕ್ಕೆ ಬಳಕೆ

ಗರ್ಭಿಣಿ ಮಹಿಳೆ ಹಾಗೂ ಆತನ ಪತಿ ಇಬ್ಬರು ಈ ಕಾಮುಕ ಗುರೂಜಿ ಬಳಿ ಆಗಮಿಸಿದ್ದಾರೆ. ದುಬಾರಿ ಹಣ ನೀಡಿ ಗುರೂಜಿ ಅಪಾಯಿಂಟ್‌ಮೆಂಟ್ ಪಡೆದ ದಂಪತಿ ಹಲವು ವರ್ಷಗಳ ಬಳಿಕ ಮಗುವಿನ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಮಗುವಿನ ಜನನ ಯಾವುದೇ ಅಡೆ ತಡೆ ಇಲ್ಲದೆ ಆಗಲು ಗುರೂಜಿಯನ್ನು ಭೇಟಿಯಾಗಿದ್ದರು. ಆದರೆ ಎಲ್ಲರಂತೆ ಗಂಡನ ಹೊರಗೆ ಕಳುಹಿಸಿ ಈ ಗರ್ಭಿಣಿ ಮಹಿಳೆಯನ್ನು ತನ್ನ ಕಾಮ ತೃಷೆಗೆ ಬಳಸಿಕೊಂಡಿದ್ದಾನೆ. ಮಗು ಸುರಕ್ಷಿತವಾಗಿ ಡೆಲಿವರಿ ಆಗಲು ಇದು ಅಗತ್ಯ ಎಂದು ಕೃತ್ಯ ಎಸಗಿದ್ದಾನೆ. ಮಹಿಳೆ ವಿರೋಧ ವ್ಯಕ್ತಪಡಿಸಿದರೂ ಬಿಡದೆ ಬಳಸಿಕೊಂಡಿದ್ದಾನೆ ಎಂದು ಮಾಜಿ ಉದ್ಯೋಗಿ ಹಲವು ಘಟನೆಗಳ ವಿಡಿಯೋ ಕುರಿತು ಮಾತನಾಡಿದ್ದಾರೆ.

ಅಶೋಕ್ ಖಾರಟ್ ಕಚೇರಿಯ ಮಾಜಿ ಉದ್ಯೋಗಿ ಸೆರೆ ಹಿಡಿದ ವಿಡಿಯೋ

ಅಶೋಕ್ ಖಾರಟ್ ಕಚೇರಿಯಲ್ಲಿ 2024ರ ವರೆಗೆ ಕೆಲಸ ಮಾಡುತ್ತಿದ್ದ ಉದ್ಯೋಗಿ ಈ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಅಶೋಕ್ ಖಾರಟ್ ಮಹಿಳೆಯನ್ನು ಕಾಮಕ್ಕೆ ಬಳಸುತ್ತಿದ್ದಾನೆ ಅನ್ನೋ ಅನುಮಾನ ಬಲಗೊಳ್ಳುತ್ತಿದ್ದಂತೆ ಹಲವು ಮಹಿಳೆಯರು ಕಣ್ಣೀರಿಟ್ಟುಕೊಂಡು ತೆರಳುತ್ತಿದ್ದ ಘಟನೆಗಳನ್ನು ಈ ಉದ್ಯೋಗಿ ಗಮನಿಸಿದ್ದಾನೆ. ಹೀಗಾಗಿ ಅಶೋಕ್ ಖಾರಟ್ ಛೇಂಬರ್‌ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ಸೆರೆ ಹಿಡಿದಿದ್ದಾನೆ. ಅತೀ ದೊಡ್ಡ ದೇವಮಾನವ, ರಾಜಕೀಯ, ಅಧಿಕಾರ, ಹಣಬಲ ಹೊಂದಿರುವ ಕಾರಣ ವಿಡಿಯೋ ಸೆರೆ ಹಿಡಿದಿರುವುದಾಗಿ ಹೇಳಿದ್ದಾನೆ. ಈ ವಿಡಿಯೋಗಳನ್ನು ತನಿಖಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Scroll to load tweet…

2019ರಲ್ಲಿ ಅಶೋಕ್ ಖಾರಟ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಈ ಉದ್ಯೋಗಿಗೆ ಗುರೂಜಿಯ ಕಾಮಕಾಂಡ ಗೊತ್ತಾಗಿತ್ತು. 2022ರ ವೇಳೆಗೆ ಕೆಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ. 2024ರ ವೇಳೆಗೆ ಗುರೂಜಿ ನಡೆಯನ್ನೇ ಪ್ರಶ್ನಿಸಿದ್ದ. ಹೀಗಾಗಿ ಕೆಲಸದಿಂದ ಕಿತ್ತು ಹಾಕಿದ್ದರು. ಇಷ್ಟೇ ಅಲ್ಲ ಕೊಲೆ ಬೆದರಿಕೆಯನ್ನು ಹಾಕಲಾಗಿತ್ತು.

100 ವಿಡಿಯೋ ದಾಖಲೆ ಪೊಲೀಸರ ಕೈಸೇರಿದ ಬೆನ್ನಲ್ಲೇ ಮಹಿಳೆಯೊಬ್ಬರು ಅಶೋಕ್ ಖಾರಟ್ ವಿರುದ್ಧ ದೂರು ನೀಡಿದ್ದಾರೆ. ಧಾರ್ಮಿಕ ಆಚರಣೆ ಹೆಸರಿನಲ್ಲಿ ತನ್ನ ಮೇಲೆ ಅತ್ಯಾ**ರ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 2020ರಲ್ಲಿ ಮೊದಲ ಬಾರಿಗೆ ತನ್ನನ್ನು ಕಾಮ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಬಳಿಕ ಬೆದರಿಸಿ 2026ರ ವರೆಗೆ ಬಳಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



Source link

Leave a Reply

Your email address will not be published. Required fields are marked *