Headlines

ಆಸ್ತಿ ಖರೀದಿ ಇನ್ನಷ್ಟು ಭಾರ ಸಂಭವ – ಏಪ್ರಿಲ್‌ಗೆ ಹೊಸ ದರ ಜಾರಿ ?ಕಳೆದ ವರ್ಷ ಮುದ್ರಾಂಕ ಶುಲ್ಕ ಏರಿಸಿದ್ದ ಸರ್ಕಾರ | Property Purchase May Get Costlier New Rates Likely From April

ಸಾಲು-ಸಾಲು ಬೆಲೆ ಏರಿಕೆಗಳ ನಡುವೆ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಸಿದ್ಧತೆ ನಡೆಸಿದ್ದು, ಆಸ್ತಿ ಖರೀದಿ ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆಯಿದೆ.ಸ್ಥಿರಾಸ್ತಿಗಳ ಮಾರುಕಟ್ಟೆ ದರದ ಆಧಾರದ ಮೇಲೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ಈಗಾಗಲೇ ಸಭೆ ನಡೆಸಲಾಗಿದೆ.

ಬೆಂಗಳೂರು : ಸಾಲು-ಸಾಲು ಬೆಲೆ ಏರಿಕೆಗಳ ನಡುವೆ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಸಿದ್ಧತೆ ನಡೆಸಿದ್ದು, ಆಸ್ತಿ ಖರೀದಿ ಮತ್ತಷ್ಟು ತುಟ್ಟಿಯಾಗುವ ಸಾಧ್ಯತೆಯಿದೆ.

ಮಾರುಕಟ್ಟೆ ದರದ ಆಧಾರದ ಮೇಲೆ ಮಾರ್ಗಸೂಚಿ ದರ ಪರಿಷ್ಕರಣೆ

ಸ್ಥಿರಾಸ್ತಿಗಳ ಮಾರುಕಟ್ಟೆ ದರದ ಆಧಾರದ ಮೇಲೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ಈಗಾಗಲೇ ಸಭೆ ನಡೆಸಲಾಗಿದೆ. ಏಪ್ರಿಲ್‌ ತಿಂಗಳ ವೇಳೆಗೆ ಮಾರ್ಗಸೂಚಿ ದರವನ್ನು ಶೇ.10 ರಿಂದ ಶೇ.15ರಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ.

ಆಸ್ತಿ ನೋಂದಣಿ ಶುಲ್ಕವನ್ನು ಶೇ. 1ರಿಂದ 2ಕ್ಕೆ ಹೆಚ್ಚಿಸಿತ್ತು

ಕಳೆದ 2025ರ ಆ.31ರಂದು ರಾಜ್ಯ ಸರ್ಕಾರವು ಆಸ್ತಿ ನೋಂದಣಿ ಶುಲ್ಕವನ್ನು ಶೇ. 1ರಿಂದ 2ಕ್ಕೆ ಹೆಚ್ಚಿಸಿತ್ತು. ಇದರಿಂದಾಗಿ ಮುದ್ರಾಂಕ ಶುಲ್ಕ (ಶೇ.5.6) ಮತ್ತು ಹೆಚ್ಚಾದ ನೋಂದಣಿ ಶುಲ್ಕ ಸೇರಿ ಆಸ್ತಿ ನೋಂದಣಿ ವೇಳೆ ಆಸ್ತಿ ಮೌಲ್ಯದ ಶೇ.7.6ರಷ್ಟು ಶುಲ್ಕ ಭರಿಸಬೇಕಿದೆ.

ಆಸ್ತಿ ಖರೀದಿ ವೇಳೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಹೊರೆ ಕಡಿಮೆ ಮಾಡಿಕೊಳ್ಳಲು ಖರೀದಿದಾರರು ಮಾರುಕಟ್ಟೆ ಮೌಲ್ಯದ ಬದಲು ಮಾರ್ಗಸೂಚಿ ದರದ ಆಧಾರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುತ್ತಾರೆ.

ಇದೀಗ ಏಪ್ರಿಲ್‌ನಿಂದ ಶೇ.10 ರಿಂದ ಶೇ.15 ರಷ್ಟು ಮಾರ್ಗಸೂಚಿ ದರ ಹೆಚ್ಚಳವಾಗಲಿದ್ದು, ಆಸ್ತಿ ಖರೀದಿದಾರರಿಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಮತ್ತಷ್ಟು ದುಬಾರಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

Source link

Leave a Reply

Your email address will not be published. Required fields are marked *