ಇದು ಐದು ಸೆಕೆಂಡಿನ ಜಮಾನಾ! ಜೆನ್ Z (gen Z) ಮನಗೆಲ್ಲುವ ಜಾಹೀರಾತು ಸೂತ್ರ ಇಲ್ಲಿದೆ ನೋಡಿ | How To Win Gen Z Hearts Through 5 Seconds Theory Bni

ಇದು ಐದು ಸೆಕೆಂಡಿನ ಜಮಾನಾ! ಜೆನ್ Z (gen Z) ಮನಗೆಲ್ಲುವ ಜಾಹೀರಾತು ಸೂತ್ರ ಇಲ್ಲಿದೆ ನೋಡಿ | How To Win Gen Z Hearts Through 5 Seconds Theory Bni



ಇದು ಐದು ಸೆಕೆಂಡಿನ ಜಮಾನಾ! ಜೆನ್ Z (gen Z) ಮನಗೆಲ್ಲುವ ಜಾಹೀರಾತು ಸೂತ್ರ ಇಲ್ಲಿದೆ ನೋಡಿ | How To Win Gen Z Hearts Through 5 Seconds Theory Bni

ಇಂದಿನ ಡಿಜಿಟಲ್ ಯುಗದಲ್ಲಿ, ಜೆನ್ Z ತಲೆಮಾರು ತನ್ನ ಗಮನ ಸೆಳೆಯಲು ಕೇವಲ ಐದು ಸೆಕೆಂಡುಗಳ ಅವಕಾಶ ಮಾತ್ರ ಕೊಡುತ್ತಿದೆ. ಏನಿದು ‘ಐದು ಸೆಕೆಂಡ್ ಸಿದ್ಧಾಂತ’?  ಬ್ರ್ಯಾಂಡ್‌ಗಳೇಕೆ ಈ ನಿಯಮದ ಹಿಂದೆ ಬಿದ್ದಿವೆ?

ಇದು ಅಂತ್ಯವಿಲ್ಲದ ಸ್ಕ್ರೋಲ್‌ನ ಕಾಲ. ಮೊಬೈಲ್‌ನಲ್ಲಿ ಬಲಗೈ ಹೆಬ್ಬೆರಳಿಂದ ತೀಡ್ತಾ ಇರೋದು- ಸುದ್ದಿ, ಮೀಮ್‌, ಡ್ಯಾನ್ಸ್ ಟ್ರೆಂಡ್‌, ಜಗಳ, ಜಾಹೀರಾತು ಎಲ್ಲವೂ ಐದು ಸೆಕೆಂಡ್‌ನಲ್ಲಿ ಛಾಪು ಮೂಡಿಸಬೇಕು. ಜನರೇಶನ್‌ ಝೀಯೇ ಈ ಡಿಜಿಟಲ್ ಗದ್ದಲದ ನಡುವೆ ನ್ಯಾಯಾಧೀಶ. ಇಂದಿನ ಇಂಟರ್‌ನೆಟ್ ಯುಗದಲ್ಲಿ ಯಾವುದೇ ಒಂದು ಬ್ರ್ಯಾಂಡ್‌, ಒಂದು ವೀಡಿಯೋ ಅಥವಾ ಒಂದು ಐಡಿಯಾ ಬದುಕುತ್ತದೋ ಇಲ್ಲವೋ ಅನ್ನೋದನ್ನು ತೀರ್ಮಾನಿಸಲು ಇರೋದು ಕೇವಲ ಐದು ಸೆಕೆಂಡುಗಳು.

“ಐದು ಸೆಕೆಂಡ್‌ ಮಾತ್ರ ಕೊಡ್ತೀನಿ” ಅನ್ನೋದು ಜೆನ್ Zನ ಸ್ಪಷ್ಟ ಸಂದೇಶ. “ಐದು ಸೆಕೆಂಡುಗಳಲ್ಲಿ ಇಂಪ್ರೆಸ್ ಮಾಡು. ಆಗದಿದ್ದರೆ ಹೊರಟುಹೋಗು” ಎನ್ನುತ್ತೆ ಜೆನ್‌ ಝಿ. ಒಮ್ಮೆ ಗಮನ ಸೆಳೆಯಲಿಲ್ಲ ಅಂದರೆ, ಎರಡನೇ ಅವಕಾಶವೇ ಇಲ್ಲ. ವಿನಯಪೂರ್ವಕ ನಿರ್ಗಮನವೂ ಇಲ್ಲ. ನೇರವಾಗಿ ಡಿಜಿಟಲ್ ಸಮಾಧಿಗೆ. ಹೀಗಾಗಿ ನಿಧಾನವಾಗಿ ಕಥೆ ಕಟ್ಟುವ ಜಾಹೀರಾತುಗಳು ಈಗ ‘ಹಳೆಯ ಕಾಲದವು’. ಇಂದು ಮೊದಲ ಐದು ಸೆಕೆಂಡುಗಳಲ್ಲಿ ನೀವು ನಗಿಸಬೇಕು, ಅಚ್ಚರಿ ಮೂಡಿಸಬೇಕು, ದೃಶ್ಯಾತ್ಮಕವಾಗಿ ಸೆಳೆಯಬೇಕು ಅಥವಾ ಸ್ವಲ್ಪ ವಿಚಿತ್ರವಾಗಿಯಾದರೂ ಕಾಣಬೇಕು. ಇಲ್ಲದಿದ್ದರೆ ಸ್ಕಿಪ್.

ಜೆನ್ Zಗೆ ಅಟೆನ್ಷನ್‌ ಅವಧಿ ಕಡಿಮೆ ಮಾತ್ರವಲ್ಲ. ಮಾನದಂಡಗಳು ತುಂಬಾ ಹೈ. ಇವರಿಗೆ ಗಮನ ಅವಧಿ ಕಡಿಮೆ ಅನ್ನೋದು ತಪ್ಪು ಕಲ್ಪನೆ. ಅವರು ಒಂದೇ ಸಮಯದಲ್ಲಿ 10 ಆ್ಯಪ್‌, 20 ಟ್ಯಾಬ್‌ ಮತ್ತು ಅನೇಕ ನೋಟಿಫಿಕೇಶನ್‌ಗಳ ನಡುವೆ ಬೆಳೆದವರು. ಹಾಗಾಗಿ ಅವರ ನಿರೀಕ್ಷೆಗಳು ‘ಎಲೈಟ್’ ಲೆವೆಲ್‌ನಲ್ಲಿವೆ. ಅವರಿಗೆ ಬೇಕಾಗಿರುವುದು: ಕಣ್ಣುಗಳಿಗೆ ಎಸ್ಪ್ರೆಸೋ ತರಹ ಅಪ್ಪಳಿಸುವ ದೃಶ್ಯ, ಜೋರಾದ ಬಣ್ಣಗಳು, ಸೆನ್ಸರಿ ಸೌಂಡ್, ನಿಜವಾದ ಕಥೆ, ಸ್ವಲ್ಪ ಗೊಂದಲ. ಅಸಂಬದ್ಧ ಹಾಸ್ಯ ಇದ್ದರೆ ವೆಲ್‌ಕಮ್.‌

ಜಾಹೀರಾತು ಅಥವಾ ನಿಮ್ಮ ಕಂಟೆಂಟ್‌ ಮೊದಲ ಐದು ಸೆಕೆಂಡುಗಳಲ್ಲಿ ಕುತೂಹಲ ಮೂಡಿಸಲಿಲ್ಲ ಅಂದರೆ, ಆ ಕಂಟೆಂಟ್ ಸತ್ತೇಹೋಗುತ್ತೆ. ಜೆನ್ Zಗೆ ನಾಸ್ಟಾಲ್ಜಿಯಾ ಅಂದರೆ ಹಳೆಯದನ್ನು ನೆನಪಿಸಿಕೊಳ್ಳೋದು ಅಲ್ಲ, ರೀಮಿಕ್ಸ್. ಹ್ಯಾಪ್ಪಿಡೆಂಟ್‌ ಜಾಹೀರಾತಿನ ಅರಮನೆ ಸೀನ್‌, ರಮೇಶ್– ಸುರೇಶ್ ಡೈಲಾಗ್‌ಗಳು, ಪೆಪ್ಸಿಯ “ಯೇ ದಿಲ್ ಮಾಂಗೆ ಮೋರ್” ಯುಗ — ಇವೆಲ್ಲಾ ಮತ್ತೆ ವೈರಲ್ ಆಗ್ತಿರೋದು ನೆನಪಿನ ಕಾರಣಕ್ಕೆ ಅಲ್ಲ, ಮೀಮ್ ಪೊಟೆನ್ಷಿಯಲ್‌ಗಾಗಿ. ಈ ತಲೆಮಾರಿಗೆ ನಾಸ್ಟಾಲ್ಜಿಯಾ ಅಂದರೆ ಹಳೆಯದನ್ನು ಹೊಸದಾಗಿ, ಸ್ವಲ್ಪ ವ್ಯಂಗ್ಯದೊಂದಿಗೆ ನೋಡುವುದು.

ನಾಟಕೀಯ, ವಿಚಿತ್ರ, ಅಸಾಧಾರಣ 

ಇನ್ನು ಲಕ್ಸುರಿ ಬ್ರ್ಯಾಂಡ್‌ಗಳು ಈಗ ಬಿಲ್‌ಬೋರ್ಡ್‌ಗಿಂತ ಇಂಟರ್‌ನೆಟ್‌ ಮೇಲೆ ಹೆಚ್ಚು ನಂಬಿಕೆ ಇಟ್ಟಿವೆ. “ಇದು ನಿಜವೇ?” ಅನ್ನಿಸಬೇಕು. ನಂತರ ಶೇರ್ ಆಗಬೇಕು. ನಿಜವಲ್ಲದಿದ್ದರೂ ನಿಜದಂತೆ ಫೀಲ್ ಆದ್ರೆ, ಇಂಟರ್‌ನೆಟ್ ಅದನ್ನು ಬೆಳೆಸುತ್ತದೆ. ಬಣ್ಣ, ಗದ್ದಲ ಮತ್ತು ಡಿಜಿಟಲ್ ಡ್ರಾಮಾ ಇರಬೇಕು. ಜೆನ್ Zಗೆ ಇಷ್ಟವಾಗೋದು ಜ್ವರದ ಕನಸಿನಂತೆ ಕಾಣುವ ಹೆಚ್ಚು ಡ್ರಾಮಾಟಿಕ್ ದೃಶ್ಯಗಳು. ಸಾಧಾರಣ ಅಂದ್ರೆ ಬೋರ್.

ಇನ್ನು ಮಾನವೀಯ ಅನಿಸಿದ ಬ್ರ್ಯಾಂಡ್‌ಗಳೇ ಗೆಲ್ಲೋದು. ಕೆಲವು ಬ್ರ್ಯಾಂಡ್‌ಗಳು ದೃಶ್ಯಕ್ಕಿಂತ ಇಮೇಜ್‌ಗೆ ಒತ್ತು ಕೊಡುತ್ತವೆ. ಡ್ಯೂಒಲಿಂಗೋ, ಸ್ವಿಗಿ, ಜೊಮಾಟೋ — ಇವುಗಳ ನೋಟಿಫಿಕೇಶನ್‌ಗಳು ಜಾಹೀರಾತುಗಳಂತಲ್ಲದೆ ಗೆಳೆಯನ ಮೆಸೇಜ್‌ಗಳಂತೆ ಇರುತ್ತವೆ. ಜೆನ್‌ ಝಿ ಆ್ಯಪ್‌ ತೆರೆಯೋದು ಅಗತ್ಯಕ್ಕಾಗಿ ಅಲ್ಲ, ಕುತೂಹಲಕ್ಕಾಗಿ. ಬ್ರ್ಯಾಂಡ್ ಮನುಷ್ಯನಂತೆ, ಗೆಳೆಯನಂತೆ ಕಾಣಿಸಿದಾಗ ಅದು ಸ್ವೀಕಾರಾರ್ಹ ಆಗುತ್ತೆ.

ಕೊನೆಯದಾಗಿ, ಜೆನ್ Zನ ಸಂದೇಶ ಸ್ಪಷ್ಟ- ಐದೇ ಸೆಕೆಂಡ್‌ನಲ್ಲಿ ನಮ್ಮ ಗಮನ ಸೆಳೆಯಿರಿ. ವಿಷಯ ಸುಂದರವಾಗಿರಲಿ, ಜೋರಾಗಿರಲಿ, ವಿಚಿತ್ರವಾಗಿರಲಿ. ವ್ಯಕ್ತಿಗಳು ಸಹ ಅಷ್ಟೆ. ಬೋರಾಗುವಂತಿಲ್ಲ. ಇಂಟರ್‌ನೆಟ್‌ನಂತೆ ಮಾತನಾಡಿ, ಅಲ್ಗೋರಿದಮ್‌ನಂತೆ ಚಲಿಸಿ, ಮೊದಲು ಮನರಂಜಿಸಿ ಅನ್ನುತ್ತೆ ಆ ಜನರೇಶನ್.‌ ಹಾಗೆ ಮಾಡುವ ವ್ಯಕ್ತಿಗಳು ಗಮನ ಸೆಳೀತಾರೆ, ಜಾಹೀರಾತುಗಳು ಆಕರ್ಷಿಸ್ತವೆ.



Source link

Leave a Reply

Your email address will not be published. Required fields are marked *