Headlines

Bengaluru Rent ಬೆಂಗಳೂರಲ್ಲಿ 2BHK ಮನೆಗೆ ತಿಂಗಳಿಗೆ 60 ಸಾವಿರ ಬಾಡಿಗೆ, ವಿಡಿಯೋ ಮಾಡಿ ಕಾರಣ ಬಹಿರಂಗಪಡಿಸಿದ ಜೋಡಿ | Feels Like A Resort Bengaluru Couple Reveals Why They Pay Rs 60000 Rent For A 2bhk

Bengaluru Rent ಬೆಂಗಳೂರಲ್ಲಿ 2BHK ಮನೆಗೆ ತಿಂಗಳಿಗೆ 60 ಸಾವಿರ ಬಾಡಿಗೆ, ವಿಡಿಯೋ ಮಾಡಿ ಕಾರಣ ಬಹಿರಂಗಪಡಿಸಿದ ಜೋಡಿ | Feels Like A Resort Bengaluru Couple Reveals Why They Pay Rs 60000 Rent For A 2bhk



Bengaluru Rent ಬೆಂಗಳೂರಲ್ಲಿ 2BHK ಮನೆಗೆ ತಿಂಗಳಿಗೆ 60 ಸಾವಿರ ಬಾಡಿಗೆ, ವಿಡಿಯೋ ಮಾಡಿ ಕಾರಣ ಬಹಿರಂಗಪಡಿಸಿದ ಜೋಡಿ | Feels Like A Resort Bengaluru Couple Reveals Why They Pay Rs 60000 Rent For A 2bhk

ಬೆಂಗಳೂರಲ್ಲಿ 2BHK ಮನೆಗೆ ತಿಂಗಳಿಗೆ 60 ಸಾವಿರ ಬಾಡಿಗೆ, ವಿಡಿಯೋ ಮಾಡಿ ಕಾರಣ ಬಹಿರಂಗಪಡಿಸಿದ ಜೋಡಿ, ಬೆಂಗಳೂರಿನ ದುಬಾರಿ ಬಾಡಿಗೆ ಪ್ರತಿ ಬಾರಿ ಸದ್ದು ಮಾಡುತ್ತೆ. ಆದರೆ ಈ ಬಾರಿ ಈ ಮನೆಗೆ ಇಷ್ಟು ಕೊಡುವುದು ಸರಿಯಾಗಿದೆ ಎಂದಿದ್ದಾರೆ. 

ಬೆಂಗಳೂರು (ಮಾ.15) ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ದುಬಾರಿಯಾಗುತ್ತಿದೆ. ಹಲವು ಬಾರಿ ಬೆಂಗಳೂರಿನ ಬಾಡಿಗೆ ದೇಶದಲ್ಲೇ ಚರ್ಚೆಯಾಗಿದೆ. ಇಷ್ಟೇ ಅಲ್ಲ ಸೂಕ್ತ ಮನೆ ಬಾಡಿಗೆ ಪಡೆಯುವುದು ಬೆಂಗಳೂರಲ್ಲಿ ಸುಲಭವಲ್ಲ ಅನ್ನೋ ಮಾತಿದೆ. ಇದೀಗ ಜೋಡಿಯೊಂದು ತಾವು ಪ್ರತಿ ತಿಂಗಳು 2 ಬೆಡ್ ರೂಂ ಮನೆಗೆ 60 ಸಾವಿರ ಬಾಡಿಗೆ ನೀಡುತ್ತಿರುವುದಾಗಿ ಹೇಳಿದ್ದಾರೆ. ಆದರೆ 60 ಸಾವಿರಕ್ಕೆ ಈ ಮನೆ ಅರ್ಹ ಎಂದು ಎಲ್ಲರ ಹುಬ್ಬೇರಿಸಿದ್ದಾರೆ. ಇಡೀ ಅಪಾರ್ಟ್‌ಮೆಂಟ್, ಏರಿಯಾ, ಕ್ಲಬ್ ಹೌಸ್, ಗ್ರೌಂಡ್ ಸೇರಿದಂತೆ ಎಲ್ಲಾ ಸೌಲಭ್ಯಗಳ ಕುರಿತು ಜೋಡಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿದ ಜನ, 60,000 ರೂಪಾಯಿ ಬಾಡಿಗೆ ಸರಿ ಇದೆ ಎಂದಿದ್ದಾರೆ.

ಅಷ್ಟು ದುಬಾರಿ ಬಾಡಿಕೆ ಯಾಕೆ?

ಬೆಂಗಳೂರು ನಿವಾಸಿಯಾಗಿರುವ ಈ ಜೋಡಿ ವಿಡಿಯೋದ ಆರಂಭದಲ್ಲೇ ನಾವು ಯಾಕೆ ಪ್ರತಿ ತಿಂಗಳು 60,000 ರೂಪಾಯಿ ಬಾಡಿಗೆ ನೀಡುತ್ತಿದ್ದೇವೆ ಎಂದು ಹಲವರು ಪ್ರಶ್ನಿಸಿದ್ದಾರೆ. ಹೀಗಾಗಿ ಈ ವಿಡಿಯೋ ಮೂಲಕ ಕಾರಣ ಬಹಿರಂಗಪಡಿಸುತ್ತಿದ್ದೇವೆ ಎಂದಿದ್ದಾರೆ. ಜೋಡಿ ತಮ್ಮ ಮನೆ ಇರುವ ಹೌಸಿಂಗ್ ಸೊಸೈಟಿ ಕುರಿತು ವಿಡಿಯೋ ಟೂರ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ನೀಡಿರುವ ಮಾಹಿತಿ ಪ್ರಕಾರ ಈ ಜೋಡಿ ವಾಸಿಸುತ್ತಿರುವ ಹೌಸಿಂಗ್ ಸೊಸೈಟಿ 23 ಟವರ್ ಹೊಂದಿದೆ. ಪ್ರತಿ ಟವರ್‌ನಿಂದ ಮತ್ತೊಂದು ಟವರ್‌ಗೆ ಸಾಕಷ್ಟು ಅಂತರ ಇದೆ. ವಿಶಾಲವಾಗಿ ಹರಡಿಕೊಂಡಿರುವ ಪ್ರದೇಶದಲ್ಲಿ ಈ ಹೌಸಿಂಗ್ ಸೊಸೈಟಿ ನಿರ್ಮಾಣ ಮಾಡಲಾಗಿದೆ. ಇಡೀ ಪ್ರದೇಶದಲ್ಲಿ ಸಾಕಷ್ಟು ಮರ, ಗಿಡ, ಹೂವಿನ ತೂಟವಿದೆ. ಇದರಿಂದ ಉತ್ತಮ ಪರಿಸರದ ಅನುಭವವಾಗುತ್ತದೆ. ಜೊತೆಗೆ ಉತ್ತಮ ಗಾಳಿ ಬೆಳಕು, ಹೂವಿನ ಆಕರ್ಷಣೆ, ಹಚ್ಚ ಹಸಿರಿನ ಪರಿಸರ ಮನಸ್ಸಿಗೂ ಮುದ ನೀಡುತ್ತದೆ ಎಂದು ಈ ಜೋಡಿ ಹೇಳಿದೆ.

ಅತೀ ದೊಡ್ಡ ಮೈದಾನವಿದೆ. ಇಲ್ಲಿ ಫುಟ್ಬಾಲ್, ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡಗೂ ಆಡಲು ಸಾಧ್ಯವಿದೆ. ಇದಕ್ಕೆ ಬೇಕಾದ ಎಲ್ಲಾ ಸೌಲಭ್ಯವೂ ಇದೆ. ಇನ್ನು ಕಾರ್ಯಕ್ರಮ ಮಾಡಲು ಬೇಕಾದ ಸ್ಥಳವಿದೆ. ಇಂಡೋರ್ ಕ್ರೀಡಾಂಗಣಗಳು ಲಭ್ಯವಿದೆ. ಕ್ಲಬ್ ಕೌಸ್, ಪಾರ್ಟಿ ಹಾಲ್, ಹೊಟೆಲ್, ರೆಸ್ಟೋರೆಂಟ್, ಗ್ರೋಸರಿ ಶಾಪ್, ತರಕಾರಿ ಸೇರಿದಂತೆ ಎಲ್ಲಾ ದಿನಸಿ ವಸ್ತುಗಳು ಈ ಹೌಸಿಂಗ್ ಸೊಸೆೈಟಿ ಒಳಗೆ ಲಭ್ಯವಿದೆ. ಇನ್ನು ವಿಶಾಲವಾದ ಸ್ವಿಮ್ಮಿಂಗ್ ಪೂಲ್, ಮಕ್ಕಳಿಗಾಗಿ ಪ್ರತ್ಯೇಕ ಪೂಲ್ ವ್ಯವಸ್ಥೆಗಳು ಇಲ್ಲಿದೆ. ಜಿಮ್ ಸೇರಿದಂತೆ ಇತರ ವ್ಯಾಯಾಮ ಸೌಲಭ್ಯಗಳು ಇಲ್ಲಿದೆ ಎಂದು ಜೋಡಿ ವಿಡಿಯೋದಲ್ಲಿ ಹೇಳಿದೆ.

ರೆಸಾರ್ಟ್‌ನಲ್ಲಿರುವ ಅನುಭವ

ಇಲ್ಲಿನ ಸ್ವಿಮ್ಮಿಂಗ್ ಪೂಲ್, ವಾತಾವರಣ ನೋಡಿದರೆ ನಮಗೆ ಕೊಡಗಿನ ಯಾವುದೊ ಒಂದು ರೆಸಾರ್ಟ್‌ನಲ್ಲಿ ಕಳೆಯುತ್ತಿರುವ ಅನುಭವವಾಗುತ್ತದೆ. ಸ್ವಚ್ಚ ಹಾಗೂ ಸುಂದರವಾದ ಹಾಗೂ ಶಾಂತ ಪರಿಸರ ಆಹ್ಲಾದಕರವಾಗಿದೆ. ಇನ್ನು ಡೂರ್ ಸ್ಟೆಪ್ ಡೆಲಿವರಿಯೂ ಲಭ್ಯವಿದೆ. ಕೆಲ ಸೌಲಭ್ಯಗಳನ್ನು ನಾವು ಉಪಯೋಗಿಸಿದ್ದರೂ ಒಟ್ಟಾರೆ ನಾವು 60 ಸಾವಿರ ರೂಪಾಯಿ ತಿಂಗಳ ಬಾಡಿ ಸರಿ ಎಂದು ನಮಗೆ ಅನಿಸುತ್ತದೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *