Headlines

Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ | Bengaluru Varthur A Fight Over A Marriage A Lover Killed His Mistress Mrq

Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ | Bengaluru Varthur A Fight Over A Marriage A Lover Killed His Mistress Mrq



Bengaluru: ಮದ್ವೆಯಾಗಿರೋ ವಿಷ್ಯ ಗೊತ್ತಿದ್ರೂ ಮನೆ ಬಿಟ್ಟು ಬಂದಿದ್ದ ಪ್ರೇಯಸಿ ಉಸಿರು ನಿಲ್ಲಿಸಿದ ಅಯ್ಯಪ್ಪ | Bengaluru Varthur A Fight Over A Marriage A Lover Killed His Mistress Mrq

ಮದುವೆ ವಿಚಾರವಾಗಿ ನಡೆದ ಜಗಳದಲ್ಲಿ ಅಯ್ಯಪ್ಪ ಎಂಬಾತ ತನ್ನ ಪ್ರೇಯಸಿ ರಂಜಿತಾಳನ್ನು ವೈಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಈಗಾಗಲೇ ಮದುವೆಯಾಗಿದ್ದ ಅಯ್ಯಪ್ಪ, ಪತ್ನಿಗೆ ವಿಚ್ಛೇದನ ನೀಡದೆ ರಂಜಿತಾ ಜೊತೆ ವಾಸಿಸುತ್ತಿದ್ದ. ವರ್ತೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ಪ್ರಿಯತಮನೇ ಪ್ರೇಯಸಿಯನ್ನು ಕೊ*ಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಬಳಿಯಲ್ಲಿ ನಡೆದಿದೆ. 24 ವರ್ಷದ ರಂಜಿತಾ ಪ್ರಿಯಕರ ಅಯ್ಯಪ್ಪನಿಂದಲ ಕೊ*ಲೆಯಾದ ಯುವತಿ. ಮೃತ ರಂಜಿತಾ ಹಾಗೂ ಆರೋಪಿ ಅಯ್ಯಪ್ಪ ಇಬ್ಬರು ಮೂಲತಃ ಕೊಡಗಿನ ಪೊನ್ನಂಪೇಟೆ ನಿವಾಸಿಗಳು. ವರ್ತೂರು ಬಳಿಯ ಡ್ರೈ ಪ್ರೂಟ್ ಅಂಗಡಿಯಲ್ಲಿ ಸೂಪರ್‌ವೈಸರ್ ಆಗಿ ಅಯ್ಯಪ್ಪ ಕೆಲಸ ಮಾಡಿಕೊಂಡಿದ್ದನು. ಮದುವೆಯಾಗಿ ಹೆಂಡ್ತಿಯನ್ನು ಬಿಟ್ಟಿದ್ದ ಅಯ್ಯಪ್ಪ ಪಕ್ಕದೂರಿನ ರಂಜಿತಾಳನ್ನು ಪ್ರೀತಿಸುತ್ತಿದ್ದನು.

ಮದುವೆಗಾಗಿ ನಡೆದ ಜಗಳ ಕೊ*ಲೆಯಲ್ಲಿ ಅಂತ್ಯ

ಈ ಅಯ್ಯಪ್ಪನನ್ನು ಮದುವೆಯಾಗಬೇಕೆಂದು ರಂಜಿತಾ ಬೆಂಗಳೂರಿಗೆ ಬಂದಿದ್ದಳು. ಪತ್ನಿಗೆ ಡಿವೋರ್ಸ್ ನೀಡದೇ ರಂಜಿತಾ ಜೊತೆಯಲ್ಲಿಯೇ ಅಯ್ಯಪ್ಪ ಸಂಸಾರ ನಡೆಸುತ್ತಿದ್ದನು. ಮದುವೆ ವಿಚಾರವಾಗಿ ಅಯ್ಯಪ್ಪ ಮತ್ತು ರಂಜಿತಾ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಅಯ್ಯಪ್ಪ ವೈಯರ್‌ನಿಂದ ಕುತ್ತಿಗೆ ಬಿಗಿದು ರಂಜಿತಾಳನ್ನು ಕೊ*ಲೆ ಮಾಡಿದ್ದಾನೆ.

ಸದ್ಯ ಪೊಲೀಸರು ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರುಪಾಯಿ ದಂಡ

ಕನಕಪುರ ತಾಲೂಕಿನ ಕಸಬಾ ಹೋಬಳಿ ಸೋಮೇದ್ಯಾಪನಹಳ್ಳಿ ಗ್ರಾಮದಲ್ಲಿ ಕೊ*ಲೆ ಆರೋಪಿ ಪ್ರಸನ್ನ(30)ಗೆ, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಚ್.ಎನ್.ಕುಮಾರ್ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರುಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಕೊ*ಲೆ ಆರೋಪಿ ಪ್ರಸನ್ನನಿಗೂ ಆತನ ದೊಡ್ಡಪ್ಪ ಕೆಂಪೇಗೌಡನ ಮಧ್ಯೆ ವೈಮನಸ್ಯವಿದ್ದು, ತಿಪ್ಪೆಯಿಂದ ರಸ್ತೆಗೆ ಗೊಬ್ಬರ ಸಾಗಿಸಲು ಕೆಂಪೇಗೌಡನಿಗೆ ಸೇರಿದ ಜಾಗದಲ್ಲಿ ಹೋಗಬೇಕಾಗಿದ್ದು ಇದಕ್ಕೆ ಅವಕಾಶ ನೀಡದ ದೊಡ್ಡಪ್ಪನನ್ನು ಬಿದುರು ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಪರಿಣಾಮ ಕೆಂಪೇಗೌಡ ಮೃತಪಟ್ಟಿದ್ದರು. 

ಇದನ್ನೂ ಓದಿ: ಹಾಯ್, ಹೆಲೋ ಅಂತಾಳೆ, ಲಾಡ್ಜ್‌ಗೆ ಕರೀತಾಳೆ; ಸ್ನಾನ ಮಾಡಿ ಅಂತ ಬಟ್ಟೆ ಬಿಚ್ಚಿಸ್ತಾಳೆ!

ಈ ಹಿನ್ನೆಲೆಯಲ್ಲಿ ಕನಕಪುರ ಗ್ರಾಮಾಂತರ ಠಾಣೆಗೆ ಮೃತನ ಪತ್ನಿ ಶಿವಮ್ಮ ನೀಡಿದ ದೂರನ್ನು ಅಂದಿನ ಪಿಎಸ್ಐ ಅನಂತರಾಮು ಅವರಿಗೆ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದರು. 

ಗುರುವಾರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ವಕೀಲರಾದ ಎಂ.ಕೆ. ರೂಪಾಲಕ್ಷ್ಮಿ ವಾದ ಮಂಡಿಸಿದ್ದರು. ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣವನ್ನು ಬೆಳಕಿಗೆ ತಂದ ಪೋಲಿಸ್ ಪಿಎಸ್ಐ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.

ಇದನ್ನೂ ಓದಿ: 18 ವರ್ಷ ತುಂಬದ ಮೊನಾಲಿಸಾಗೆ ಫರ್ಮಾನ್ ಜೊತೆ ಮದ್ವೆ ಮಾಡಿಸಿದ್ರಾ? ವೈರಲ್ ಸುಂದರಿ ವಯಸ್ಸೆಷ್ಟು?



Source link

Leave a Reply

Your email address will not be published. Required fields are marked *