KSRTC ವೀಕೆಂಡ್ ಟೂರ್ ಪ್ಯಾಕೇಜ್: ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ! | Ksrtc Bangalore Weekend Package Tours Route Details Ticket Price And Booking Sat

KSRTC ವೀಕೆಂಡ್ ಟೂರ್ ಪ್ಯಾಕೇಜ್: ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ! | Ksrtc Bangalore Weekend Package Tours Route Details Ticket Price And Booking Sat



KSRTC ವೀಕೆಂಡ್ ಟೂರ್ ಪ್ಯಾಕೇಜ್: ಕಡಿಮೆ ದರದಲ್ಲಿ ತಲಕಾಡು, ಮೇಲುಕೋಟೆ, ಚಿಕ್ಕತಿರುಪತಿ ಪ್ರವಾಸ! | Ksrtc Bangalore Weekend Package Tours Route Details Ticket Price And Booking Sat

ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸ ಕೈಗೊಳ್ಳುವವರಿಗಾಗಿ ಕೆಎಸ್‌ಆರ್‌ಟಿಸಿ ಕಡಿಮೆ ದರದಲ್ಲಿ ವಿಶೇಷ ಪ್ಯಾಕೇಜ್ ಟೂರ್‌ಗಳನ್ನು ಆರಂಭಿಸಿದೆ. ಪ್ರತಿ ಶನಿವಾರ ಮತ್ತು ಭಾನುವಾರದಂದು ಲಭ್ಯವಿರುವ ಈ ಪ್ರವಾಸಗಳು ಗಗನಚುಕ್ಕಿ-ಭರಚುಕ್ಕಿ, ಕೋಟಿಲಿಂಗೇಶ್ವರ, ಮತ್ತು ಮೇಲುಕೋಟೆಯಂತಹ ಪ್ರಮುಖ ತಾಣಗಳನ್ನು ಒಳಗೊಂಡಿವೆ.

ಬೆಂಗಳೂರು (ಫೆ.13): ವಾರಾಂತ್ಯ ಬಂತೆಂದರೆ ಸಾಕು ಬೆಂಗಳೂರಿಗರು ನಗರದ ಗದ್ದಲದಿಂದ ದೂರ ಎಲ್ಲಾದರೂ ಒಂದು ದಿನದ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಾರೆ. ಅಂತಹ ಪ್ರವಾಸ ಪ್ರಿಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಅತ್ಯಂತ ಕಡಿಮೆ ದರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ವಿಶೇಷ ‘ಪ್ಯಾಕೇಜ್ ಟೂರ್’ ಸೇವೆಗಳನ್ನು ಪರಿಚಯಿಸಲಾಗಿದೆ.

ಈ ಪ್ಯಾಕೇಜ್ ಟೂರ್‌ಗಳು ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಕಾರ್ಯಾಚರಣೆ ನಡೆಸಲಿದ್ದು, ನಗರದ ನಿವಾಸಿಗಳಿಗೆ ಒಂದು ದಿನದ ಪ್ರವಾಸವನ್ನು ಅತ್ಯಂತ ಸುಲಭವಾಗಿ ಮತ್ತು ಸುರಕ್ಷಿತವಾಗಿ ಪೂರೈಸಲು ಸಹಾಯವಾಗಲಿದೆ. ನಿಗಮವು ಇದಕ್ಕಾಗಿ ‘ರಾಜಹಂಸ’ ಮತ್ತು ‘ಅಶ್ವಮೇಧ ಕ್ಲಾಸಿಕ್’ ಬಸ್‌ಗಳನ್ನು ನಿಯೋಜಿಸಿದೆ.

ಯಾವೆಲ್ಲಾ ಪ್ಯಾಕೇಜ್‌ಗಳು ಲಭ್ಯ?

1. ಗಗನಚುಕ್ಕಿ – ಭರಚುಕ್ಕಿ – ತಲಕಾಡು ಪ್ರವಾಸ:

ಈ ಪ್ರವಾಸದಲ್ಲಿ ಬೆಂಗಳೂರಿನಿಂದ ಹೊರಟು ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತಗಳನ್ನು ವೀಕ್ಷಿಸಬಹುದು. ಒಟ್ಟು 340 ಕಿ.ಮೀ ಪ್ರಯಾಣ ಇದಾಗಿದೆ. ರಾಜಹಂಸ ಬಸ್‌ನಲ್ಲಿ ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ ಪ್ರಯಾಣಿಸಿದರೆ ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ಟಿಕೆಟ್ ದರವಿರುತ್ತದೆ.

2. ಚಿಕ್ಕತಿರುಪತಿ – ಕೋಟಿಲಿಂಗೇಶ್ವರ ಧಾರ್ಮಿಕ ಪ್ರವಾಸ:

ಧಾರ್ಮಿಕ ಆಸಕ್ತಿ ಹೊಂದಿರುವವರಿಗಾಗಿ ಕೋಲಾರ ಜಿಲ್ಲೆಯ ಪ್ರಮುಖ ತಾಣಗಳನ್ನು ಒಳಗೊಂಡ ಈ ಪ್ಯಾಕೇಜ್ ಸೂಕ್ತವಾಗಿದೆ. ಬೆಂಗಳೂರಿನಿಂದ ಹೊರಟು ಚಿಕ್ಕತಿರುಪತಿ, ಕೋಟಿಲಿಂಗೇಶ್ವರ, ಬಂಗಾರುತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ ಮತ್ತು ಕೋಲಾರಕ್ಕೆ ಭೇಟಿ ನೀಡಲಾಗುತ್ತದೆ. ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ 270 ಕಿ.ಮೀ ಪ್ರಯಾಣಕ್ಕೆ ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ದರವಿದೆ.

3. ಮೇಲುಕೋಟೆ – ಶ್ರೀರಂಗಪಟ್ಟಣ ಪ್ರವಾಸ:

ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ವೀಕ್ಷಣೆಗಾಗಿ ಈ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಇದು ಬೆಂಗಳೂರು, ಶ್ರೀರಂಗಪಟ್ಟಣ, ಕಲ್ಲಹಳ್ಳಿ ಮತ್ತು ಮೇಲುಕೋಟೆ ತಾಣಗಳನ್ನು ಒಳಗೊಂಡಿದೆ. 350 ಕಿ.ಮೀ ದೂರದ ಈ ಪ್ರವಾಸಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್‌ನಲ್ಲಿ ವಯಸ್ಕರಿಗೆ 670 ರೂ. ಹಾಗೂ ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.

ಗಮನಿಸಬೇಕಾದ ಅಂಶಗಳು:

ಈ ಟಿಕೆಟ್ ದರವು ಕೇವಲ ಬಸ್ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಪ್ರೇಕ್ಷಣೀಯ ಸ್ಥಳಗಳ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವೆಚ್ಚವನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ. ಈಗಾಗಲೇ ಈ ಪ್ಯಾಕೇಜ್‌ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಬುಕಿಂಗ್ ಹೇಗೆ?

ಆಸಕ್ತರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ https://ksrtc.in/ ಅಥವಾ www.ksrtc.karnataka.gov.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 080-26252625, 7760990100 / 7760990560 / 7760990287. ಕಡಿಮೆ ಖರ್ಚಿನಲ್ಲಿ ವಾರಾಂತ್ಯವನ್ನು ಅರ್ಥಪೂರ್ಣವಾಗಿ ಕಳೆಯಲು ಬಯಸುವವರಿಗೆ ಕೆಎಸ್‌ಆರ್‌ಟಿಸಿಯ ಈ ಪ್ಯಾಕೇಜ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ.



Source link

Leave a Reply

Your email address will not be published. Required fields are marked *