
ಭಾರತೀಯರ ಬೆಡ್ ರೂಂಗೆ ತಟ್ಟಿದ ಇರಾನ್ ಯುದ್ಧ ಬಿಸಿ, ಕಾಂಡೋಮ್ ಕೊರತೆಗೆ ಕಂಗಾಲು, ಕಾಂಡೋಮ್ ಕಚ್ಚಾವಸ್ತುಗಳ ಪೂರೈಕೆ ಕೊರತೆ ಭಾರತದ ಉತ್ಪಾದಕ ಕಂಪನಿಗಳಿಗೆ ತಟ್ಟಿದೆ. ಇದೀಗ ಬೆಲೆ ಏರಿಕೆ ಬಿಸಿ ಶುರುವಾಗಿದೆ.
ನವದೆಹಲಿ (ಏ.03) ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಯುದ್ಧ ಜಗತ್ತಿನ ಹಲವು ದೇಶಗಳಿಗೆ ಸಂಕಷ್ಟ ನೀಡಿದೆ. ಆರಂಭದಲ್ಲಿ ಭಾರತೀಯರ ಹೊಟೆಲ್ ಅಡುಗೆ ಕೋಣೆಗೆ ಯುದ್ಧದ ಬಿಸಿ ತಟ್ಟಿತ್ತು. ಬಳಿಕ ಸಾರಿಗೆ ಸೇರಿದಂತೆ ಹಲವು ರೀತಿಯಲ್ಲಿ ಯುದ್ಧ ತಲೆನೋವಾಗಿ ಪರಿಣಿಸಿದೆ. ಇದೀಗ ಭಾರತೀಯರ ಬೆಡ್ ರೂಂಗೂ ಯುದ್ಧದ ಬಿಸಿ ತಟ್ಟಿದೆ. ಹೊರ್ಮುಜ್ ಜಲಸಂಧಿ ಮೂಲಕ ಸರಕು ಸಾಗಣೆ ಸವಾಲಾಗಿದ್ದು, ಭಾರತದ ಕಾಂಡೋಮ್ ಕಂಪನಿಗಳು ಉತ್ಪಾದನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಕಾಂಡೋಮ್ ಕಚ್ಚಾವಸ್ತುಗಳ ಪೂರೈಕೆಯಾಗದೇ ಉತ್ಪಾದನೆ ಅರ್ಧಕ್ಕೆ ಕುಸಿದಿದೆ.
ವಾರ್ಷಿಕ 400 ಕೋಟಿ ಕಾಂಡೋಮ್ ಉತ್ಪಾದನೆ
ಭಾರತ ವಾರ್ಷಿಕವಾಗಿ 400 ಕೋಟಿ ಕಾಂಡೋಮ್ ಉತ್ಪಾದನೆ ಮಾಡುತ್ತದೆ. ಕಾಂಡೋಮ್ ಉತ್ಪಾದನೆಯ ಪ್ರಮುಖ ಕಚ್ಚಾವಸ್ತುಗಳಾದ ಸಿಲ್ಕಾನ್ ಆಯಿಲ್ ಹಾಗೂ ಅಮೊನಿಯಾ ಇದೇ ಹಾರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ ಸಾಗಿ ಬರುತ್ತಿತ್ತು. ಆದರೆ ಯುದ್ಧದಿಂದ ಈ ಸರಕು ಸಾಗಣೆಯಲ್ಲಿ ವ್ಯತ್ಯಯವಾಗಿದೆ. ಪೂರೈಕೆಯಾಗದೇ ಕಾಂಡೋಮ್ ಉತ್ಪಾದನೆಗೆ ಸಮಸ್ಯೆಯಾಗುತ್ತಿದೆ. ಇದರ ಪರಿಣಾಮ ಬೇರೆಡೆಗಳಿಂದ ಆಮದು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದರಿಂದ ವೆಚ್ಚ ದುಬಾರಿಯಾಗಿದ್ದು, ಕಾಂಡೋಮ್ ದರಲದಲ್ಲಿ ಶೇಕಡಾ 40 ರಿಂದ 50ರಷ್ಟು ಏರಿಕೆ ಸಾಧ್ಯತೆ ಇದೆ.
ಭಾರತದ ಕಾಂಡೋಮ್ ಉತ್ಪಾದನೆಯಲ್ಲಿ ಶೇಕಡಾ 35ರಷ್ಟು ಕುಸಿತ ಕಂಡಿದೆ. ಭಾರತ ಕಚ್ಚಾ ವಸ್ತುಗಳ ಆಮದು ಮಾಡಿಕೊಂಡು ಕಾಂಡೋಮ್ ಉತ್ಪಾದಿಸುತ್ತದೆ. ಭಾರತವೇ ಕಾಂಡೋಮ್ ಬಳಕೆಯ ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಇಷ್ಟೇ ಅಲ್ಲ ನೆರೆಯ ಕೆಲ ರಾಷ್ಟ್ರಗಳಿಗೆ ಭಾರತ ಕಾಂಡೋಮ್ ರಫ್ತು ಮಾಡುತ್ತದೆ. ಇದೀಗ ಭಾರತದಲ್ಲಿ ಉತ್ಪಾದನೆ ಕುಸಿದಿದೆ.
8000 ಕೋಟಿ ರೂಪಾಯಿ ಕ್ಷೇತ್ರ
ಭಾರತದ ಕಾಂಡೋಮ್ ಇಂಡಸ್ಟ್ರೀ ವಾರ್ಷಿಕ ವ್ಯವಹಾರ ಬರೋಬ್ಬರಿ 8000 ಕೋಟಿ ರೂಪಾಯಿ. ಭಾರತ ಹಾಗೂ ವಿದೇಶಗಳಿಗೂ ಕಾಂಡೋಮ್ ರಫ್ತು ಮಾಡುತ್ತಿರುವ ಭಾರತ ಇದೀಗ ಕಚ್ಚಾ ವಸ್ತುಗಳು ಸಿಗದೆ ಪರದಾಡುತ್ತಿದೆ. ಇತ್ತ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾದ ಪರಿಸ್ಥಿತಿ ಮುಂದಾಗಿದೆ. ಇದರಿಂದ ಕಾಂಡೋಮ್ ಬಳಕೆ ಕಡಿಮೆಯಾಗುವ ಸಾಧ್ಯತೆ ಮಾತ್ರವಲ್ಲ, ದೇಶದಲ್ಲಿ ಲೈಂಗಿಕ ಆರೋಗ್ಯ ಸಮಸ್ಯೆಗಳು ಗಂಭೀರತೆ ಪಡೆಯುವ ಸಾಧ್ಯತೆಗಳು ಹೆಚ್ಚು. ಕಾಂಡೋಮ್ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಬೇಕು ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.