Lakkundi ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ | Lascaux Caves Before Lakkundi Dog Youth Uncovered 17000 Year Old Human Artwork

Lakkundi ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ | Lascaux Caves Before Lakkundi Dog Youth Uncovered 17000 Year Old Human Artwork



Lakkundi ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, 17000 ವರ್ಷ ಹಿಂದಿನ ಅಮೂಲ್ಯ ಸಂಪತ್ತು ಪತ್ತೆ ಹಚ್ಚಿದ್ದ ನಾಯಿ | Lascaux Caves Before Lakkundi Dog Youth Uncovered 17000 Year Old Human Artwork

ಲಕ್ಕುಂಡಿಗೂ ಮೊದಲು ನಡೆದಿತ್ತು ಅಚ್ಚರಿ, ಬರೋಬ್ಬರಿ 17,000 ವರ್ಷಗಳ ಹಿಂದಿನ ಅತೀ ಅಮೂಲ್ಯ ಸಂಪತ್ತನ್ನು ನಾಯಿ ಹಾಗೂ 18ರ ಯುವಕ ಪತ್ತೆ ಹಚ್ಚಿದ್ದ ಘಟನೆ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಏನಿದು ಘಟನೆ?

ಲ್ಯಾಸಾಕ್ಸ್ (ಫೆ.02) ಗದಗದ ಲಕ್ಕುಂಡಿಯಲ್ಲಿ ಚಿನ್ನಾಭರಣ ನಿಧಿ ಪತ್ತೆಯಾದ ಬಳಿಕ ನಡೆಯುತ್ತಿರುವ ಉತ್ಖನನದಲ್ಲಿ ಅಪರೂಪದ ರಾಜಮಹಾರಾಜರ ಕಾಲದ ವಸ್ತುಗಳು ಪತ್ತೆಯಾಗಿದೆ. ಹಲವು ದೇವಸ್ಥಾನಗಳ ಅವಶೇಷಗಳು, ನಾಗಶಿಲೆ ಸೇರಿದಂತೆ ಐತಿಹಾಸಿಕ ಹಾಗೂ ಇತಿಹಾಸದ ಪುರಾತನ ವಸ್ತುಗಳು ಇಡೀ ವಿಶ್ವದ ಕುತೂಹಲ ಹೆಚ್ಚಿಸಿದೆ. ಆದರೆ ಲಕ್ಕುಂಡಿಗೂ ಮೊದಲು ಜಗತ್ತನ್ನೇ ಬೆಚ್ಚಿ ಬೀಳಿಸಿದ ಹಾಗೂ ಇಡೀ ಮಾನವ ಸಂಕುಲದ ಹುಟ್ಟು, ಇತಿಹಾಸ, ಬೆಳವಣಿಗೆಯನ್ನು ಮರುವಾಖ್ಯಾನಿಸುವ ಅಮೂಲ್ಯ ಸಂಪತ್ತು ಪತ್ತೆಯಾಗಿತ್ತು. 18ರ ಪೋರ ತನ್ನ ನಾಯಿ ಜೊತೆ ಕಾಡಿನಲ್ಲಿ ಸುತ್ತಾಡುತ್ತಿರುವಾಗ ಅಚಾನಕ್ಕಾಗಿ ಗುಹೆಯೊಳಕ್ಕೆ ಹೋದ ನಾಯಿ ಹುಡುಕಲು ಹೋದಾಗ ಈ ಸಂಪತ್ತು ಪತ್ತೆಯಾಗಿತ್ತು. ಲಕ್ಕುಂಡಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಲಾಸಾಕ್ಸ್ ಮತ್ತೆ ಮುನ್ನಲೆಗೆ ಬಂದಿದೆ.

ಲಾಸಾಕ್ಸ್ ಗುಹೆ ಘಟನೆ

ಲಾಸಾಕ್ಸ್ ಗುಹೆ ಅತ್ಯಂತ ಜನಪ್ರಿಯ. ಈ ಗುಹೆಯಲ್ಲಿ ಬರೋಬ್ಬರಿ 17 ರಿಂದ 19 ಸಾವಿರ ವರ್ಷಗಳಷ್ಟು ಹಳೇಯ ಮಾನವ ರಚಿಸಿದ ಕಲಾಕೃತಿಗಳು ಪತ್ತೆಯಾಗಿತ್ತು. ಅಂದರೆ ಬರೋಬ್ಬರಿ 17 ರಿಂದ 19 ಸಾವಿರ ವರ್ಷಗಳ ಹಿಂದೆ ಮಾನವನ ಇರುವಿಕೆ, ಪೈಟಿಂಗ್ಸ್, ಕಲೆ ಎಲ್ಲವೂ ಭಾರಿ ಜನಪ್ರಿಯತೆ ಪಡೆದಿತ್ತು ಅನ್ನೋದು ಸ್ಪಷ್ಟವಾಗಿತ್ತು. ಈ ಗುಹೆಯಲ್ಲಿ ಮಾನವ ರಚಿಸಿದ ಬರೋಬ್ಬರಿ 2,000ಕ್ಕೂ ಹೆಚ್ಚು ಚಿತ್ರಗಳಿವೆ.

ಪತ್ತೆ ಹಚ್ಚಿದ್ದು ಯಾವಾಗ?

ಲಾಸೆಕ್ಸ್ ಗುಹೆ ಫ್ರಾನ್ಸ್‌ನ ಮಾಂಟಿಗ್ನಾಕ್ ಪ್ರದೇಶದಲ್ಲಿದೆ. ಮಾರ್ಸೆಲ್ ರಾವಿಡಾಟ್ ಅನ್ನೋ 18ರ ಹರೆಯದ ಯುವಕ ತನ್ನ ನಾಯಿ ಜೊತೆ ಕಾಡಿನಲ್ಲಿ ಸುತ್ತಾಡುತ್ತಿದ್ದ. ಸಾಮಾನ್ಯವಾಗಿ ಬೇಟೆಯಾಡಲು ಎಲ್ಲಾ ತಯಾರಿಯೊಂದಿಗೆ ರಾವಿಡಾಟ್ ತನ್ನ ಮುದ್ದಿನ ನಾಯಿ ರೊಬೋಟ್ ಜೊತೆ 1940, ಸೆಪ್ಟೆಂಬರ್ 12ರಂದು ಕಾಡಿನಲ್ಲಿ ಸುತ್ತಾಟ ಆರಂಭಿಸಿದ. ಈ ವೇಳೆ ಅಚಾನಕ್ಕಾಗಿ ಕಾಡಿನಲ್ಲಿ ಆತನ ಮುದ್ದಿ ನಾಯಿ ರೋಬೋಟ್ ಓಟ ಶುರುಮಾಡಿತ್ತು. ಕೆಲ ದೂರದಲ್ಲಿ ದೊಡ್ಡ ಗಾತ್ರದ ಮರವೊಂದು ಮುರಿದು ಬಿದ್ದಿತ್ತು. ಈ ಮರದ ಪಕ್ಕದಲ್ಲೇ ದೊಡ್ಡ ರಂಧ್ರವೊಂದಿತ್ತು. ಈ ರಂಧ್ರದೊಳಗೆ ನಾಯಿ ಓಡಿ ಹೋಗಿತ್ತು. ನಾಯಿ ಹಿಂಬಾಲಿಸಿದ ರಾವಿಡಾಟ್ ಮರದ ಪಕ್ಕದಲ್ಲಿದ್ದ ರಂಧ್ರದ ಪಕ್ಕ ಬಂದಿದ್ದಾನೆ. ಒಳಗೆ ಹೋಗಲು ಕೊಂಚ ಭಯವಾಗಿದೆ. ಕಾರಣ ಈ ರಂಧ್ರದೊಳಗೆ ಹಾವು ಸೇರಿದಂತೆ ಇತರ ಪ್ರಾಣಿಗಳಿರಬಹುದು ಅನ್ನೋ ಆತಂಕ ಕಾಡಿದೆ. ಧೈರ್ಯ ಮಾಡಿ ಕೆಲ ದೂರ ಹೋಗಿದ್ದಾನೆ. ಈ ವೇಳೆ ಅಚ್ಚರಿ ತೆರೆದುಕೊಂಡಿದೆ. ಕಾರಣ ಈ ಗುಹೆ ಒಳಗೆ ಮಾನವ ನಿರ್ಮಿಸಿದ ಕಲಾಕೃತಿಗಳು ಪತ್ತೆಯಾಗಿದೆ.

ನಾಯಿ ಕರೆದುಕೊಂಡು ಬಂದ ರಾವಿಡಾಟ್ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿ ನಾಲ್ವರು ಸ್ನೇಹಿತರ ಜೊತೆ ಮತ್ತೆ ಅದೆ ಗುಹೆ ಪ್ರವೇಶ ಮಾಡಿದ್ದ. ಈ ವೇಳೆ ಗುಹೆಯಲ್ಲಿರುವ ಅತ್ಯಮೂಲ್ಯ ಸಂಪತ್ತು ಬಹಿರಂಗವಾಗಿತ್ತು. ಈ ಮಾಹಿತಿ ಫ್ರಾನ್ಸ್ ಸರ್ಕಾರದ ಗಮನಕ್ಕೂ ಬಂದಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗುಹೆಯನ್ನು ಸ್ವಚ್ಚಗೊಳಿಸಿ ಪ್ರವಾಸಿ ತಾಣವನ್ನಾಗಿ ಮಾಡಿತ್ತು. ಆದರೆ ಪ್ರವಾಸಿಗರು ನಿರಂತರ ಆಗಮನದಿಂದ ಗುಹೆ ನೈಜತೆ ಹಾಗೂ ಕಲಾಕೃತಿಗಳು ನಷ್ಟವಾಗಲಿದೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದರು. ಹೀಗಾಗಿ 1963ರಲ್ಲಿ ಈ ಗುಹೆ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಯಿತು. ಈ ಗುಹೆ ಮಾನವರ ಕಲಾಕೃತಿ, ಜೀವನ ಶೈಲಿ ಹಾಗೂ ಇತಿಹಾಸದ ಬಗ್ಗೆ ಸಂಶೋಧನೆಗೆ ಪ್ರಮುಖ ವಸ್ತುವಾಗಿದೆ.



Source link

Leave a Reply

Your email address will not be published. Required fields are marked *