Headlines

ಛತ್ತೀಸ್‌ಗಢದ ಕೊನೆಯ ನಕ್ಸಲ್‌ ನಾಯಕ ಪಾಪಾ ರಾವ್ ಶರಣು- ಮಾ.31ರೊಳಗೆ ಛತ್ತೀಸ್‌ಗಢ ನಕ್ಸಲ್‌ ಮುಕ್ತ: ಡಿಸಿಎಂ | Papa Rao Last Major Naxal Leader In Chhattisgarh Surrenders To Authorities

ಛತ್ತೀಸ್‌ಗಢದ ಕೊನೆಯ ನಕ್ಸಲ್ ನಾಯಕ ಎನ್ನಿಸಿಕೊಂಡಿರುವ ಹಿರಿಯ ಮಾವೋವಾದಿ ಕಮಾಂಡರ್‌ ಪಾಪಾ ರಾವ್‌, ತನ್ನ ತಂಡದ ಸದಸ್ಯರ ಜತೆ ಮಂಗಳವಾರ ಶರಣಾಗಿದ್ದಾನೆ. ಉಪಮುಖ್ಯಮಂತ್ರಿ ವಿಜಯ್‌ ಶರ್ಮಾ, ರಾವ್‌ ಶರಣಾಗತಿ ನಕ್ಸಲ್‌ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ ಎಂದಿದ್ದಾರೆ.

ರಾಯ್‌ಪುರ : ಛತ್ತೀಸ್‌ಗಢದ ಕೊನೆಯ ನಕ್ಸಲ್ ನಾಯಕ ಎನ್ನಿಸಿಕೊಂಡಿರುವ ಹಿರಿಯ ಮಾವೋವಾದಿ ಕಮಾಂಡರ್‌ ಪಾಪಾ ರಾವ್‌, ತನ್ನ ತಂಡದ ಸದಸ್ಯರ ಜತೆ ಮಂಗಳವಾರ ಶರಣಾಗಿದ್ದಾನೆ.

ನಕ್ಸಲ್‌ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ

ಈ ಬಗ್ಗೆ ಮಾತನಾಡಿರುವ ಉಪಮುಖ್ಯಮಂತ್ರಿ ವಿಜಯ್‌ ಶರ್ಮಾ, ರಾವ್‌ ಶರಣಾಗತಿ ನಕ್ಸಲ್‌ ವಿರೋಧಿ ಹೋರಾಟದಲ್ಲಿ ಮಹತ್ವದ ಹೆಜ್ಜೆ. ಈ ಮೂಲಕ ಮಾ.31ರ ವೇಳೆಗೆ ಛತ್ತೀಸ್‌ಗಢ ನಕ್ಸಲ್‌ ಮುಕ್ತವಾಗಲಿದೆ ಎಂದಿದ್ದಾರೆ.

ನಕ್ಸಲ್‌ ಕಾರ್ಯಚಟುವಟಿಕೆ ಇರುವುದಿಲ್ಲ

ಕಬೀರ್‌ಧಾಮ್‌ ಜಿಲ್ಲೆಯ ಇಲ್ಲಿಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪಾ ರಾವ್‌ ಶಸ್ತ್ರಾಸ್ತ್ರ ತ್ಯಾಗದಿಂದ ರಾಜ್ಯದಲ್ಲಿ ಯಾವುದೇ ನಕ್ಸಲ್‌ ಕಾರ್ಯಚಟುವಟಿಕೆ ಇರುವುದಿಲ್ಲ ಎಂದು ಸ್ಪಷ್ಟವಾಗುತ್ತದೆ. ಇದು ಎಡಪಂಥೀಯ ಉಗ್ರರ ಜತೆ ರಾಜ್ಯ ನಡೆಸುತ್ತಿರುವ ಹೋರಾಟಕ್ಕೆ ಹೊಸ ಮೈಲಿಗಲ್ಲಾಗಲಿದೆ ಎಂದಿದ್ದಾರೆ.

ಬಸ್ತರ್‌ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಪಾಪಾ ರಾವ್‌ ತನ್ನ ಮಾವೋವಾದಿಗಳ ದಂಡಕಾರಣ್ಯ ವಿಶೇಷ ವಲಯ ಸಮಿತಿಯ 12ಕ್ಕೂ ಹೆಚ್ಚು ಸದಸ್ಯರ ಜತೆ ಶರಣಾಗಿದ್ದಾನೆ. ಆತ 25 ವರ್ಷಗಳಿಂದ ನಕ್ಸಲ್‌ ಹೋರಾಟದಲ್ಲಿದ್ದು, ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿ 76ಕ್ಕೂ ಹೆಚ್ಚು ಸೈನಿಕರ ಸಾವಿಗೆ ಕಾರಣನಾಗಿದ್ದಾನೆ. ಈತನ ಹಿಡಿದು ಕೊಟ್ಟವರಿಗೆ 25 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.

Source link

Leave a Reply

Your email address will not be published. Required fields are marked *