Headlines

ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ ಹಿಂದೆಂದಿಗಿಂತ ದುಬಾರಿ! ಗರಿಷ್ಠ ಟಿಕೆಟ್ ಬೆಲೆ ಕೇವಲ ₹47,000 | Royal Challengers Bengaluru Ipl 2026 Ticket Prices Surge Chinnaswamy Stadium Tickets Up To 47000 Rupees Kvn

ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ ಹಿಂದೆಂದಿಗಿಂತ ದುಬಾರಿ! ಗರಿಷ್ಠ ಟಿಕೆಟ್ ಬೆಲೆ ಕೇವಲ ₹47,000 | Royal Challengers Bengaluru Ipl 2026 Ticket Prices Surge Chinnaswamy Stadium Tickets Up To 47000 Rupees Kvn



ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ ಹಿಂದೆಂದಿಗಿಂತ ದುಬಾರಿ! ಗರಿಷ್ಠ ಟಿಕೆಟ್ ಬೆಲೆ ಕೇವಲ ₹47,000 | Royal Challengers Bengaluru Ipl 2026 Ticket Prices Surge Chinnaswamy Stadium Tickets Up To 47000 Rupees Kvn

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್‌ಸಿಬಿ ಪಂದ್ಯಗಳ ಟಿಕೆಟ್ ದರಗಳು ಹಿಂದೆಂದಿಗಿಂತಲೂ ದುಬಾರಿಯಾಗಿವೆ. ಕನಿಷ್ಠ ದರ ₹3750 ರಿಂದ ಆರಂಭವಾಗಿ ಗರಿಷ್ಠ ₹47,000 ವರೆಗೆ ತಲುಪಲಿದ್ದು, ಬೇಡಿಕೆಗೆ ಅನುಗುಣವಾಗಿ ‘ಡೈನಮಿಕ್‌ ಪ್ರೈಸಿಂಗ್‌’ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ತವರಿನ ಪಂದ್ಯಗಳನ್ನು ವೀಕ್ಷಿಸಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಬೇಕು ಅಂದುಕೊಂಡಿರುವವರು ಈ ಹಿಂದಿನ ಆವೃತ್ತಿಗಳಿಗಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲು ಸಿದ್ಧರಾಗಬೇಕು. ಕಾರಣ, ಟಿಕೆಟ್‌ ದರ ಈ ಹಿಂದಿನ ಎಲ್ಲ ಆವೃತ್ತಿಗಳಿಗಿಂತಲೂ ದುಬಾರಿಯಾಗಿರಲಿದೆ ಎಂದು ತಿಳಿದುಬಂದಿದೆ.

ಆರ್‌ಸಿಬಿ ಟಿಕೆಟ್ ಹಿಂದೆಂದಿಗಿಂತಲೂ ದುಬಾರಿ

ಆರ್‌ಸಿಬಿ ತವರಿನ ಪಂದ್ಯದ ಟಿಕೆಟ್‌ಗಳ ಕನಿಷ್ಠ ಮೊತ್ತ ₹3750, ಗರಿಷ್ಠ ಮೊತ್ತ ₹47,000 ಆಗಿರಲಿದೆ ಎಂದು ಹೇಳಲಾಗುತ್ತಿದೆ. ಕ್ರೀಡಾಂಗಣದ ನಾಲ್ಕು ಸ್ಟ್ಯಾಂಡ್‌ಗಳ ಟಿಕೆಟ್‌ ದರ ₹3750, ಎರಡು ಸ್ಟ್ಯಾಂಡ್‌ಗಳ ಟಿಕೆಟ್‌ ದರ ₹6000, ಮತ್ತೆರಡು ಸ್ಟ್ಯಾಂಡ್‌ಗಳ ದರ ತಲಾ ₹12000 ನಿಗದಿಯಾಗಿದೆ. ₹15,000, ₹25,000, ₹27,500 ಹಾಗೂ ₹47,000 ಟಿಕೆಟ್‌ಗಳಿರುವ ತಲಾ ಒಂದು ಸ್ಟ್ಯಾಂಡ್‌ಗಳು ಇರಲಿವೆ ಎನ್ನಲಾಗಿದೆ.

ಡೈನಮಿಕ್‌ ಪ್ರೈಸಿಂಗ್‌: 

ವಿಮಾನ ಟಿಕೆಟ್‌ ಬುಕಿಂಗ್‌ ವೇಳೆ ಬೇಡಿಕೆಗೆ ತಕ್ಕಂತೆ ದರ ಹೆಚ್ಚಿಗೆ ಮಾಡಲಾಗುತ್ತದೆ. ಇದನ್ನು ಡೈನಮಿಕ್‌ ಪ್ರೈಸಿಂಗ್‌ ಎನ್ನುತ್ತಾರೆ. ಆರ್‌ಸಿಬಿ ಟಿಕೆಟ್‌ಗಳ ಖರೀದಿ ವೇಳೆಯೂ ಡೈನಮಿಕ್‌ ಪ್ರೈಸಿಂಗ್‌ ಬಳಕೆಯಾಗಲಿದೆ. ಅಂದರೆ ₹3750ರ ಟಿಕೆಟ್‌ ನಿಮಗೆ ಅದೇ ಮೊತ್ತಕ್ಕೆ ಸಿಗಲಿದೆ ಎನ್ನುವುದಕ್ಕೆ ಗ್ಯಾರಂಟಿ ಇಲ್ಲ. ಆ ಮೊತ್ತ ಗರಿಷ್ಠ ₹4875ರ ವರೆಗೂ ಏರಿಕೆ ಆಗಬಹುದು. ಅದೇ ರೀತಿ ₹47000ನ ಟಿಕೆಟ್‌ನ ದರ ಗರಿಷ್ಠ ₹65800ರ ವರೆಗೂ ಹೆಚ್ಚಳವಾಗಬಹುದು.

ಆರ್‌ಸಿಬಿ ಮ್ಯಾಚ್ ನೋಡಲು ತುದಿಗಾಲಲ್ಲಿ ನಿಂತಿರುವ ಫ್ಯಾನ್ಸ್:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಹೀಗಾಗಿ ಹಾಲಿ ಚಾಂಪಿಯನ್ ತಂಡದ ಆಟವನ್ನು ತವರಿನ ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಅದರಲ್ಲೂ ಈ ಬಾರಿಯ ಉದ್ಘಾಟನಾ ಪಂದ್ಯ ಕೂಡಾ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯುತ್ತಿದೆ. ಹೀಗಾಗಿ ಎಲ್ಲಾ ಟಿಕೆಟ್‌ಗಳು ಕೆಲವು ನಿಮಿಷಗಳಲ್ಲೇ ಸೇಲ್ ಆಗುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಅಭಿಮಾನಿಗಳ ಅಭಿಮಾನವನ್ನೇ ಬಂಡವಾಳ ಮಾಡಿಕೊಳ್ಳಲು ಫ್ರಾಂಚೈಸಿ ಸಜ್ಜಾಗಿದೆ.

ಮೊದಲೆರಡು ಪಂದ್ಯಗಳ ವೇಳಾಪಟ್ಟಿ:

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಹಂತದ ಪಂದ್ಯಗಳಲ್ಲಿ ಆರ್‌ಸಿಬಿ ಬಲಿಷ್ಠ ತಂಡಗಳನ್ನು ಎದುರಿಸಲಿದೆ.

ಮಾರ್ಚ್ 28: ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಮೊದಲ ಪಂದ್ಯ.

ಏಪ್ರಿಲ್ 05: ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಎರಡನೇ ಪಂದ್ಯ.

ಟಿಕೆಟ್ ಎಲ್ಲಿ ಮತ್ತು ಹೇಗೆ ಖರೀದಿಸಬೇಕು?

ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ (X) ಖಾತೆಯಲ್ಲಿ ತಿಳಿಸಿರುವಂತೆ, ಟಿಕೆಟ್‌ಗಳು ಕೇವಲ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್ ಮತ್ತು ಮೊಬೈಲ್ ಆಪ್‌ನಲ್ಲಿ ಮಾತ್ರ ಲಭ್ಯವಿರುತ್ತವೆ.



Source link

Leave a Reply

Your email address will not be published. Required fields are marked *