Headlines

ಮಗಳನ್ನೇ ಮರೆತು ಸ್ಕೂಲ್ ಬ್ಯಾಗ್ ಜೊತೆ ಶಾಲೆಗೆ ಹೋದ ತಾಯಿ; ಗಂಭೀರ ಚರ್ಚೆಗೆ ಕಾರಣವಾದ ವಿಡಿಯೋ | Mother Goes To School With School Bag Forgetting Daughter Video Gone Viral Mrq

ಮಗಳನ್ನೇ ಮರೆತು ಸ್ಕೂಲ್ ಬ್ಯಾಗ್ ಜೊತೆ ಶಾಲೆಗೆ ಹೋದ ತಾಯಿ; ಗಂಭೀರ ಚರ್ಚೆಗೆ ಕಾರಣವಾದ ವಿಡಿಯೋ | Mother Goes To School With School Bag Forgetting Daughter Video Gone Viral Mrq



ಮಗಳನ್ನೇ ಮರೆತು ಸ್ಕೂಲ್ ಬ್ಯಾಗ್ ಜೊತೆ ಶಾಲೆಗೆ ಹೋದ ತಾಯಿ; ಗಂಭೀರ ಚರ್ಚೆಗೆ ಕಾರಣವಾದ ವಿಡಿಯೋ | Mother Goes To School With School Bag Forgetting Daughter Video Gone Viral Mrq

ಶಾಲೆಗೆ ಕಳುಹಿಸುವ ಅವಸರದಲ್ಲಿ ತಾಯಿಯೊಬ್ಬರು ಮಗಳನ್ನು ಮನೆಯಲ್ಲೇ ಬಿಟ್ಟು, ಸ್ಕೂಲ್ ಬ್ಯಾಗ್ ಹಿಡಿದು ಹೊರಟ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಕೇವಲ ತಮಾಷೆಯಾಗಿ ಉಳಿಯದೆ, ಗೃಹಿಣಿಯರು ಮತ್ತು ದುಡಿಯುವ ಮಹಿಳೆಯರ ಮೇಲಿನ ಅಗಾಧ ಒತ್ತಡ ಹಾಗೂ ಅವರ ಮಾನಸಿಕ ಆರೋಗ್ಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.

ಬೆಳಗ್ಗೆ ಮಕ್ಕಳನ್ನು ರೆಡಿ ಮಾಡಿ, ತಿಂಡಿ ತಿನ್ನಿಸಿ ಶಾಲೆಗೆ ಕಳುಹಿಸೋದು ಅಮ್ಮಂದಿರಿಗೆ ಸವಾಲಿನ ಕೆಲಸ. ಬೆಳಗ್ಗೆ ಸ್ಕೂಲ್ ಬಸ್ ಬರೋ ವೇಳೆಗೆ ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಿ, ಸ್ನಾನ ಮಾಡಿಸಬೇಕು. ಇಷ್ಟು ಮಾತ್ರವಲ್ಲ ಶಾಲೆಗೆ ಹೋಗಲು ಹಠ ಮಾಡುವ ಇಂದಿನ ಮಕ್ಕಳಿಗೆ ಮುದ್ದು ಮಾಡುತ್ತಾ ತಿಂಡಿಯನ್ನು ತಿನ್ನಿಸಬೇಕು. ಹಾಗೆಯೇ ಯುನಿಫಾರ್ಮ್ ಹಾಕಿಸಿ, ಲಂಚ್ ಬಾಕ್ಸ್ ಸಿದ್ಧ ಮಾಡಬೇಕು. ಇಷ್ಟೆಲ್ಲಾ ಆದ್ಮೇಲೆ ಮಕ್ಕಳ ಎಳೆಯುತ್ತಾ ಹೊರಗೆ ಕರೆದುಕೊಂಡು ಬಂದು ಸ್ಕೂಲ್ ಬಸ್ ಹತ್ತಿಸಿದ್ರೆ ಅಮ್ಮಂದಿನ ಅರ್ಧ ಕೆಲಸ ಮುಗಿದಂತೆ.

ಇಂದು ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿಯೊಬ್ಬರು, ಮಗಳನ್ನು ಮನೆಯಲ್ಲಿಯೇ ಬಿಟ್ಟು ಸ್ಕೂಲ್ ಬ್ಯಾಗ್ ಹಿಡಿದು ಹೊರಗೆ ಬಂದಿದ್ದಾರೆ. ಹೊರಗೆ ಬಂದ ಅಮ್ಮ, ಗೇಟ್ ಬೀಗ ಹಾಕಿದ್ದಾರೆ. ಅಮ್ಮನ ಹಿಂದೆಯೇ ಓಡೋಡಿ ಬಂದ ಮಗಳನ್ನು ತಾಯಯನ್ನು ಕೂಗಿದ್ದಾಳೆ. ಆಗ ತಾಯಿಗೆ ಮಗಳನ್ನು ಬಿಟ್ಟು ಹೋಗಿರೋದು ಅರವಿಗೆ ಬಂದಿದೆ. ಈ ಎಲ್ಲಾ ದೃಶ್ಯಗಳು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಗೃಹಿಣಿಯರ ಮೇಲಿನ ಒತ್ತಡ

ಈ ವಿಡಿಯೋ ವೈರಲ್ ಬೆನ್ನಲ್ಲೇ ಗೃಹಿಣಿಯರ ಮೇಲಿನ ಒತ್ತಡದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇಡೀ ಮನೆಯನ್ನು ನಿರ್ವಹಣೆ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಬೆಳಗ್ಗೆ ಎದ್ದಾಗ ಆರಂಭವಾಗುವ ಕೆಲಸ, ರಾತ್ರಿ ನಿದ್ದೆಗೆ ಜಾರುವರೆಗೂ ಅಂದ್ರೆ ದಿನಕ್ಕೆ 18 ಗಂಟೆ ಕೆಲಸ ಮಾಡ್ತಾರೆ. ಹಾಗಾಗಿ ಮಹಿಳೆಯರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ.

ಈ ಒತ್ತಡದಿಂದ ಮಹಿಳೆಯರು ಮಾನಸಿಕವಾಗಿಯೂ ಕುಗ್ಗುವ ಸಾಧ್ಯತೆಗಳಿರುತ್ತವೆ. ಆದ್ರಿಂದ ಮನೆಗೆಲಸಗಳಲ್ಲಿ ಪುರುಷರು ಭಾಗಿಯಾಗಬೇಕು ಎಂದು ಹಲವು ಮಹಿಳೆಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದರಲ್ಲಿಯೂ ಮನೆ ಹೊರಗೆ ಹೋಗಿ ಕೆಲಸ ಮಾಡುವ ಮಹಿಳೆಯರ ಮೇಲೆ ಹೆಚ್ಚಿನ ಒತ್ತಡವಿರುತ್ತದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ಮನೆಯಿಂದ ಅವಸರದಲ್ಲಿ ಹೊರಗೆ ಬರುವ ಮಹಿಳೆಯ ಕೈಯಲ್ಲಿ ಸ್ಕೂಲ್ ಬ್ಯಾಗ್ ಇರೋದನ್ನು ಗಮನಿಸಬಹುದು. ಅವಸರದಲ್ಲಿಯೇ ಮನೆಯಬ ಗೇಟ್ ತೆಗೆಯುವ ಮಹಿಳೆ ಹೊರಗಿನಿಂದ ಲಾಕ್ ಮಾಡಿ ಹೋಗುತ್ತಾರೆ. ಅಷ್ಟರಲ್ಲಿಯೇ ಹಿಂದೆಯಿಂದ ಓಡಿ ಬರುವ ಮಗು ತಾಯಿಯನ್ನು ಕೂಗುತ್ತದೆ. ಮಗುವಿನ ಧ್ವನಿ ಕೇಳಿ ಬಂದ ತಾಯಿ ಗೇಟ್ ಓಪನ್ ಮಾಡ್ತಾರೆ.

ಇದನ್ನೂ ಓದಿ: ಸೊಂಟ ಬಳುಕಿಸುತ್ತಾ ಮಕ್ಕಳನ್ನ ಬಾವಿಗೆ ಬಿಟ್ಟ ಡೇಂಜರ್ ಮಮ್ಮಿ: ವೈರಲ್ ವಿಡಿಯೋ

ಈ ವಿಡಿಯೋವನ್ನು @TheFigen_ ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇಂದು ಅಪ್ಲೋಡ್ ಆಗಿರುವ ವಿಡಿಯೋ ಇದುವರೆಗೂ 1.4 ಮಿಲಿಯನ್ ವ್ಯೂವ್ ಪಡೆದುಕೊಂಡಿದೆ. ಕೆಲ ಬಳಕೆದಾರರು ಈ ವಿಡಿಯೋವನ್ನು ತಮಾಷೆಯಾಗಿದ್ರೆ ಪರಿಗಣಿಸಿದ್ರೆ, ಮಹಿಳೆಯರು ಗಂಭೀರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರ ಜವಾಬ್ದಾರಿಗಳು ಇಂದು ಅವರ ಮಾನಸಿಕ ಆರೋಗ್ಯದ ಮೇಲೆ ಒತ್ತಡವನ್ನುಂಟು ಮಾಡುತ್ತಿವೆ.

ಇದನ್ನೂ ಓದಿ: ಯುವತಿಗೆ ಫ್ರೀ ರೈಡ್ ಜೊತೆಗೆ ಸರ್ಪ್ರೈಸ್ ಗಿಫ್ಟ್ ,ಮೋಡಿ ಮಾಡಿದ ಬೈಕ್ ಟ್ಯಾಕ್ಸಿ ರೈಡರ್ ವಿಡಿಯೋ

Scroll to load tweet…



Source link

Leave a Reply

Your email address will not be published. Required fields are marked *