Headlines

ಪತ್ನಿಗಾಗಿ ನೇಪಾಳದ ವಿರುದ್ಧ ದಂಗೆ ಎದ್ದಿದ್ದ ರಾಜೀವ್​ ಗಾಂಧಿ: ದೇಶದಲ್ಲಿ ಅಲ್ಲೋಲ-ಕಲ್ಲೋಲ; ರೋಚಕ ಲವ್​ ಸ್ಟೋರಿ | When Sonia Gandhi Denied Entry Into Pashupatinath Temple Nepal Suc

ಪತ್ನಿಗಾಗಿ ನೇಪಾಳದ ವಿರುದ್ಧ ದಂಗೆ ಎದ್ದಿದ್ದ ರಾಜೀವ್​ ಗಾಂಧಿ: ದೇಶದಲ್ಲಿ ಅಲ್ಲೋಲ-ಕಲ್ಲೋಲ; ರೋಚಕ ಲವ್​ ಸ್ಟೋರಿ | When Sonia Gandhi Denied Entry Into Pashupatinath Temple Nepal Suc



ಪತ್ನಿಗಾಗಿ ನೇಪಾಳದ ವಿರುದ್ಧ ದಂಗೆ ಎದ್ದಿದ್ದ ರಾಜೀವ್​ ಗಾಂಧಿ: ದೇಶದಲ್ಲಿ ಅಲ್ಲೋಲ-ಕಲ್ಲೋಲ; ರೋಚಕ ಲವ್​ ಸ್ಟೋರಿ | When Sonia Gandhi Denied Entry Into Pashupatinath Temple Nepal Suc

1988ರಲ್ಲಿ ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಪತ್ನಿ ಸೋನಿಯಾ ಗಾಂಧಿಯವರಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೋಪಗೊಂಡರು. ಈ ಘಟನೆಯಿಂದಾಗಿ ಭಾರತವು ನೇಪಾಳದ ಮೇಲೆ ವ್ಯಾಪಾರ ದಿಗ್ಬಂಧನವನ್ನು ಹೇರಿತು, ಇದು ಉಭಯ ದೇಶಗಳ ಸಂಬಂಧದಲ್ಲಿ ಶಾಶ್ವತ ಬಿಕ್ಕಟ್ಟನ್ನು ಸೃಷ್ಟಿಸಿ ನೇಪಾಳವನ್ನು ಚೀನಾದತ್ತ ತಳ್ಳಿತು.

ಪ್ರಧಾನಿಯಾಗಿದ್ದ ರಾಜೀವ್​ ಗಾಂಧಿ ಅವರು ನಿಧನರಾಗಿ ಬರುವ ಮೇ 21ಕ್ಕೆ 35 ವರ್ಷಗಳಾಗುತ್ತವೆ. ಈ ಸಂದರ್ಭದಲ್ಲಿ ರಾಜೀವ್​ ಗಾಂಧಿ ಮತ್ತು ಸೋನಿಯಾ ಅವರ ರೋಚಕ ಲವ್​ ಸ್ಟೋರಿಯೊಂದು ಇದೀಗ ಬಹಿರಂಗಗೊಂಡಿದೆ. ಪತ್ನಿ ಸೋನಿಯಾ ಅವರನ್ನು ರಾಜೀವ್​ಗಾಂಧಿ ಎಷ್ಟು ಪ್ರೀತಿಸುತ್ತಿದ್ದರು ಎಂದರೆ, ಇಡೀ ನೇಪಾಳವನ್ನೇ ಎದುರು ಹಾಕಿಕೊಂಡಿದ್ದರು. ಅದ್ಯಾವ ಪರಿಯಲ್ಲಿ ಎದುರು ಹಾಕಿಕೊಂಡಿದ್ದರು ಎಂದರೆ, ಇಂದಿಗೂ ನೇಪಾಳ ಮತ್ತು ಭಾರತದ ನಡುವಿನ ಬಾಂಧವ್ಯ ಮೊದಲಿನಂತೆ ಆಗಲೇ ಇಲ್ಲ!

1988ರಲ್ಲಿ ಘಟನೆ

ಈ ಸ್ಟೋರಿ ನಡೆದದ್ದು 1988ರಲ್ಲಿ. ಎಲ್ಲರಿಗೂ ತಿಳಿದಿರುವಂತೆ ಸೋನಿಯಾ ಗಾಂಧಿ ಅವರು ಕ್ರೈಸ್ತ ಸಮುದಾಯದವರು. ಮದುವೆಯಾದ ಬಳಿಕ ರಾಜೀವ್​ ಗಾಂಧಿ ಅವರು, ಪತ್ನಿಯನ್ನು ಕರೆದುಕೊಂಡು ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಹೋಗಿದ್ದರು. ಆದರೆ ಅಲ್ಲಿ ಸೋನಿಯಾ ಗಾಂಧಿಗೆ ಪ್ರವೇಶ ನಿರಾಕರಿಸಲಾಯಿತು. ರಾಜೀವ್ ಗಾಂಧಿ ಅವರು ಪರಿಪರಿಯಾಗಿ ಬೇಡಿಕೊಂಡರೂ ಅದಕ್ಕೆ ದೇವಾಲಯದವರು ಒಪ್ಪಿಕೊಳ್ಳಲೇ ಇಲ್ಲ. ಇದು ರಾಜೀವ್​ ಗಾಂಧಿ ಅವರ ಕೋಪಕ್ಕೆ ಕಾರಣವಾಯಿತು. ಇದರಿಂದ ಅವರು ಭಾರತ ಮತ್ತು ನೇಪಾಳ ವ್ಯಾಪಾರಕ್ಕೇ ದಿಗ್ಬಂಧನ ಹೇರಿಬಿಟ್ಟರು. ರಾಜತಾಂತ್ರಿಕ ಬಿಕ್ಕಟ್ಟು ಉಂಟಾಯಿತು. ವ್ಯಾಪಾರ ಮತ್ತು ಸಾರಿಗೆ ಒಪ್ಪಂದಗಳ ಅವಧಿ ಮುಗಿದ ನಂತರ, ಭಾರತವು ಮಾರ್ಚ್ 1989 ರಲ್ಲಿ ಹೆಚ್ಚಿನ ಗಡಿ ದಾಟುವಿಕೆಗಳನ್ನು ಮುಚ್ಚಿತು, ಇದರಿಂದಾಗಿ ನೇಪಾಳದಲ್ಲಿ ಇಂಧನ, ಉಪ್ಪು ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಯಿತು.

ಚೀನಾಕ್ಕೆ ನೇಪಾಳ ಹತ್ತಿರ

ಇದರಿಂದ ನೇಪಾಳವು ಚೀನಾಕ್ಕೆ ಹತ್ತರವಾಯಿತು. ಚೀನಾದ ವಿಮಾನ ವಿರೋಧಿ ಬಂದೂಕುಗಳನ್ನು ಖರೀದಿಸುವುದರ ಜೊತೆಗೆ ಈ ಘಟನೆಯು ಭಾರತವು ಬೃಹತ್ ವ್ಯಾಪಾರ ನಿರ್ಬಂಧವನ್ನು ವಿಧಿಸಲು ಕಾರಣವಾಯಿತು. ನೇಪಾಳವು ಚೀನಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದರ ಕುರಿತಾದ ಭದ್ರತಾ ಕಾಳಜಿಗಳು ಮತ್ತು ಹೊಸ ಒಪ್ಪಂದಗಳನ್ನು ಮರು ಮಾತುಕತೆ ಮಾಡುವಲ್ಲಿ ವಿಫಲವಾದ ಕಾರಣ ದಿಗ್ಬಂಧನವು ಅಧಿಕೃತವಾಗಿ ನೇಪಾಳವನ್ನು ಚೀನಾಕ್ಕೆ ಹತ್ತಿರಕ್ಕೆ ತಳ್ಳಿತು.

ರಾಜಕೀಯ ಅಸ್ಥಿರತೆ

1989 ರ ದಿಗ್ಬಂಧನವು ಅಂತಿಮವಾಗಿ ನೇಪಾಳದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾಯಿತು ಮತ್ತು ಆ ಸಮಯದಲ್ಲಿ ಭಾರತ ವಿರೋಧಿ ಭಾವನೆಯನ್ನು ತೀವ್ರಗೊಳಿಸಿತು, ಇದು 1990 ರಲ್ಲಿ ಪಂಚಾಯತ್ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಯಿತು. ಇದಾದ ಬಳಿಕ ಭಾರತ ಮತ್ತು ನೇಪಾಳದ ನಡುವೆ ದ್ವೇಷ ಹೆಚ್ಚುತ್ತಲೇ ಸಾಗಿತು. ಇದರ ಲಾಭ ಪಡೆದದ್ದು ಚೀನಾ. ಘಟನೆ ನಡೆದು ಇಷ್ಟು ವರ್ಷಗಳಾದರೂ ಭಾರತ ಮತ್ತು ನೇಪಾಳ ಆ ಮುಂಚಿನ ಮೈತ್ರಿಗೆ ಬರಲೇ ಇಲ್ಲ ಎನ್ನುತ್ತದೆ ರಾಜಕೀಯ ಮೂಲಗಳು. ಇದು ರಾಜೀವ್​ ಗಾಂಧಿ ಅವರಿಗೆ ಪತ್ನಿಯ ಮೇಲಿದ್ದ ಪ್ರೀತಿಯನ್ನು ಸಾರುತ್ತದೆ ಎಂದು ಬಣ್ಣಿಸಲಾಗಿದೆ.



Source link

Leave a Reply

Your email address will not be published. Required fields are marked *