IPL 2026 RCB vs SRH ಆರ್‌ಸಿಬಿ ಪಂದ್ಯದ ಟಿಕೆಟ್‌ ಹತ್ತೇ ನಿಮಿಷದಲ್ಲಿ ಸೋಲ್ಡೌಟ್‌! ಫ್ಯಾನ್ಸ್ ಆಕ್ರೋಶ | Ipl 2026 Rcb Vs Srh Inaugural Match Tickets Sold Out Within 10 Minutes Kvn

IPL 2026 RCB vs SRH ಆರ್‌ಸಿಬಿ ಪಂದ್ಯದ ಟಿಕೆಟ್‌ ಹತ್ತೇ ನಿಮಿಷದಲ್ಲಿ ಸೋಲ್ಡೌಟ್‌! ಫ್ಯಾನ್ಸ್ ಆಕ್ರೋಶ | Ipl 2026 Rcb Vs Srh Inaugural Match Tickets Sold Out Within 10 Minutes Kvn



IPL 2026 RCB vs SRH ಆರ್‌ಸಿಬಿ ಪಂದ್ಯದ ಟಿಕೆಟ್‌ ಹತ್ತೇ ನಿಮಿಷದಲ್ಲಿ ಸೋಲ್ಡೌಟ್‌! ಫ್ಯಾನ್ಸ್ ಆಕ್ರೋಶ | Ipl 2026 Rcb Vs Srh Inaugural Match Tickets Sold Out Within 10 Minutes Kvn

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಐಪಿಎಲ್ ಪಂದ್ಯದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಮಾರಾಟ ಆರಂಭವಾದ ಕೇವಲ ಹತ್ತು ನಿಮಿಷಗಳಲ್ಲಿ ಸಂಪೂರ್ಣವಾಗಿ ಸೋಲ್ಡೌಟ್ ಆಗಿವೆ. ಟಿಕೆಟ್ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಹೊಸ ಕ್ಯುಆರ್‌ ಕೋಡ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಬೆಂಗಳೂರು: 2026ರ ಐಪಿಎಲ್‌ನ ಉದ್ಘಾಟನಾ ಪಂದ್ಯದ ಟಿಕೆಟ್‌ ಕೇವಲ ಹತ್ತೇ ನಿಮಿಷದಲ್ಲಿ ಸೋಲ್ಡೌಟ್‌ ಆಗಿದೆ. ಮಾ.28ರಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಪಂದ್ಯದ ಟಿಕೆಟನ್ನು ಆರ್‌ಸಿಬಿ ಮಂಗಳವಾರ ಮಾರಾಟ ಮಾಡಿತು. ಸಂಜೆ 4 ಗಂಟೆಗೆ ಆರ್‌ಸಿಬಿಯ ಅಧಿಕೃತ ವೆಬ್‌ಸೈಟ್‌ ಹಾಗೂ ಆ್ಯಪ್‌ನಲ್ಲಿ ಟಿಕೆಟ್‌ಗಳು ಖರೀದಿಗೆ ಲಭ್ಯವಾದವು. 4.10ರ ವೇಳೆಗೆ ಟಿಕೆಟ್‌ ಖಾಲಿಯಾದವು.

ಟಿಕೆಟ್‌ನ ಕನಿಷ್ಠ ದರ ಜಿಎಸ್‌ಟಿ ಸೇರಿ ₹3750

ಕೆಲವೇ ಕೆಲ ಆಯ್ದ ಸ್ಟ್ಯಾಂಡ್‌ಗಳಿಗಷ್ಟೇ ಟಿಕೆಟ್‌ ಲಭ್ಯವಿತ್ತು. ಟಿಕೆಟ್‌ನ ಕನಿಷ್ಠ ದರ ಜಿಎಸ್‌ಟಿ ಸೇರಿ ₹3750, ಗರಿಷ್ಠ ದರ ₹47000 ಇದೆ. ಟಿಕೆಟ್‌ ಖರೀದಿಸಲು ವೆಬ್‌ಸೈಟ್‌ ಅಥವಾ ಆ್ಯಪ್‌ನಲ್ಲಿ ಗ್ರಾಹಕರು ತಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿದರೆ ಒಟಿಪಿ ಬರಲಿದೆ. ಲಾಗಿನ್‌ ಆದ ಬಳಿಕ ಸ್ಟ್ಯಾಂಡ್‌ಗಳನ್ನು ಆಯ್ಕೆ ಮಾಡಿಕೊಂಡು, ಹಣ ಪಾವತಿಸಿ ಟಿಕೆಟ್‌ ಖರೀದಿಸಬಹುದಿತ್ತು. ಒಬ್ಬರು ಗರಿಷ್ಠ 2 ಟಿಕೆಟ್‌ ಖರೀದಿಸಲಷ್ಟೇ ಅವಕಾಶವಿತ್ತು.

ಒಬ್ಬರು ಟಿಕೆಟ್‌ ಖರೀದಿಸಿ ಅದನ್ನು ಮತ್ತೊಬ್ಬರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಡೆಯಲು ಈ ಬಾರಿ ಹೊಸ ವ್ಯವಸ್ಥೆ ಮಾಡಲಾಗಿದೆ. ಪಂದ್ಯ ಆರಂಭಕ್ಕೆ 5 ಗಂಟೆಗಳ ಮುಂಚೆ ಟಿಕೆಟ್‌ ಖರೀದಿಸಿದವರ ಮೊಬೈಲ್‌ಗೆ ಕ್ಯುಆರ್‌ ಕೋಡ್‌ ಬರಲಿದೆ. ಕ್ರೀಡಾಂಗಣವನ್ನು ಪ್ರವೇಶಿಲು ಕ್ಯುಆರ್‌ ಕೋಡ್‌ ಸ್ಕ್ಯಾನ್‌ ಮಾಡಬೇಕು. ಒಂದು ಮೊಬೈಲ್‌ಗೆ ಬಂದ ಕೋಡ್‌ ಅನ್ನು ಮತ್ತೊಂದ ಮೊಬೈಲ್‌ ಸಂಖ್ಯೆಗೆ ಹಂಚಿಕೊಳ್ಳಲು ಸಾಧ್ಯವಿಲ್ಲ.

ಅಭಿಮಾನಿಗಳ ಸಿಟ್ಟು

ಈ ಹಿಂದಿನ ಆವೃತ್ತಿಗಳಲ್ಲೂ ಆರ್‌ಸಿಬಿ ಟಿಕೆಟ್‌ ಖರೀದಿ ವ್ಯವಸ್ಥೆ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವರ್ಷವೂ ಟಿಕೆಟ್‌ ಖರೀದಿಸಲು ಆಗದೆ ಅಭಿಮಾನಿಗಳು ಸಿಟ್ಟಾಗಿದ್ದು, ಸಾಮಾಜಿಕ ತಾಣಗಳಲ್ಲಿ ಫ್ರಾಂಚೈಸಿಯನ್ನು ಟೀಕಿಸಿದ್ದಾರೆ. ಟಿಕೆಟ್‌ ಮಾರಾಟ ಆರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಆರ್‌ಸಿಬಿ ಸಿಇಒ ರಾಜೇಶ್‌ ಮೆನನ್‌, ‘ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ 1 ಲಕ್ಷ ಇದ್ದರೂ, ಕೆಲವೇ ನಿಮಿಷಗಳಲ್ಲಿ ಟಿಕೆಟ್‌ ಮಾರಾಟವಾಗಲಿದೆ. ಟಿಕೆಟ್‌ಗೆ ಬೆಂಗಳೂರಲ್ಲಿರುವಷ್ಟು ಬೇಡಿಕೆ ಇನ್ನೆಲ್ಲೂ ಇಲ್ಲ’ ಎಂದರು.



Source link

Leave a Reply

Your email address will not be published. Required fields are marked *