ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ! | T20 World Cup 2026 Final India Vs New Zealand Winner To Get Record 3 Million Dollar Prize Money Kvn

ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ! | T20 World Cup 2026 Final India Vs New Zealand Winner To Get Record 3 Million Dollar Prize Money Kvn



ಟಿ20 ವಿಶ್ವಕಪ್ ಗೆದ್ದರೆ ಭಾರತಕ್ಕೆ ಸಿಗೋದು ಬರೋಬ್ಬರಿ 27 ಕೋಟಿ! ರನ್ನರ್-ಅಪ್‌ಗೂ ಕೋಟಿ ಕೋಟಿ ಹಣ! | T20 World Cup 2026 Final India Vs New Zealand Winner To Get Record 3 Million Dollar Prize Money Kvn

ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ T20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಲಿವೆ. ಈ ಬಾರಿ ಐಸಿಸಿ ದಾಖಲೆಯ ಬಹುಮಾನದ ಮೊತ್ತವನ್ನು ಘೋಷಿಸಿದ್ದು, ಗೆದ್ದ ತಂಡಕ್ಕೆ ಸುಮಾರು 27.48 ಕೋಟಿ ರೂ. ಹಾಗೂ ರನ್ನರ್-ಅಪ್ ತಂಡಕ್ಕೆ ಸುಮಾರು 14.65 ಕೋಟಿ ರೂ. ಸಿಗಲಿದೆ.

ಅಹಮದಾಬಾದ್: ಭಾನುವಾರವಾದ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ T20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಇಡೀ ಕ್ರಿಕೆಟ್ ಜಗತ್ತು ಈ ಪಂದ್ಯದ ಜೊತೆಗೆ, ಗೆದ್ದವರಿಗೆ ಸಿಗುವ ಭರ್ಜರಿ ಬಹುಮಾನದ ಮೊತ್ತದ ಬಗ್ಗೆಯೂ ಕುತೂಹಲದಿಂದ ಕಾಯುತ್ತಿದೆ. ಹಾಲಿ ಚಾಂಪಿಯನ್ ಭಾರತ ಮತ್ತು ಮೊದಲ ಬಾರಿಗೆ ಕಪ್ ಗೆಲ್ಲುವ ಕನಸು ಕಾಣುತ್ತಿರುವ ನ್ಯೂಜಿಲೆಂಡ್ ನಡುವಿನ ಈ ಫೈನಲ್‌ನಲ್ಲಿ ಗೆದ್ದ ತಂಡಕ್ಕೆ ಈ ಬಾರಿ ದಾಖಲೆ ಮೊತ್ತದ ಬಹುಮಾನ ಸಿಗಲಿದೆ. 

ಕಳೆದ ಟಿ20 ವಿಶ್ವಕಪ್‌ಗಿಂತ ಬಹುಮಾನ ಮೊತ್ತದಲ್ಲಿ 20% ಹೆಚ್ಚಳ

ಐಸಿಸಿ ಈ ಸಲ ಬಹುಮಾನದ ಮೊತ್ತವನ್ನು 2024ಕ್ಕೆ ಹೋಲಿಸಿದರೆ ಶೇ. 20ರಷ್ಟು ಹೆಚ್ಚಿಸಿದೆ. ಈ ಬಾರಿಯ ವಿಶ್ವಕಪ್‌ಗೆ ಐಸಿಸಿ ಒಟ್ಟು 13.5 ಮಿಲಿಯನ್ ಡಾಲರ್ (ಸುಮಾರು 112 ಕೋಟಿ ರೂಪಾಯಿಗೂ ಹೆಚ್ಚು) ಬಹುಮಾನದ ಮೊತ್ತವನ್ನು ಘೋಷಿಸಿದೆ. 2024ರಲ್ಲಿ ಚಾಂಪಿಯನ್ ಆಗಿದ್ದ ಭಾರತಕ್ಕೆ ಐಸಿಸಿ 2.45 ಮಿಲಿಯನ್ ಡಾಲರ್ (ಸುಮಾರು 22.52 ಕೋಟಿ ರೂ.) ಬಹುಮಾನ ನೀಡಿತ್ತು. ಆದರೆ ಈ ಬಾರಿ ವಿಶ್ವಕಪ್ ಕಿರೀಟ ಗೆಲ್ಲುವ ತಂಡಕ್ಕೆ ಬರೋಬ್ಬರಿ 3 ಮಿಲಿಯನ್ ಡಾಲರ್ (ಸುಮಾರು 27.48 ಕೋಟಿ ರೂ.) ಬಹುಮಾನ ಸಿಗಲಿದೆ. ರನ್ನರ್-ಅಪ್ ಆದ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 14.65 ಕೋಟಿ ರೂ.) ಸಿಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದ ಈ ಟೂರ್ನಮೆಂಟ್‌ನಿಂದ ಉತ್ತಮ ಪ್ರಾಯೋಜಕತ್ವದ ಆದಾಯ ಬಂದಿದ್ದೇ ಬಹುಮಾನದ ಮೊತ್ತ ಇಷ್ಟೊಂದು ಹೆಚ್ಚಾಗಲು ಕಾರಣ.

ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ 790,000 ಡಾಲರ್ (ಸುಮಾರು 7.24 ಕೋಟಿ ರೂ.) ಬಹುಮಾನ ಸಿಗಲಿದೆ. ಸೂಪರ್ 8 ಹಂತ ತಲುಪಿದ್ದ ತಂಡಗಳಿಗೆ 380,000 ಡಾಲರ್ (ಸುಮಾರು 3.48 ಕೋಟಿ ರೂ.) ನೀಡಲಾಗುತ್ತದೆ. ಇನ್ನು, ಗ್ರೂಪ್ ಹಂತದಲ್ಲೇ ಹೊರಬಿದ್ದ 12 ತಂಡಗಳಿಗೂ ಬಹುಮಾನವಿದೆ. ಈ ತಂಡಗಳಿಗೆ ತಲಾ 250,000 ಡಾಲರ್ (ಸುಮಾರು 2.29 ಕೋಟಿ ರೂ.) ಸಿಗಲಿದೆ. ಈ ಮೂಲಕ, ವಿಶ್ವಕಪ್‌ನಲ್ಲಿ ಭಾಗವಹಿಸಿದ ಎಲ್ಲಾ 20 ತಂಡಗಳಿಗೂ ಆರ್ಥಿಕ ಲಾಭ ಸಿಗುವಂತೆ ಐಸಿಸಿ ಬಹುಮಾನದ ಮೊತ್ತವನ್ನು ನಿಗದಿಪಡಿಸಿದೆ.

ಭಾನುವಾರ ಸಂಜೆ 7 ಗಂಟೆಗೆ ಅಹಮದಾಬಾದ್‌ನಲ್ಲಿ ಇಡೀ ಜಗತ್ತು ಕಾಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯ ಶುರುವಾಗಲಿದೆ. ಮೂರನೇ ಬಾರಿಗೆ ಕಪ್ ಗೆದ್ದು ಇತಿಹಾಸ ಬರೆಯಲು ಭಾರತ ಸಜ್ಜಾಗಿದ್ದರೆ, ಚೊಚ್ಚಲ ಕಿರೀಟಕ್ಕಾಗಿ ಕಿವೀಸ್ ಪಡೆ ಹೋರಾಡಲಿದೆ.

ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ 4ನೇ ಬಾರಿಗೆ ಭಾರತ vs ಕಿವೀಸ್‌

ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು 4ನೇ ಬಾರಿಗೆ ಫೈನಲ್‌ನಲ್ಲಿ ಸೆಣಸಲಿವೆ. 2000ರ ನಾಕೌಟ್‌ ಟ್ರೋಫಿಯಲ್ಲಿ ಮೊದಲ ಬಾರಿಗೆ ಫೈನಲ್‌ನಲ್ಲಿ ಸೆಣಸಿದ್ದವು. ಆ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ವಿಕೆಟ್‌ಗಳಿಂದ ಜಯಿಸಿತ್ತು. ಬಳಿಕ 2021ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತವನ್ನು ಕಿವೀಸ್‌ 8 ವಿಕೆಟ್‌ಗಳಿಂದ ಬಗ್ಗುಬಡಿದಿತ್ತು. ಆದರೆ, 2025ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ 4 ವಿಕೆಟ್‌ ಜಯ ಸಾಧಿಸಿತ್ತು. ಇದೀಗ 4ನೇ ಬಾರಿಗೆ ಫೈನಲ್‌ನಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗಲಿವೆ.



Source link

Leave a Reply

Your email address will not be published. Required fields are marked *