mojtaba khamenei ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ | Archived Video Or Proof Of Life Mojtaba Khamenei Footage Sparks Global Debate

mojtaba khamenei ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ | Archived Video Or Proof Of Life Mojtaba Khamenei Footage Sparks Global Debate



mojtaba khamenei ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ | Archived Video Or Proof Of Life Mojtaba Khamenei Footage Sparks Global Debate

ಗಂಭೀರ ಗಾಯ ಅನುಮಾನದ ನಡುವೆ ಮೊಜ್ತಬಾ ಖಮೇನಿ ವಿಡಿಯೋ ರಿಲೀಸ್, ಭುಗಿಲೆದ್ದ ಆತಂಕ, ದಾಳಿಯಲ್ಲಿ ಮೊಜ್ತಬಾ ಖಮೇನಿ ಬದುಕುಳಿದಿರುವುದೇ ಅನುಮಾನ ಎಂದು ಹೇಳಲಾಗಿತ್ತು. ಆದರೆ ಇದೀಗ ವಿಡಿಯೋ ಮೂಲಕ ಸ್ಪಷ್ಟ ಸಂದೇಶ ನೀಡಿದೆ. 

ಟೆಹ್ರನ್ (ಮಾ.20) ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಇದೀಗ ಗ್ಯಾಸ್ ಹಾಗೂ ತೈಲ ಟ್ಯಾಂಕ್ ಸೇರಿದಂತೆ ಪ್ರಮುಕ ಘಟಕಗಳ ಮೇಲೆ ಕೇಂದ್ರೀಕರಿಸಿ ನಡೆಯುತ್ತಿದೆ. ಈ ಯುದ್ಧ ಜಗತ್ತಿನ ನಿದ್ದೆಗೆಡಿಸಿದೆ. ಇಸ್ರೇಲ್ ದಾಳಿಯಲ್ಲೂ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಎರಡು ಕಾಲ್ ಕಟ್ ಆಗಿದೆ, ಬುದುಕುಳಿದಿರುವುದೇ ಅನುಮಾನ ಎಂದು ಹೇಳಲಾಗುತ್ತಿತ್ತು. ಅಮೆರಿಕ ಹಾಗೂ ಇಸ್ರೇಲ್ ಪದೇ ಪದೇ ಈ ಅನುಮಾನ ವ್ಯಕ್ತಪಡಿಸಿತ್ತು. ಅನುಮಾನ ಹೆಚ್ಚಾಗುತ್ತಿದ್ದಂತೆ ಇರಾನ್ ತನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ.

ಧಾರ್ಮಿಕ ಕಾರ್ಯಕ್ರಮದ ವಿಡಿಯೋ

ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಆರಂಭಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಹತ್ಯೆಯಾಗಿದ್ದರು. ಖಮೇನಿ ಜೊತೆ ಬಹುಕೇಕ ಕುಟುಂಬವೇ ಹತ್ಯೆಯಾಗಿತ್ತು. ಇದರ ಬೆನ್ನಲ್ಲೇ ಇರಾನ್ ಬದುಕುಳಿದ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿಗೆ ಸರ್ವೋಚ್ಚ ನಾಯಕ ಪಟ್ಟ ಕಟ್ಟಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಮೊಜ್ತಬಾ ಖಮೇನಿ ಜೀವಂತ ಸಾಧ್ಯತೆ ಇಲ್ಲ ಎಂದಿದ್ದರು. ಈ ಎಲ್ಲಾ ಊಹಾಪೋಹಗಳ ಬಳಿಕ ಇದೀಗ ಇರಾನ್ ವಿಡಿಯೋ ಬಿಡುಗಡೆ ಮಾಡಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಮೊಜ್ತಬಾ ಖಮೇನಿ ಪ್ರವಚನ ನೀಡುತ್ತಿರುವ ವಿಡಿಯೋವನ್ನು ಬಹಿರಂಗಪಡಿಸಿದೆ.

ಧಾರ್ಮಿಕ ವಿದ್ಯಾರ್ಥಿಗಳಿಗೆ ಇಸ್ಲಾಂ ಪಾಠ ಮಾಡುತ್ತಿರುವ ವಿಡಿಯೋವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (IRIB) ಬಿಡುಗಡೆ ಮಾಡಿದೆ. ಆದರೆ ಈ ವಿಡಿಯೋ ಕುರಿತು ಹೆಚ್ಚಿನ ಮಾಹಿತಿಯನ್ನು IRIB ನೀಡಿಲ್ಲ. ಇದು ಮತ್ತೆ ಅನುಮಾನಕ್ಕೆ ಕಾರಣವಾಗಿದೆ. ಮೊಜ್ತಬಾ ಖಮೇನಿಯ ಸದ್ಯ ಹೊರಬಂದಿರುವ ವಿಡಿಯೋ ಹಳೇ ವಿಡಿಯೋ ಆಗಿರುವ ಸಾಧ್ಯತೆ ಇದೆ. ಸರ್ವೋಚ್ಚ ನಾಯಕನಾದ ಬಳಿಕ ಚಿತ್ರೀಕರಿಸಿದ ವಿಡಿಯೋ ಸಾಧ್ಯತೆಗಳಿಲ್ಲ ಅನ್ನೋ ಅನುಮಾನಗಳು ಮೂಡಿದೆ.

ಖಮೇನಿ ಬೆಂಬಲಿಗರಲ್ಲಿ ಆತಂಕ

ಈ ವಿಡಿಯೋ ರಿಲೀಸ್ ಮಾಡಿದ ಬೆನ್ನಲ್ಲೇ ಖಮೇನಿ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿದೆ. ಮೊಜ್ತಬಾ ಖಮೇನಿ ಸುರಕ್ಷಿತವಾಗಿದ್ದಾರೆ, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ವಿಡಿಯೋ ರಿಲೀಸ್ ಮಾಡಿ ಶತ್ರುರಾಷ್ಟ್ರಗ ಗುಪ್ತಚರ ಇಲಾಖೆಗೆ ತಾಣಗಳ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ. ಇದರಿಂದ ಅಪಾಯದ ಸಾಧ್ಯತೆ ಹೆಚ್ಚು ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇರಾನ್ ಮೇಲಿನ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ, ಸೇನಾ ಕಮಾಂಡರ್, ಸೇನಾ ಮುಖ್ಯಸ್ಥ ಸೇರಿದಂತೆ ಹಲವು ಪ್ರಮುಖರು ಹತರಾಗಿದ್ದಾರೆ. ಇದೀಗ ಮೊಜ್ತಬಾ ಖಮೇನಿ ಟಾರ್ಗೆಟ್ ಮಾಡಿರುವ ಇಸ್ರೇಲ್ ಹಾಗೂ ಅಮೆರಿಕ ಈ ವಿಡಿಯೋ ಆಧರಿಸಿ ದಾಳಿ ತೀವ್ರಗೊಳಿಸುವ ಸಾಧ್ಯತೆ ಇದೆ ಎಂದು ಖಮೇನಿ ಬೆಂಬಲಿಗರು ಆತಂಕಗೊಂಡಿದ್ದಾರೆ.



Source link

Leave a Reply

Your email address will not be published. Required fields are marked *