ದರ್ಶನ್ ಅವರ ರಿಯಲ್ಲೈಫ್ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಸದ್ಯ ಸೆನ್ಸಾರ್ಆಗುತ್ತಿರುವ ಬಾಸ್ ಸಿನಿಮಾ ವಿರುದ್ಧ ನೋಟಿಸ್ ಜಾರಿಯಾಗಿದ್ದು ಚಿತ್ರತಂಡಕ್ಕೆ ಸಹಜವಾಗಿಯೇ ಆತಂಕ ಶುರುವಾಗಿದೆ. ಸೆನ್ಸಾರ್ ಸರ್ಟಿಫಿಕೇಟ್ಬರುವ ಮುನ್ನವೇ ದರ್ಶನ್ಪರ ವಕೀಲರಿಂದ ನೋಟೀಸ್ ಜಾರಿಯಾಗಿದೆ.
ಬಾಸ್ಗೆ ಸಂಕಷ್ಟ?
ಸ್ಯಾಂಡಲ್ವುಡ್ನ ಮುಂಬರುವ ಸಿನಿಮಾವೊಂದು ವಿವಾದಕ್ಕೆ ಗುರಿಯಾಗಿದೆ. ಲವ ನಿರ್ದೇಶನದ ‘ಬಾಸ್’ಸಿನಿಮಾ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ತನುಷ್ ಶಿವಣ್ಣ (Tanusha Shivanna) ನಟನೆಯ ಬಾಸ್ ಸಿನಿಮಾ ಟೀಂ ಈಗ ಕಾನೂನು ಸಂಕಷ್ಟು ಎದುರಿಸುತ್ತಿದೆ. ದರ್ಶನ್ ಪರ ವಕೀಲರಿಂದ ಸೆನ್ಸಾರ್ಮಂಡಳಿಗೆ‘ಬಾಸ್’ ಸಿನಿಮಾ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.
ನೋಟೀಸ್ ಜಾರಿ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ಜೈಲು ಸೇರಿರೋದು ಗೊತ್ತೇ ಇದೆ. ಈ ಸಿನಿಮಾ ಇದೇ ಕೊಲೆ ಕೇಸ್ಗೆ ಸಂಬಂಧಿಸಿದ ಚಿತ್ರ ಎಂದು ಆರೋಪಿಸಿ ಇದೀಗ ನೋಟೀಸ್ ಜಾರಿ ಮಾಡಲಾಗಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಬಾಸ್ ಚಿತ್ರದ ಬಾಸ್ (Boss) ಟೀಸರ್ ಕೂಡ ಅದೇ ಅನುಮಾನ ಹುಟ್ಟುಹಾಕಿದೆ. ಹೀಗಾಗಿ ಬಾಸ್ ಚಿತ್ರ ವಿವಾದಕ್ಕೆ ಗುರಿಯಾಗಿದ್ದು ಕಾನೂನು ಸಂಕಷ್ಟಕ್ಕೆ ಗುರಿಯಾಗಿದೆ.
ದರ್ಶನ್ ಅವರ ರಿಯಲ್ಲೈಫ್ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ. ಸದ್ಯ ಸೆನ್ಸಾರ್ಆಗುತ್ತಿರುವ ಬಾಸ್ ಸಿನಿಮಾ ವಿರುದ್ಧ ನೋಟಿಸ್ ಜಾರಿಯಾಗಿದ್ದು ಚಿತ್ರತಂಡಕ್ಕೆ ಸಹಜವಾಗಿಯೇ ಆತಂಕ ಶುರುವಾಗಿದೆ. ಸೆನ್ಸಾರ್ ಸರ್ಟಿಫಿಕೇಟ್ಬರುವ ಮುನ್ನವೇ ದರ್ಶನ್ಪರ ವಕೀಲರಿಂದ ನೋಟೀಸ್ ಜಾರಿಯಾಗಿದೆ.
ಸೆನ್ಸಾರ್ ಮಾಡದಂತೆ ನೋಟಿಸ್ ಜಾರಿ
ಸೆಕ್ಷನ್5B, ಸಿನಿಮಾಟೋಗ್ರಾಫ್ACT 1952 ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದ್ದು, ಕೋರ್ಟ್ನಲ್ಲಿ ಕೇಸ್ ಇರೋದ್ರಿಂದ ಸೆನ್ಸಾರ್ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿದೆ. U ಅಥವಾ UA ಅಥವಾ A ಅಥವಾ S ಸರ್ಟಿಫಿಕೇಟ್ನೀಡದಂತೆ ಕೋರಲಾಗಿದೆ. ರಿಲೀಸ್ ಮಾಡಲು ಸಿದ್ಧವಾಗಿದ್ದ ‘ಬಾಸ್’ ಸಿನಿಮಾ ವಿರುದ್ಧ ನೋಟಿಸ್ ಜಾರಿ ಮಾಡಿದ ದರ್ಶನ್ ಪರ ವಕೀಲರಿಂದ, ಇದೀಗ ಚಿತ್ರತಂಡದ ತಲೆನೋವು ಅನುಭವಿಸುವಂತಾಗಿದೆ. ಅಂದಹಾಗೆ, ದರ್ಶನ್ ಪರ ವಕೀಲರು ಸೆನ್ಸಾರ್ ಮಂಡಳಿಗೆ ಸುಮಾರು 50 ಪುಟಗಳ ನೋಟಿಸ್ ನೀಡಿದ್ದಾರೆ. ಮುಂದೇನು ಎಂಬ ಕುತೂಹಲ ಇದೀಗ ಮನೆಮಾಡಿದೆ.