ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್! | Sanju Samson Nominated For Icc T20 World Cup Player Of The Tournament Only Indian In Shortlist Kvn

ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್! | Sanju Samson Nominated For Icc T20 World Cup Player Of The Tournament Only Indian In Shortlist Kvn



ಇಶಾನ್ ಕಿಶನ್, ವರುಣ್ ಚಕ್ರವರ್ತಿ ಔಟ್, ಟಿ20 ವಿಶ್ವಕಪ್ ಹೀರೋ ಆಗ್ತಾರಾ ಸಂಜು ಸ್ಯಾಮ್ಸನ್? ಐಸಿಸಿ ಪಟ್ಟಿ ರಿಲೀಸ್! | Sanju Samson Nominated For Icc T20 World Cup Player Of The Tournament Only Indian In Shortlist Kvn

2026ರ ಟಿ20 ವಿಶ್ವಕಪ್‌ನ ‘ಟೂರ್ನಿಯ ಶ್ರೇಷ್ಠ ಆಟಗಾರ’ ಪ್ರಶಸ್ತಿಗಾಗಿ ಐಸಿಸಿ ನಾಮನಿರ್ದೇಶಿತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದಿಂದ ಸಂಜು ಸ್ಯಾಮ್ಸನ್ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದು, ನಿರ್ಣಾಯಕ ಪಂದ್ಯಗಳಲ್ಲಿ ಅವರ ಪ್ರದರ್ಶನವನ್ನು ಪರಿಗಣಿಸಲಾಗಿದೆ.

ದುಬೈ: 2026ರ ಟಿ20 ವಿಶ್ವಕಪ್‌ನ ‘ಟೂರ್ನಿಯ ಶ್ರೇಷ್ಠ ಆಟಗಾರ’ ಪ್ರಶಸ್ತಿಗಾಗಿ ಐಸಿಸಿ ತನ್ನ ನಾಮನಿರ್ದೇಶನ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ತಂಡದಿಂದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಚ್ಚರಿ ಅಂದರೆ, ಈ ಲಿಸ್ಟ್‌ನಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರೇ ಹೆಚ್ಚಾಗಿದ್ದಾರೆ.

ಸಂಜು ಆಯ್ಕೆಗೆ ಕಾರಣವೇನು?

ಟೂರ್ನಿಯಲ್ಲಿ 8 ಪಂದ್ಯಗಳಿಂದ 13 ವಿಕೆಟ್ ಪಡೆದು ವರುಣ್ ಚಕ್ರವರ್ತಿ ಅತಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾಗಿದ್ದರೂ, ಅವರನ್ನು ಐಸಿಸಿ ಪರಿಗಣಿಸಿಲ್ಲ. ಹಾಗೆಯೇ, ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಇಶಾನ್ ಕಿಶನ್‌ಗೂ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಬದಲಿಗೆ, ಭಾರತ ಫೈನಲ್‌ ತಲುಪಲು ಸಂಜು ಸ್ಯಾಮ್ಸನ್ ನೀಡಿದ ಕೊಡುಗೆಯನ್ನು ಐಸಿಸಿ ಗುರುತಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಕ್ವಾರ್ಟರ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಸಂಜು ಸತತವಾಗಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಇದೇ ಕಾರಣಕ್ಕೆ ಸಂಜುಗೆ ಈ ಗೌರವ ಸಿಕ್ಕಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲೂ ಸಂಜು ಅವರಿಂದ ಇಡೀ ದೇಶ ಒಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸುತ್ತಿದೆ. ಒಂದು ವೇಳೆ ಫೈನಲ್‌ನಲ್ಲೂ ಮಿಂಚಿದರೆ, ಸಂಜು ವಿಶ್ವಕಪ್‌ನ ಶ್ರೇಷ್ಠ ಆಟಗಾರನಾಗುವುದು ಬಹುತೇಕ ಖಚಿತ.

ಪಟ್ಟಿಯಲ್ಲಿರುವ ಇತರ 8 ಆಟಗಾರರು

ಸಂಜು ಅಲ್ಲದೆ, ಇನ್ನೂ ಎಂಟು ಆಟಗಾರರು ಈ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ:

ವಿಲ್ ಜಾಕ್ಸ್ (ಇಂಗ್ಲೆಂಡ್): ಎಂಟು ಪಂದ್ಯಗಳಲ್ಲಿ ನಾಲ್ಕು ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗಳನ್ನು ಗೆದ್ದಿರುವ ವಿಲ್ ಜಾಕ್ಸ್, ಇಂಗ್ಲೆಂಡ್ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೆಮಿಫೈನಲ್‌ನಲ್ಲೂ ವಿಲ್ ಜ್ಯಾಕ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಹೀಗಿದ್ದರೂ ಜ್ಯಾಕ್ಸ್‌ಗೆ ಇಂಗ್ಲೆಂಡ್ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ರಚಿನ್ ರವೀಂದ್ರ, ಟಿಮ್ ಸೀಫರ್ಟ್ (ನ್ಯೂಜಿಲೆಂಡ್): ಆಲ್‌ರೌಂಡ್ ಪ್ರದರ್ಶನ ನೀಡಿದ ರಚಿನ್ ರವೀಂದ್ರ, ಕಿವೀಸ್ ತಂಡ ಫೈನಲ್ ತಲುಪುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್ ಕೂಡಾ ರೆಡ್‌ ಹಾಟ್ ಫಾರ್ಮ್‌ನಲ್ಲಿದ್ದು ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುತ್ತಿದ್ದಾರೆ. ಕಿವೀಸ್ ಪರವಾಗಿ ಈ ಇಬ್ಬರು ಆಟಗಾರರು ಸರಣಿ ಶ್ರೇಷ್ಠ ಪ್ರಶಸ್ತಿ ರೇಸ್‌ನಲ್ಲಿದ್ದು, ಫೈನಲ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಸಾಹಿಬ್‌ಜಾದಾ ಫರ್ಹಾನ್ (ಪಾಕಿಸ್ತಾನ): ಪಾಕಿಸ್ತಾನ ಬೇಗನೇ ಟೂರ್ನಿಯಿಂದ ಹೊರಬಿದ್ದರೂ, ಫರ್ಹಾನ್ ಕೇವಲ ಆರು ಇನ್ನಿಂಗ್ಸ್‌ಗಳಿಂದ 383 ರನ್ ಗಳಿಸಿ, ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಫರ್ಹಾನ್ ಕೂಡಾ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನ ರೇಸ್‌ನಲ್ಲಿದ್ದಾರೆ.

ಲುಂಗಿ ಎನ್‌ಗಿಡಿ, ಏಡನ್ ಮಾರ್ಕ್‌ರಮ್ (ದಕ್ಷಿಣ ಆಫ್ರಿಕಾ): ಎನ್‌ಗಿಡಿ ದಕ್ಷಿಣ ಆಫ್ರಿಕಾದ ಬೌಲಿಂಗ್ ವಿಭಾಗದ ಬೆನ್ನೆಲುಬಾಗಿದ್ದರೆ, ನಾಯಕ ಮಾರ್ಕ್‌ರಮ್ ಮೂರು ಅರ್ಧಶತಕಗಳೊಂದಿಗೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಇದೆಲ್ಲದರ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡದ ಅಭಿಯಾನ ಸೆಮೀಸ್‌ನಲ್ಲಿಯೇ ಕೊನೆಗೊಂಡಿದ್ದು ಮಾತ್ರ ದುರಂತ.

ಷಾಡ್ಲಿ ವಾನ್ ಸ್ಕಾಲ್ಕ್‌ವಿಕ್ (ಯುಎಸ್‌ಎ): ಯುಎಸ್‌ಎ ತಂಡ ಗ್ರೂಪ್ ಹಂತದಲ್ಲೇ ಹೊರಬಿದ್ದರೂ, ಸ್ಕಾಲ್ಕ್‌ವಿಕ್ ಕೇವಲ ನಾಲ್ಕು ಪಂದ್ಯಗಳಲ್ಲಿ 13 ವಿಕೆಟ್ ಪಡೆದು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ವರುಣ್ ಚಕ್ರವರ್ತಿ ಜೊತೆಗೆ ಸ್ಕಾಲ್ಕ್‌ವಿಕ್ ಕೂಡ ಟೂರ್ನಿಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಆದರೆ, ವರುಣ್‌ಗಿಂತ ಕಡಿಮೆ ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದ ನಂತರ ವಿಜೇತರನ್ನು ಐಸಿಸಿ ಪ್ರಕಟಿಸಲಿದೆ.



Source link

Leave a Reply

Your email address will not be published. Required fields are marked *