ಚಿಕ್ಕಮಗಳೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದರ ಏರಿಕೆ: ಡ್ರೈಫ್ರೂಟ್ಸ್‌ ಮಾತ್ರ ಕದ್ದ ಕಳ್ಳ | Chikkamagaluru Price Hike Due To Middle East War Thief Steals Only Dry Fruits In Shop

ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆ ದೇಗುಲದ ಬಳಿಯ ಅಂಗಡಿಯೊಂದರಲ್ಲಿ ಕಳ್ಳನೊಬ್ಬ 10 ಕೆಜಿಗೂ ಅಧಿಕ ಬಾದಾಮಿ, ಪಿಸ್ತಾ, ಗೋಡಂಬಿ ಹಾಗೂ 80 ಸಾವಿರ ನಗದನ್ನು ಕದ್ದೊಯ್ದಿದ್ದಾನೆ. ಕಳ್ಳತನದ ಈ ಕೃತ್ಯವು ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ..

ಅಂಗಡಿಗೆ ಕನ್ನ ಹಾಕಿ ಡ್ರೈಫ್ರೂಟ್ಸ್ ಮಾತ್ರ ಕದ್ದ ಕಳ್ಳ

ಚಿಕ್ಕಮಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ತೀವ್ರವಾಗಿ ಮುಂದುವರಿದ ಹಿನ್ನೆಲೆ ಯುದ್ಧದಿಂದಾಗಿ ಬರೀ ಪೆಟ್ರೋಲ್ ಡೀಸೆಲ್‌ ರೇಟ್ ಮಾತ್ರವಲ್ಲ, ಹಲವು ವಸ್ತುಗಳ ದರದಲ್ಲೂ ಭಾರಿ ಏರಿಕೆಯಾಗಿದೆ. ವಿದೇಶದಿಂದ ಆಮದಾಗುತ್ತಿರುವ ಡ್ರೈಫ್ರೂಟ್ಸ್ ಆಮದಿನಲ್ಲಿಯೂ ತೀವ್ರ ವ್ಯತ್ಯಯವಾಗಿದೆ. ಹೀಗಾಗಿ ಇವುಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಹೀಗಾಗಿ ಕಳ್ಳನೋರ್ವ ಅಂಗಡಿಯೊಂದಕ್ಕೆ ನುಗ್ಗಿ ಒಳಹಣ್ಣುಗಳನ್ನೇ ಕಳ್ಳತನ ಮಾಡಿದ್ದು, ಈತನ ಕಳ್ಳತನದ ಕೃತ್ಯ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಚಿಕ್ಕಮಗಳೂರಿನ ಶೃಂಗೇರಿ ಪಟ್ಟಣದ ಶೃಂಗೇರಿ ಶಾರದಾಂಬೆ ದೇಗುಲದ ಪಕ್ಕದ ಅಂಗಡಿಯಲ್ಲಿ ಈ ಕಳ್ಳತನದ ಘಟನೆ ನಡೆದಿದೆ.

ಇದನ್ನೂ ಓದಿ: ಬಂದ ಎರಡೂ ಹಡಗುಗಳನ್ನು ಗುಜರಾತ್‌ಗೆ ಏಕೆ ಕಳುಹಿಸಿದರು: ಜೋಶಿ ರಾಜ್ಯದ ಹಿತಕ್ಕೆ ಕೆಲಸ ಮಾಡಬೇಕು: ಡಿಕೆಶಿ

ಅಂಗಡಿಯಲ್ಲಿ ಕಳ್ಳತನಕ್ಕೆ ಬಂದ ಕಳ್ಳ ಪಿಸ್ತಾ ಬಾದಾಮಿ ಗೋಡಂಬಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾನೆ. 10 ಕೆಜಿಗೂ ಅಧಿಕ ಬಾದಾಮಿ, ಪಿಸ್ತಾ ಹಾಗೂ ಗೋಡಂಬಿ ಕಳ್ಳತನ ಮಾಡಿದ್ದು, ಇದರ ಜೊತೆಗೆ 80 ಸಾವಿರ ಹಣವನ್ನು ಕಳ್ಳ ಕದ್ದು ಪರಾರಿಯಾಗಿದ್ದಾನೆ. ಕಳ್ಳತನ ನಡೆದ ಅಂಗಡಿಯೂ ಶೃಂಗೇರಿ ಶಾರದಾಂಬೆ ದೇವಾಲಯದ ಪಾರ್ಕಿಂಗ್ ಲಾಟ್‍ನ ಪಕ್ಕದಲ್ಲಿದೆ.

ದೇವರಿಗೆ ಇಟ್ಟಿದ್ದ ಹಣ ಹಾಗೂ ಫುಟ್ ಪಾತ್ ಅಂಗಡಿಗಳಲ್ಲಿ ಹಣ ಕಳ್ಳತನ ನಡೆದಿದ್ದು, ಪುಟ್ ಪಾತ್‌ನಲ್ಲಿ ಅಂಗಡಿ ಹಾಕಿರುವವರು ದುಡಿದ ಹಣವನ್ನ ಅಂಗಡಿಯಲ್ಲಿ ಇಟ್ಟು ಬೆಳಗ್ಗೆ ಪಡೆದುಕೊಳ್ತಾರೆ. ಇದೆಲ್ಲವನ್ನು ಗಮನಿಸಿದ ಯಾರೋ ತಿಳಿದವರಿಂದಲೇ ಈ ಕಳ್ಳತನ ಕೃತ್ಯ ನಡೆದಿದೆ ಎಂದು ಸ್ಥಳೀಯರು ಅನುಮಾನ ಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ನಾರಾಯಣ ಹೃದಯಾಲಯದ ನರ್ಸ್‌ ಹೊಳೆಗೆ ಹಾರಿ ಸಾವಿಗೆ ಶರಣು

Source link

Leave a Reply

Your email address will not be published. Required fields are marked *