BWSSB: ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ | Disruption In Cauvery Water Supply In Major Parts Of Bengaluru For Two Days Mrq

BWSSB: ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ | Disruption In Cauvery Water Supply In Major Parts Of Bengaluru For Two Days Mrq



BWSSB: ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ | Disruption In Cauvery Water Supply In Major Parts Of Bengaluru For Two Days Mrq

Water supply will be disrupted: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತುರ್ತು ನಿರ್ವಹಣೆ ಕಾಮಗಾರಿಯಿಂದಾಗಿ ಫೆಬ್ರವರಿ 5 ಮತ್ತು 6 ರಂದು ನಗರದ ಹಲವು ಭಾಗಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವ್ಯಾಪ್ತಿಯಲ್ಲಿಯಲ್ಲಿ ಮುಂದಿನ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆ ನಗರದ ವಿವಿಧೆಡೆ ಎರಡು ದಿನ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಫೆ 5ರಂದು ಹಾಗೂ 6 ಎರಡು ದಿನ ನೀರಿನ‌ ಪೂರೈಕೆಯಲ್ಲಿ ಸ್ಥಗಿತವಾಗಲಿದೆ. ಫೆಬ್ರವರಿ 6 ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ರವರೆಗೆ ಒಟ್ಟು 24 ಗಂಟೆ ಸ್ಥಗಿತವಾಗಲಿದೆ. ಹೀಗಾಗಿ ಮುಂಜಾಗ್ರತೆಯಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಗ್ರಾಹಕರಿಗೆ ಸೂಚನೆ ನೀಡಲಾಗಿದೆ.

ಎಲ್ಲೆಲ್ಲಿ ನೀರು ವ್ಯತ್ಯಯವಾಗಲಿದೆ?

ಬೆಂಗಳೂರು ನಗರದ ಮಾಗಡಿ ರಸ್ತೆ, ಕದ್ರೆನಹಳ್ಳಿ, ಗಂಗಾಧರ ನಗರ, ಪ್ರಗತಿಪುರ, ಪದ್ಮನಾಭ ನಗರ, ಆರ್.ಕೆ ಲೇಔಟ್, ಚಿಕ್ಕಲ್ಲಸಂದ್ರ, ಹನುಮಗಿರಿ ನಗರ, ಮುನೇಶ್ವರ ನಗರ, ಬೇಂದ್ರೆನಗರ, ಕುಮಾರಸ್ವಾಮಿ ಬಡಾವಣೆ 1ನೇ ಮತ್ತು 2ನೇ ಹಂತ, ಚಂದ್ರನಗರ, ಮಾರುತಿ ಬಡಾವಣೆ, ವಿಠ್ಠಲ್ ನಗರ, ಇಸ್ರೋ ಬಡಾವಣೆ, ಟೀಚರ್ಸ್ ಕಾಲೋನಿ, ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಇಲಿಯಾಸ್ ನಗರ, ಪೂರ್ಣ ಪ್ರಜ್ಞಾ ಬಡಾವಣೆ, ಮಿನಜ್ ನಗರ, ಉತ್ತರಹಳ್ಳಿ, ಕೆ.ಎಸ್.ಆರ್.ಟಿ.ಸಿ ಬಡಾವಣೆ

ಅಂಕಪ್ಪ ಬಡಾವಣೆ, ಗುಮ್ಮಯ್ಯ ಬಡಾವಣೆ, ಬನಶಂಕರಿ 5ನೇ ಹಂತ, ಎಜಿ.ಎಸ್ ಬಡಾವಣೆ, ಸಾರ್ವಭೌಮನಗರ ಸುಬ್ರಮಣ್ಯಪುರ, ಬಿ.ಹೆಚ್.ಸಿ.ಎಸ್ ಬಡಾವಣೆ, ಕೆನರಾ ಬ್ಯಾಂಕ್ ಕಾಲೋನಿ, ಕಾಕತೀಯ ನಗರ, ಸುದ್ದಗುಂಟೆಪಾಳ್ಯ, ಮಾರುತಿ ನಗರ, ಭವಾನಿ ಲೇಔಟ್‌, ವೆಂಟೇಶ್ವರ ಬಡಾವಣೆ, ಬೃಂದಾವನ ಲೇಔಟ್‌, ಮಡಿವಾಳ, ಚಿನ್ನಮ್ಮ ಲೇಔಟ್‌, ಕೋರಮಂಗಲ 2,4,5,6,7 ಮತ್ತು 8 ನೇ ಬ್ಲಾಕ್‌, ಚಿಕ್ಕಆಡುಗೋಡಿ, ಸೆಂಟ್‌ ಜಾನ್‌ ಆಸ್ಪತ್ರೆ, ರಾಜೇಂದ್ರ ನಗರ, ಆಡುಗೋಡಿ, ಜಾನ್ಸ್‌ನ್‌ ಮಾರ್ಕೆಟ್‌, ಸಿಎಲ್‌ಆರ್‌, ಶಾಂತಿನಗರ, ಲಾಗ್‌ ಪೋರ್ಡ್‌ ಟೌನ್‌

ಎಂಜಿ ರಸ್ತೆ, ರಿಚ್‌ಮಂಡ್‌ ಟೌನ್‌, ನೀಲಸಂದ್ರ, ಅಶೋಕ್‌ ನಗರ, ಆಸ್ಟಿನ್‌ ಟೌನ್‌, ವಿವೇಕ್‌ ನಗರ, ಈಜಿಪುರ, ದೊಮ್ಮಲೂರು ಲೇಔಟ್‌, ದೊಮ್ಮಲೂರು ವಿಲೇಜ್‌, ಕೋಡಿಹಳ್ಳಿ, ಕಮಾಂಡೋ ಆಸ್ಪತ್ರೆ, ಜೋಗಿಪಾಳ್ಯ, ಕೇಂಬ್ರಿಡ್ಜ್‌ ಲೇಔಟ್‌ ಚಾಮರಾಜಪೇಟೆ, ಶ್ರೀನಗರ ಬಿಎಸ್‌ಕೆ 1ನೇ ಹಂತ.

ಅಶೋಕ್‌ ನಗರ ಪೈಪ್‌ ಲೈನ್‌ ರಸ್ತೆ, ಜಯನಗರ 4ನೇ ಮತ್ತು ʼಟಿʼ ಬ್ಲಾಕ್‌, ತಿಲಕ್‌ ನಗರ, ಮಾಧವನ ಪಾರ್ಕ್‌, ಹೊಂಬೇಗೌಡ ನಗರ, ಲಕ್ಕಸಂದ್ರ, ಶಾಂತಿನಗರ ಲೇಔಟ್‌, ಜೆಕೆಪುರ, ಅಕ್ಕಿತಿಮ್ಮನ ಹಳ್ಳಿ, ಜಗಜೀವನರಾಮನಗರ, ರುದ್ರಪ್ಪ ಗಾರ್ಡನ್‌, ವಾಲ್ಮೀಕಿ ನಗರ, ಮಾವಳ್ಳಿ, ಶಂಕರಪುರಂ, ಕೆಂಪೇಗೌಡನಗರ, ಸುಧಾಮನಗರ, ಬನಗಿರಿ, ಜಯನಗರ, 6,7 ಮತ್ತು 8ನೇ ಬ್ಲಾಕ್‌

ಇದನ್ನೂ ಓದಿ: ಲಕ್ಕುಂಡಿಗೆ ರಾಜ್ಯ ಸರ್ಕಾರದಿಂದ 2.25 ಕೋಟಿ; 15 ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು?

ಜಲಮಂಡಳಿಯಿಂದ ಮಾಹಿತಿ

ಯಡಿಯೂರು, ಇಟ್ಟಮಡು, ಎಸ್‌ಬಿಎಂ ಕಾಲೋನಿ, ಹೊಸಕೆರೆಹಳ್ಳಿ, ಐಟಿಐ ಲೇಔಟ್‌, ಶ್ರೀನಿವಾಸ ನಗರ, ಡಿಸೋಜಾ ನಗರ, ಕೆರೆಕೋಡಿ, ಮುನೇಶ್ವರ ನಗರ, ಜೆಪಿನಗರ 1, 2 ಮತ್ತು 3ನೇ ಹಂತ, ಮಾರೇನಹಳ್ಳಿ, ಜಯನಗರ 5 ಮತ್ತು 9ನೇ ಬ್ಲಾಕ್‌, ಭೈರಸಂದ್ರ, ಎಲ್‌ ಐ ಸಿ ಕಾಲೋನಿ, ಸಿದ್ದಾಪುರ, ವಿಲ್ಸ್‌ನ್‌ ಗಾರ್ಡನ್, ನಿಮಾನ್ಸ್ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪತ್ರಿಕಾ ಪ್ರಕಟನೆ ಹೊರಡಿಸಿದೆ.

ಇದನ್ನೂ ಓದಿ: BBK 12: ಇಂದಿಗೂ ಆ ನೋವು ಮನಸ್ಸಿನಲ್ಲಿ ಉಳಿದಿದೆ: 15 ದಿನಗಳ ನಂತ್ರ ರಕ್ಷಿತಾ ಶೆಟ್ಟಿ ಪೋಸ್ಟ್



Source link

Leave a Reply

Your email address will not be published. Required fields are marked *