Vastu Tips: ಮನೆಯಲ್ಲಿ ‘ಓಡುತ್ತಿರುವ ಏಳು ಕುದುರೆ’ ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ.. | Every House To Have Seven Running Horses Photo In Their House As The Vastu Tips

Vastu Tips: ಮನೆಯಲ್ಲಿ ‘ಓಡುತ್ತಿರುವ ಏಳು ಕುದುರೆ’ ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ.. | Every House To Have Seven Running Horses Photo In Their House As The Vastu Tips



Vastu Tips: ಮನೆಯಲ್ಲಿ ‘ಓಡುತ್ತಿರುವ ಏಳು ಕುದುರೆ’ ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ.. | Every House To Have Seven Running Horses Photo In Their House As The Vastu Tips

ಸೂರ್ಯನು ಏಳು ಕುದುರೆಗಳಿರುವ ರಥವನ್ನು ಹೊಂದಿದ್ದಾನೆ. ಆ ಚಿತ್ರವನ್ನು ಸಾಕಷ್ಟು ಕಡೆ ಕಾಣಬಹುದಾಗಿದೆ. ಆ ಏಳು ಕುದುರೆಗಳು ವೇಗದಿಂದ ಮೇಲಕ್ಕೆ ಹಾರಿ ನೆಗೆಯುವಂತೆ ಇರುತ್ತವೆ. ಅದರರ್ಥ ಈ ಚಿತ್ರ ಯಶಸ್ಸು ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ ಇದನ್ನು ಮನೆಯಲ್ಲಿ ಇಟ್ಟರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ

Vastu Tips: ಹಲವು ಮನೆಗಳಲ್ಲಿ ‘ಓಡುತ್ತಿರುವ ಏಳು ಕುದುರೆ’ ಇರುವ ಫೋಟೋವನ್ನು ನೀವೂ ನೋಡಿರಬಹುದು. ಆ ಚಿತ್ರಕ್ಕೂ ವಾಸ್ತುವಿಗೂ ಏನಾದರೂ ಸಂಬಂಧ ಇರಬಹುದೇ ಎಂಬ ಪ್ರಶ್ನೆ ನಿಮ್ಮ ಮನದಲ್ಲೂ ಮೂಡಿರಬಹುದು. ಹೌದು, ಆ (Seven Running Horses) ಪೇಂಟಿಂಗ್ ಅಥವಾ ಫೋಟೋ ಇದ್ದರೆ ಮನೆಗೆ ವಾಸ್ತು ಪ್ರಕಾರ ಒಳ್ಳೆಯದಾಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಹಾಗಿದ್ದರೆ ಅದೇನು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಮಾಹಿತಿ..

ಹಲವರು ಜಗತ್ತಿನಲ್ಲಿ ವಾಸ್ತು ನಂಬುತ್ತಾರೆ. ತಮ್ಮ ಮನೆಯಲ್ಲಿ ‘ಓಡುತ್ತಿರುವ ಏಳು ಕುದುರೆಗಳ ಪೇಂಟಿಂಗ್’ ಇಟ್ಟುಕೊಂಡಿರುತ್ತಾರೆ. ಆ ಚಿತ್ರ ಮನೆಯ ಅಲಂಕಾರಕ್ಕೆ ಇಟ್ಟಿರಬಹುದು ಎಂದು ಕೆಲವರು ಅಂದುಕೊಂಡಿರುತ್ತಾರೆ. ಆದರೆ ಅಲಂಕಾರಕ್ಕೆ ಮಾತ್ರವಲ್ಲ, ಅದಕ್ಕೆ ವಾಸ್ತು ಕಾರಣವೂ ಇದೆ. ಆ ಏಳು ಕುದುರೆಯ ಪೇಂಟಿಂಗ್ ಅನ್ನು ಮನೆಯಲ್ಲಿ ಇಟ್ಟರೆ ಅದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ. ಹಣಕಾಸು ಸಮಸ್ಯೆಯೂ ಎದುರಾಗುವುದಿಲ್ಲ ಎನ್ನಲಾಗುತ್ತದೆ. ಅಷ್ಟೇ ಅಲ್ಲ ಆ ಏಳು ಕುದುರೆ ಚಿತ್ರದಿಂದ ಬಹಳಷ್ಟು ಉಪಯೋಗಗಳು ಇವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಅದೇನು?

ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಕೂಡ ಗೆಲುವು ಬಯಸುತ್ತಾರೆ. ಅದಕ್ಕಾಗಿ ತಮ್ಮಂದಿದಾದ ಶ್ರಮವನ್ನೂ ಪಡುತ್ತಾರೆ. ಆದರೆ ಎಷ್ಟೋ ಸಲ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ. ಅದು ಅವರ ತಪ್ಪೋ, ಕರ್ಮದ ಫಲವೋ ಒಂದೂ ಅರ್ಥವಾಗುವುದಿಲ್ಲ. ಈ ಜಗತ್ತಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಶಕ್ತಿಗಳು ಇವೆ ಎಂದು ನಿಮಗೆ ಅರಿವರಬಹುದು. ಆ ಪ್ರಕಾರ ಕರ್ಮ ಫಲಗಳಿಂದ ದೂರವಿದ್ದು, ಸಕಾರಾತ್ಮಕ ವಾತಾವರಣ ಪಡೆಯಬೇಕಾದರೆ ಏಳು ಕುದುರೆಗಳ ಚಿತ್ರ ತರಬೇಕು ಎನ್ನಲಾಗುತ್ತದೆ. ವಾಸ್ತು ಪ್ರಕಾರ ಈ ಚಿತ್ರವು ಮನೆಯಲ್ಲಿ ಸಕಾರಾತ್ಮಕ ವಾತಾವರಣ ಉಂಟು ಮಾಡುತ್ತದೆ ಎನ್ನಲಾಗಿದೆ. ಈ ಪೇಂಟಿಂಗ್ ಅಥವಾ ಫೋಟೋ ಜೀವನಕ್ಕೆ ಸ್ಥಿರತೆ ಮತ್ತು ವೇಗ ಒದಗಿಸುತ್ತದೆ.

ಯಾಕೆ ಓಡುತ್ತಿರುವ ಏಳು ಕುದುರೆಗಳು?

ಸಂಖ್ಯಾ ಶಾಸ್ತ್ರದ ಪ್ರಕಾರವೂ 7 ಮಹತ್ವದ ಸಂಖ್ಯೆಯಾಗಿದೆ ಮತ್ತು ಅದೃಷ್ಟದ ಸಂಖೆ ಎಂದೇ ಗುರುತಿಸಿಕೊಂಡಿದೆ. ಸಂಗೀತದಲ್ಲಿ ಏಳು ಸ್ವರಗಳೀವೆ, ಕಾಮನಬಿಲ್ಲಿನಲ್ಲಿಯೂ ಏಳು ಬಣ್ಣಗಳಿವೆ. ಅಷ್ಟೇ ಅಲ್ಲ, ಸಪ್ತ ಸಾಗರಗಳೂ ಇವೆ. ಮದುವೆ ಸಮಯದಲ್ಲಿ ಸಪ್ತಪದಿ ತುಳಿಸಲಾಗುತ್ತದೆ. ಸಪ್ತರ್ಷಿಗಳ ಬಗ್ಗೆ ಮಾತು ಇದೆ, ಏಳಕ್ಕೆ ಸಾಕಷ್ಟು ಮಹತ್ವವಿದೆ. ಅದೇ ರೀತಿಯಲ್ಲಿ ಏಳು ಕುದುರೆಗಳ ಚಿತ್ರವು ಕೂಡ ಪ್ರಮುಖವಾಗಿದೆ ಎನ್ನಲಾಗುತ್ತಿದೆ. ವಾಸ್ತು ಶಾಸ್ತ್ರದ ಪ್ರಕಾರ ಆ ಏಳು ಕುದುರೆಗಳಿಗೂ ಪ್ರತ್ಯೇಕ ಅರ್ಥವಿದೆ, ಮಹತ್ವವಿದೆ ಎನ್ನಲಾಗುತ್ತದೆ.

ವೃತ್ತಿಯಲ್ಲಿ ಯಶಸ್ಸು

ಸೂರ್ಯನು ಏಳು ಕುದುರೆಗಳಿರುವ ರಥವನ್ನು ಹೊಂದಿದ್ದಾನೆ. ಆ ಚಿತ್ರವನ್ನು ಸಾಕಷ್ಟು ಕಡೆ ಕಾಣಬಹುದಾಗಿದೆ. ಆ ಏಳು ಕುದುರೆಗಳು ವೇಗದಿಂದ ಮೇಲಕ್ಕೆ ಹಾರಿ ನೆಗೆಯುವಂತೆ ಇರುತ್ತವೆ. ಅದರರ್ಥ ಈ ಚಿತ್ರ ಯಶಸ್ಸು ಮತ್ತು ಶಕ್ತಿಯನ್ನು ಪ್ರತಿನಿಧಿಸುತ್ತದೆ ಅಂತ. ಹಾಗಾಗಿ ಈ ಚಿತ್ರವನ್ನು ಮನೆಯಲ್ಲಿ ಇಟ್ಟರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ, ಲೈಫಲ್ಲಿ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಏಳು ಕುದುರೆಗಳು ಇರುವ ಫೋಟೋವನ್ನು ಮನೆಯಲ್ಲಿ ಹಾಕಿಕೊಂಡವರು ವೃತ್ತಿಯಲ್ಲಿ ಯಶಸ್ಸು ಸಾಧಿಸುತ್ತಾರೆ. ವ್ಯಕ್ತಿಯು ಸಮತೋಲನ ಮನಸ್ಥಿತಿಯಿಂದ ಇರುವಂತೆ ಮಾಡುತ್ತದೆ ಎನ್ನಲಾಗುತ್ತದೆ.

ಜೊತೆಗೆ, ಕುದುರೆಯು ಸ್ಥಿರತೆ, ಧೈರ್ಯ, ನಿಷ್ಠೆ ಮತ್ತು ಶಕ್ತಿಯ ಸಂಕೇತ. ಆ ಕಾರಣದಿಂದಲೂ ಈ ಚಿತ್ರವನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ನಂಬಲಾಗಿದೆ. ಜೊತೆಗೆ ಇದರಿಂದ ಆರ್ಥಿಕ ಸಮಸ್ಯೆ ಪರಿಹಾರವಾಗಿ ಮನೆಯಲ್ಲಿ ಸುಖ-ಸಮೃದ್ಧಿ ಲಭಿಸುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.



Source link

Leave a Reply

Your email address will not be published. Required fields are marked *