Headlines

ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್: 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ | Astrazeneca Bengaluru 64 Acre Land Sale 3400 Crore Real Estate Deal San

ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್: 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ | Astrazeneca Bengaluru 64 Acre Land Sale 3400 Crore Real Estate Deal San



ಬೆಂಗಳೂರಿನಲ್ಲಿ ಆಸ್ಟ್ರಾಜೆನೆಕಾ ಭಾರಿ ಡೀಲ್: 64 ಎಕರೆ ಭೂಮಿಯನ್ನು ಭಾರೀ ಬೆಲೆಗೆ ಮಾರಲಿರುವ ಫಾರ್ಮಾ ಕಂಪನಿ | Astrazeneca Bengaluru 64 Acre Land Sale 3400 Crore Real Estate Deal San

ಜಾಗತಿಕ ಬಯೋಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ, ಉತ್ತರ ಬೆಂಗಳೂರಿನಲ್ಲಿರುವ ತನ್ನ 64 ಎಕರೆ ಉತ್ಪಾದನಾ ಘಟಕದ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸುಮಾರು ₹3,400 ಕೋಟಿ ಮೌಲ್ಯದ ಈ ಭೂಮಿಗಾಗಿ ಸತ್ತ್ವ ಗ್ರೂಪ್, ಅರಬಿಂದೋ ಫಾರ್ಮಾ ಮತ್ತು ಆರ್‌ಎಂಝಡ್‌ ಕಂಪನಿಗಳು ತೀವ್ರ ಆಸಕ್ತಿ ತೋರಿಸಿವೆ. 

ಬೆಂಗಳೂರು (ಏ.10): ಜಾಗತಿಕ ಬಯೋಫಾರ್ಮಾಸ್ಯುಟಿಕಲ್ ದೈತ್ಯ ಅಸ್ಟ್ರಾಜೆನೆಕಾ (AstraZeneca) ಸಂಸ್ಥೆಯ ಭಾರತೀಯ ಘಟಕವು ಉತ್ತರ ಬೆಂಗಳೂರಿನಲ್ಲಿರುವ ತನ್ನ 64 ಎಕರೆ ವಿಸ್ತೀರ್ಣದ ಉತ್ಪಾದನಾ ಘಟಕದ ಭೂಮಿಯನ್ನು ಮಾರಾಟ ಮಾಡಲು ಸಜ್ಜಾಗಿದೆ. ತನ್ನ ಜಾಗತಿಕ ಉತ್ಪಾದನೆ ಮತ್ತು ಪೂರೈಕೆ ಜಾಲವನ್ನು ಮರುಪರಿಶೀಲಿಸುವ ಭಾಗವಾಗಿ ಯುಕೆ ಮೂಲದ ಮಾತೃ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ಮಾರುಕಟ್ಟೆ ತಜ್ಞರ ಅಂದಾಜಿನ ಪ್ರಕಾರ, ಈ ಭೂಮಿಯ ಬೆಲೆ ಪ್ರತಿ ಎಕರೆಗೆ ಸುಮಾರು ₹53 ಕೋಟಿಗೂ ಅಧಿಕವಾಗಿದೆ. ಈ ಒಟ್ಟು 64 ಎಕರೆ ಭೂಮಿಯು ಅಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ ಸಂಸ್ಥೆಗೆ ಅಂದಾಜು ₹3,400 ಕೋಟಿ ಆದಾಯ ತಂದುಕೊಡುವ ನಿರೀಕ್ಷೆಯಿದೆ. ಈ ಭಾರಿ ಮೊತ್ತದ ಡೀಲ್ ಕುರಿತು ಈಗಾಗಲೇ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಗಳಾದ ಸತ್ತ್ವ ಗ್ರೂಪ್ (Sattva Group), ಅರಬಿಂದೋ ಫಾರ್ಮಾ (Aurobindo Pharma) ಮತ್ತು ಆರ್‌ಎಂಝಡ್ (RMZ) ತೀವ್ರ ಆಸಕ್ತಿ ತೋರಿಸಿವೆ.

ಪ್ರಕ್ರಿಯೆ ಯಾವ ಹಂತದಲ್ಲಿದೆ?

ವರದಿಗಳ ಪ್ರಕಾರ, ಅಸ್ಟ್ರಾಜೆನೆಕಾ ಈಗಾಗಲೇ ಮೂವರು ಪ್ರಮುಖ ಬಿಡ್ಡರ್‌ಅನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಅತಿ ಶೀಘ್ರದಲ್ಲೇ ವಿಜೇತ ಬಿಡ್ಡರ್‌ಗೆ ಭೂಮಿಯನ್ನು ಹಸ್ತಾಂತರಿಸುವ ನಿರೀಕ್ಷೆಯಿದೆ. ಈ ಹಿಂದೆ ಕಂಪನಿಯು ಈ ಘಟಕವನ್ನು ‘ಚಾಲ್ತಿಯಲ್ಲಿರುವ ಆಸ್ತಿ’ (Running Asset) ಎಂದು ಪರಿಗಣಿಸಿ, ಅಲ್ಲಿನ ಉತ್ಪಾದನಾ ಪ್ರಕ್ರಿಯೆಯನ್ನು ಮುಂದುವರಿಸುವ ಖರೀದಿದಾರರಿಗಾಗಿ ಹುಡುಕಾಟ ನಡೆಸಿತ್ತು. ಆದರೆ ಈಗ ಕಂಪನಿಯು ಸಂಪೂರ್ಣವಾಗಿ ಭೂಮಿಯಿಂದ ನಿರ್ಗಮಿಸಲು ನಿರ್ಧರಿಸಿದ್ದು, ಅಲ್ಲಿ ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳನ್ನು ನಿರ್ಮಿಸಲು ಅವಕಾಶ ಕಲ್ಪಿಸಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಘಟಕದ ಮಹತ್ವ

1979ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಸ್ಥಾಪಿಸಿದ ಅಸ್ಟ್ರಾಜೆನೆಕಾ ಫಾರ್ಮಾ ಇಂಡಿಯಾ, ತನ್ನ ಈ ಘಟಕವನ್ನು ಕ್ಲಿನಿಕಲ್ ಟ್ರಯಲ್ ವಿನ್ಯಾಸ, ಸುರಕ್ಷತೆ ಮತ್ತು ದಕ್ಷತೆಯ ಮೇಲ್ವಿಚಾರಣೆ ಹಾಗೂ ನಿಯಂತ್ರಕ ಅನುಸರಣೆಗಾಗಿ ಬಳಸಿಕೊಳ್ಳುವ ಜಾಗತಿಕ ಒಂಬತ್ತು ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು.

ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಂತಹ ಪ್ರಮುಖ ನಗರಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರುತ್ತಿರುವುದರಿಂದ, ದೊಡ್ಡ ಕಂಪನಿಗಳು ತಮ್ಮ ಬಳಿ ಇರುವ ಬಳಕೆಯಾಗದ ಭೂಮಿಯನ್ನು ಮಾರಾಟ ಮಾಡಿ ಹಣಗಳಿಸುವ (Land Monetisation) ಪ್ರವೃತ್ತಿ ಹೆಚ್ಚಾಗಿದೆ. ಭೂಮಿಯ ಕೊರತೆ ಎದುರಿಸುತ್ತಿರುವ ಗೋದ್ರೇಜ್‌ ಪ್ರಾಪರ್ಟೀಸ್ ಮತ್ತು ಪ್ರೆಸ್ಟೀಜ್ ಗ್ರೂಪ್‌ನಂತಹ ಕಂಪನಿಗಳು ಇಂತಹ ಬೃಹತ್ ಭೂಭಾಗಗಳನ್ನು ಖರೀದಿಸಲು ಮುಗಿಬೀಳುತ್ತಿವೆ. ಪ್ರಸ್ತುತ ಈ ಭೂಮಿ ಮಾರಾಟದ ಕುರಿತು ಸತ್ತ್ವ, ಅರಬಿಂದೋ ಫಾರ್ಮಾ ಅಥವಾ ಆರ್‌ಎಂಝಡ್ ಸಂಸ್ಥೆಗಳು ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.



Source link

Leave a Reply

Your email address will not be published. Required fields are marked *