‘ಆರಕ್ಕೆ ಏರಿಸಲ್ಲ, ಮೂರಕ್ಕೆ ಇಳಿಸಲ್ಲ’.. ರಾಕ್‌ಲೈನ್ ವೆಂಕಟೇಶ್‌ ಬಗ್ಗೆ ನಟ ಸುದೀಪ್ ಹೀಗ್ ಹೇಳಿದ್ಯಾಕೆ? | Kichcha Sudeep Talk On Rockline Venkatesh And Their Friendship Beyond With Movie

‘ಆರಕ್ಕೆ ಏರಿಸಲ್ಲ, ಮೂರಕ್ಕೆ ಇಳಿಸಲ್ಲ’.. ರಾಕ್‌ಲೈನ್ ವೆಂಕಟೇಶ್‌ ಬಗ್ಗೆ ನಟ ಸುದೀಪ್ ಹೀಗ್ ಹೇಳಿದ್ಯಾಕೆ? | Kichcha Sudeep Talk On Rockline Venkatesh And Their Friendship Beyond With Movie



‘ಆರಕ್ಕೆ ಏರಿಸಲ್ಲ, ಮೂರಕ್ಕೆ ಇಳಿಸಲ್ಲ’.. ರಾಕ್‌ಲೈನ್ ವೆಂಕಟೇಶ್‌ ಬಗ್ಗೆ ನಟ ಸುದೀಪ್ ಹೀಗ್ ಹೇಳಿದ್ಯಾಕೆ? | Kichcha Sudeep Talk On Rockline Venkatesh And Their Friendship Beyond With Movie

ಕಿಚ್ಚ ಸುದೀಪ್ ಹಾಗೂ ರಾಕ್‌ಲೈನ್ ವೆಂಕಟೇಶ್ ಸ್ನೇಹಿತರಲ್ಲಿ ಒಬ್ಬರು ನಟನೆಯಲ್ಲಿ ಕಿಂಗ್ ಆಗಿದ್ದರೆ, ಇನ್ನೊಬ್ಬರು ಅದ್ದೂರಿ ಸಿನಿಮಾ ಮೇಕಿಂಗ್‌ನಲ್ಲಿ ಕಿಂಗ್. ಈ ಅಪ್ರತಿಮ ಜೋಡಿ ಚಿತ್ರರಂಗದಲ್ಲಿ ಸ್ನೇಹಕ್ಕೆ ಒಂದು ಹೊಸ ಅರ್ಥ ನೀಡಿದೆ. ಅವರಿಬ್ಬರ ಕಾಂಬಿನೇಶನ್‌ನಲ್ಲಿ ಮುಂದೆ ಸಿನಿಮಾ ಬರಲಿದೆಯಾ?  

ಸ್ಯಾಂಡಲ್‌ವುಡ್‌ನ ಅಪರೂಪದ ಜೋಡಿ: ರಾಕ್‌ಲೈನ್ ವೆಂಕಟೇಶ್ ಮತ್ತು ಕಿಚ್ಚ ಸುದೀಪ್‌ ಸ್ನೇಹದ ಕಹಾನಿ!

ಚಿತ್ರರಂಗ ಅಂದಮೇಲೆ ಇಲ್ಲಿ ಸಂಬಂಧಗಳು ಶಾಶ್ವತವಲ್ಲ, ಸಮಯಕ್ಕೆ ತಕ್ಕಂತೆ ಬದಲಾಗುತ್ತವೆ ಎಂಬ ಮಾತು ಸಿನಿವಲಯದಲ್ಲಿ ಸಾಮಾನ್ಯವಾಗಿ ಕೇಳಿಬರುತ್ತದೆ. ಆದರೆ, ಈ ಮಾತನ್ನು ಸುಳ್ಳು ಮಾಡಿ ದಶಕಗಳಿಂದಲೂ ಗಟ್ಟಿಯಾದ ಸ್ನೇಹವನ್ನು ಕಾಪಾಡಿಕೊಂಡು ಬಂದಿರುವವರು ಕನ್ನಡ ಚಿತ್ರರಂಗದ ಇಬ್ಬರು ದೈತ್ಯ ಪ್ರತಿಭೆಗಳಾದ ನಟ ಕಿಚ್ಚ ಸುದೀಪ್ (Kichcha Sudeep) ಮತ್ತು ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh). ಇವರಿಬ್ಬರ ಸ್ನೇಹ ಕೇವಲ ವ್ಯವಹಾರಕ್ಕೆ ಸೀಮಿತವಾಗಿಲ್ಲ, ಅದನ್ನೂ ಮೀರಿ ಬೆಳೆದು ನಿಂತಿರುವ ಒಂದು ಸುಂದರ ಬಾಂಧವ್ಯ.

ತೆರೆಯ ಮೇಲೆ ಒಂದಾಗಿದ್ದ ‘ಕಾಮಣ್ಣನ ಮಕ್ಕಳು’

ಇವರಿಬ್ಬರ ಒಡನಾಟ ಇಂದಿನದಲ್ಲ, ಸುಮಾರು ಎರಡು ದಶಕಗಳ ಹಳೆಯದು. ನಿಮಗೆ ನೆನಪಿರಲಿ, 2008ರಲ್ಲಿ ತೆರೆಕಂಡಿದ್ದ ‘ಕಾಮಣ್ಣನ ಮಕ್ಕಳು’ ಎಂಬ ಕಾಮಿಡಿ ಡ್ರಾಮಾ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತು ರಾಕ್‌ಲೈನ್ ವೆಂಕಟೇಶ್ ಒಟ್ಟಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಇವರಿಬ್ಬರ ಕಾಂಬಿನೇಷನ್ ಮತ್ತು ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿತ್ತು. ಅಂದು ನಟರಾಗಿ ಬೆಸೆದ ಇವರ ಸ್ನೇಹದ ಕೊಂಡಿ ಇಂದಿಗೂ ಕಿಂಚಿತ್ತೂ ಸಡಿಲವಾಗಿಲ್ಲ. ಒಬ್ಬರನ್ನೊಬ್ಬರು ಗೌರವಿಸುವ ಮತ್ತು ಕಷ್ಟದ ಸಮಯದಲ್ಲಿ ಜೊತೆಗಿರುವುದು ಈ ಜೋಡಿಯ ವಿಶೇಷತೆ.

ನಿರ್ಮಾಪಕ ಮತ್ತು ನಟನಾಗಿ ಯಶಸ್ವಿ ಪಯಣ

ಕಾಲಕ್ರಮೇಣ ಸುದೀಪ್ ಅವರು ಕನ್ನಡ ಚಿತ್ರರಂಗದ ಗ್ಲೋಬಲ್ ಸ್ಟಾರ್ ಆಗಿ ಬೆಳೆದರೆ, ರಾಕ್‌ಲೈನ್ ವೆಂಕಟೇಶ್ ಅವರು ದಕ್ಷಿಣ ಭಾರತದ ಹೆಮ್ಮೆಯ ಹಾಗೂ ಅದ್ದೂರಿ ಚಿತ್ರಗಳ ನಿರ್ಮಾಪಕರಾಗಿ ಗುರುತಿಸಿಕೊಂಡರು. ಈ ಸ್ನೇಹದ ಮುಂದಿನ ಘಟ್ಟ ಎನ್ನುವಂತೆ, ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಕೋಟಿಗೊಬ್ಬ 2’ ಅನ್ನು ರಾಕ್‌ಲೈನ್ ವೆಂಕಟೇಶ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದರು. 2016ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದರ ಜೊತೆಗೆ, ವೃತ್ತಿಪರವಾಗಿಯೂ ಈ ಜೋಡಿ ಎಷ್ಟು ಶಕ್ತಿಯುತ ಎಂಬದನ್ನು ಸಾಬೀತುಪಡಿಸಿತು.

‘ದುಡ್ಡು ಇದ್ದ ತಕ್ಷಣ ಎಲ್ರೂ ದೊಡ್ಡವರಾಗಲ್ಲ. ಕೆಲವರು ದುಡ್ಡಿನ ವಿಷ್ಯದಲ್ಲಿ ಬೆಳಿತಾ ಬೆಳಿತಾ ವ್ಯಕ್ತಿತ್ವದ ವಿಷಯದಲ್ಲಿ ಹಾಗೇ ಇರ್ತಾರೆ. ಆದ್ರೆ ರಾಕ್‌ಲೈನ್ ವೆಂಕಟೇಶ್ ಹಾಗಲ್ಲ, ಹಣದ ಜೊತೆ ಗುಣದಲ್ಲೂ ಬೆಳೆದವರು. ಮಾತಲ್ಲಿ ತೂಕ ಇರುತ್ತೆ, ಯಾವ್ದೇ ನಿರ್ಧಾರ ತಗೊಂಡದ್ರೂ ಪಕ್ಕಾ ಇರುತ್ತೆ.. ಮೀಟಿಂಗ್ ಅಂತ ಬಂದಾಗ, ಯಾರು ಏನ್ ಹೇಳ್ತಾರೋ ಅದನ್ನೆಲ್ಲಾ ಸಂಪೂರ್ಣವಾಗಿ ಕೇಳಿಸ್ಕೋತಾರೆ, ಆಮೇಲೆ ಮಾತಾಡ್ತಾರೆ.

ರಾಕ್‌ಲೈನ್ ಜೊತೆ ನಾನು ಕಾಮಣ್ಣನ ಮಕ್ಕಳು ಸಿನಿಮಾದಲ್ಲಿ ನಟಿಸಿದ್ದೇನೆ. ಅವರ ಬ್ಯಾನರ್‌ನಲ್ಲಿ ಸಿನಿಮಾ ಡೈರೆಕ್ಷನ್ ಮಾಡ್ಬೇಕು ಅಂತ ಜಗಳನೂ ಆಡಿದೀನಿ.. ಅವ್ರಲ್ಲಿ ನಂಗೆ ಇಷ್ಟ ಆಗೋ ಸಂಗತಿ ಅದೂ ಕೂಡ… ಏನು ಅಂದ್ರೆ, ಅವ್ರು ಯಾರನ್ನೂ ಆರಕ್ಕೆ ಏರಿಸಲ್ಲ, ಮೂರಕ್ಕೆ ಇಳಿಸಲ್ಲ. ಜೊತೆಗೆ, ತಮ್ಮ ಸಿನಿಮಾ ಗೆದ್ದರೆ ಊರೆಲ್ಲಾ ತಮಟೆ ಹೊಡ್ಕೊಂಡು ಹೋಗಲ್ಲ, ಸೋತರೆ ಊರೆಲ್ಲಾ ಹೇಳ್ಕೊಂಡು ಓಡಾಡಲ್ಲ. ಅವರು ಸೋಲು-ಗೆಲುವು ಎರಡನ್ನೂ ಚೆನ್ನಾಗಿ ಬ್ಯಾಲೆನ್ಸ್ ಮಾಡ್ತಾರೆ.. ಆದ್ರೆ, ಅವ್ರಹತ್ರ ಹೇಳಿದ್ದು ಮಾತನ್ನು ಉಳಿಸ್ಕೋಬೇಕು, ಅದೊಂದ್ರಲ್ಲಿ ಪಕ್ಕಾ ಅವ್ರು’ ಎಂದಿದ್ದಾರೆ ನಟ ಕಿಚ್ಚ ಸುದೀಪ್.

2024ರಲ್ಲಿ ತೆರೆಗೆ ಬಂದ ‘ಮ್ಯಾಕ್ಸ್’ ಸಿನಿಮಾ ದೊಡ್ಡ ಹಿಟ್

2024ರ ಕೊನೆಯಲ್ಲಿ ತೆರೆಗೆ ಬಂದಿದ್ದ ‘ಮ್ಯಾಕ್ಸ್’ (Max) ಸಿನಿಮಾ ಸೂಪರ್ ಹಿಟ್ ಆಗಿತ್ತು. ಅ ಬಳಿಕ ಕಿಚ್ಚ ಸುದೀಪ್ ಅಭಿನಯದಲ್ಲಿ 2025ರ ಕೊನೆಯಲ್ಲಿ ತೆರೆಗೆ ಬಂದಿರುವ ‘ಮಾರ್ಕ್’ ಸಿನಿಮಾ ಕೂಡ ಸಾಕಷ್ಟು ಸದ್ದು ಮಾಡಿತ್ತು. ಕಿಚ್ಚ ಸುದೀಪ್ ನಟನೆ ಹಾಗೂ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಇನ್ನೂ ಹೆಚ್ಚಿನ ಸಿನಿಮಾಗಳನ್ನು ಕನ್ನಡನಾಡಿನ ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ ಎನ್ನಬಹುದು.

ಕಿಚ್ಚ ಸುದೀಪ್ ಹಾಗೂ ರಾಕ್‌ಲೈನ್ ವೆಂಕಟೇಶ್ ಸ್ನೇಹಿತರಲ್ಲಿ ಒಬ್ಬರು ನಟನೆಯಲ್ಲಿ ಕಿಂಗ್ ಆಗಿದ್ದರೆ, ಇನ್ನೊಬ್ಬರು ಅದ್ದೂರಿ ಸಿನಿಮಾ ಮೇಕಿಂಗ್‌ನಲ್ಲಿ ಕಿಂಗ್. ಈ ಅಪ್ರತಿಮ ಜೋಡಿ ಚಿತ್ರರಂಗದಲ್ಲಿ ಸ್ನೇಹಕ್ಕೆ ಒಂದು ಹೊಸ ಅರ್ಥ ನೀಡಿದೆ. ಅವರಿಬ್ಬರ ಕಾಂಬಿನೇಶನ್‌ನಲ್ಲಿ ಮುಂದೆ ಸಿನಿಮಾ ಬರಲಿ, ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿ, ಮತ್ತು ಈ ಗೆಳೆತನ ಹೀಗೆಯೇ ಮುಂದುವರಿಯಲಿ ಎಂಬುದು ಕಿಚ್ಚನ ಅಭಿಮಾನಿಗಳ ಹಾರೈಕೆಯಾಗಿದೆ.



Source link

Leave a Reply

Your email address will not be published. Required fields are marked *