Headlines

ದುಬೈ, ಯುಎಇ ವಾಯು ಪ್ರದೇಶ ಪೂರ್ಣ ಬಂದ್‌ – ಟೆಹ್ರಾನ್‌ ಮೇಲಿನ ದಾಳಿ ವಿಸ್ತರಣೆ : ಘೋಷಣೆ | Airspace Fully Closed Over Dubai United Arab Emirates

ದುಬೈ, ಯುಎಇ ವಾಯು ಪ್ರದೇಶ ಪೂರ್ಣ ಬಂದ್‌ – ಟೆಹ್ರಾನ್‌ ಮೇಲಿನ ದಾಳಿ ವಿಸ್ತರಣೆ : ಘೋಷಣೆ | Airspace Fully Closed Over Dubai United Arab Emirates



ದುಬೈ, ಯುಎಇ ವಾಯು ಪ್ರದೇಶ ಪೂರ್ಣ ಬಂದ್‌ – ಟೆಹ್ರಾನ್‌ ಮೇಲಿನ ದಾಳಿ ವಿಸ್ತರಣೆ : ಘೋಷಣೆ | Airspace Fully Closed Over Dubai United Arab Emirates

ಗಲ್ಫ್‌ ರಾಷ್ಟ್ರಗಳ ಮೇಲೆ ಇರಾನ್‌ ಕಡೆಯಿಂದ ಕ್ಷಿಪಣಿ ದಾಳಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ, ಡ್ರೋನ್‌ ಮತ್ತು ಕ್ಷಿಪಣಿಗಳನ್ನು ತಡೆದು ಹೊಡೆದುಹಾಕುವ ಸಲುವಾಗಿ ದುಬೈ ಮತ್ತು ಯುಎಇಯ ವಾಯುವಲಯವನ್ನು ವಿಮಾನಗಳ ಪಾಲಿಗೆ ಸಂಪೂರ್ಣವಾಗಿ ಮುಚ್ಚಲಾಗಿದೆ.

ದುಬೈ: ಗಲ್ಫ್‌ ರಾಷ್ಟ್ರಗಳ ಮೇಲೆ ಇರಾನ್‌ ಕಡೆಯಿಂದ ಕ್ಷಿಪಣಿ ದಾಳಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ, ಡ್ರೋನ್‌ ಮತ್ತು ಕ್ಷಿಪಣಿಗಳನ್ನು ತಡೆದು ಹೊಡೆದುಹಾಕುವ ಸಲುವಾಗಿ ದುಬೈ ಮತ್ತು ಯುಎಇಯ ವಾಯುವಲಯವನ್ನು ವಿಮಾನಗಳ ಪಾಲಿಗೆ ಸಂಪೂರ್ಣವಾಗಿ ಮುಚ್ಚಲಾಗಿದೆ.

ಅತ್ತ ಕ್ಷಿಪಣಿಯ ಭಾಗಗಳು ಬಿದ್ದು ದುಬೈನಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕತಾರ್‌ ಕೂಡ ತನ್ನ ಮೇಲಿನ ದಾಳಿಯನ್ನು ಸಮರ್ಥವಾಗಿ ತಡೆಯುತ್ತಿರುವುದಾಗಿ ಹೇಳಿದೆ.

ತೈಲಘಟಕ ಟಾರ್ಗೆಟ್‌:

ಗಲ್ಫ್‌ ದೇಶಗಳ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ತನ್ನ ದಾಳಿ ಮುಂದುವರೆಸಿರುವ ಇರಾನ್‌, ಇಲ್ಲಿನ ಫುಜೈರಾ ತೈಲಘಟಕದ ಮೇಲೆ ಡ್ರೋನ್‌ ದಾಳಿ ನಡೆಸಿದ್ದು, ಒಂದು ಹಡಗು ನಷ್ಟವಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.

ಇರಾಕ್‌ ಮೇಲೆ ದಾಳಿ:

ಇರಾಕ್‌ನಲ್ಲಿರುವ ಇರಾನ್‌ರ ಪ್ರಾಕ್ಸಿಗಳು ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯನ್ನು ಗುರಿಯಾಗಿಸಿ 4 ಡ್ರೋನ್‌ಗಳಿಂದ ದಾಳಿ ನಡೆಸಿದ್ದು, ಅದನ್ನು ವಿಫಲಗೊಳಿಸಲಾಗಿದೆ.

ತಮ್ಮ ಮನೆ ಮೇಲಿನ ದಾಳಿ ಫೋಟೋ ಹಂಚಿಕೊಂಡ ಮೂವರು ದುಬೈನಲ್ಲಿ ಸೆರೆ

ದುಬೈ: ದೇಶದ ಮೇಲಿನ ಇರಾನ್‌ ದಾಳಿಯ ಕುರಿತ ಯಾವುದೇ ಫೋಟೋ, ವಿಡಿಯೋ ಹಂಚಿಕೊಳ್ಳದಂತೆ ಇತ್ತೀಚೆಗೆ ಆದೇಶ ಹೊರಡಿಸಿದ್ದ ಯುಎಇ ಸರ್ಕಾರ, ಇದೀಗ ತಮ್ಮ ಮೇಲಿನ ದಾಳಿಯ ಫೋಟೋವನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡ ಕಾರಣಕ್ಕೆ ಮೂವರು ವಿದೇಶಿಯನ್ನು ಬಂಧಿಸಿದೆ.

ಕಳೆದ ಬುಧವಾರ ದುಬೈನ ಗ್ರೀಕ್‌ ಹಾರ್ಬರ್‌ ಪ್ರದೇಶದಲ್ಲಿನ ಅಪಾರ್ಟ್‌ಮೆಂಟ್ ಮೇಲೆ ಇರಾನ್‌ ಭೀಕರ ಡ್ರೋನ್‌ ದಾಳಿ ನಡೆಸಿತ್ತು. ದಾಳಿಯಲ್ಲಿ ಅಪಾರ್ಟ್‌ಮೆಂಟ್‌ಗೆ ಸಾಕಷ್ಟು ಹಾನಿಯಾಗಿತ್ತಾದರೂ ಮೂವರು ಯಾವುದೇ ತೊಂದರೆ ಇಲ್ಲದೇ ಬದುಕುಳಿದಿದ್ದರು. ಹೀಗಾಗಿ ಸ್ಫೋಟ ನಡೆದ ಬಳಿಕ ತಾವು ಬದುಕಿದ್ದೇವೆ ಎಂಬುದನ್ನು ಖಚಿತಪಡಿಸಲು ಮೂವರು ವಿದೇಶಿ ಪ್ರಜೆಗಳು ತಮ್ಮ ಸಂಬಂಧಿಕರಿಗೆ ದಾಳಿಗೊಳಗಾದ ಕಟ್ಟಡದ ಫೋಟೋ ಕಳಿಸಿದ್ದರು. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಮೂವರನ್ನೂ ದುಬೈ ಪೊಲೀಸರು ಬಂಧಿಸಿದ್ದಾರೆ.



Source link

Leave a Reply

Your email address will not be published. Required fields are marked *