Headlines

arnataka MLAs’ Foreign Trip: ಶಾಸಕರು ಕೃಷಿ ಅಧ್ಯಯನಕ್ಕೆ ವಿದೇಶಕ್ಕೆ ಹೋಗ್ತಿರಬಹುದು, ಗೊತ್ತಿಲ್ಲ: ಪರಮೇಶ್ವರ್‌ | Home Minister G Parameshwara Unaware Of Details Regarding Mlas Foreign Tour

arnataka MLAs’ Foreign Trip: ಶಾಸಕರು ಕೃಷಿ ಅಧ್ಯಯನಕ್ಕೆ ವಿದೇಶಕ್ಕೆ ಹೋಗ್ತಿರಬಹುದು, ಗೊತ್ತಿಲ್ಲ: ಪರಮೇಶ್ವರ್‌ | Home Minister G Parameshwara Unaware Of Details Regarding Mlas Foreign Tour


arnataka MLAs’ Foreign Trip: ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸವು ಕೃಷಿ ಅಧ್ಯಯನಕ್ಕೆ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಎಚ್.ಸಿ ಮಹದೇವಪ್ಪ ಅವರ ದಲಿತ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಮಂಗಳೂರ (ಫೆ.18): ಶಾಸಕರು ಕೃಷಿ ಅಧ್ಯಯನಕ್ಕಾಗಿ ವಿದೇಶ ಪ್ರವಾಸಕ್ಕೆ ಹೋಗ್ತಿರಬಹುದು, ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. 

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಯಾಕೆ ಹೋಗ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ಕಡೆ ಕೃಷಿ ಇದೆ. ಬಹುಶಃ ಕೃಷಿ ಅಧ್ಯಯನಕ್ಕೆ ಇರಬಹುದು. ಅವರ ಹಣದಲ್ಲಿ ಅವರು ಎಲ್ಲಿಗೆ ಬೇಕಾದರೂ ಹೋಗಬಹುದು. ಹಾಗಂತ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಯಾವ ಕದನವೂ ಇಲ್ಲ ಎಂದರು. 

ರಾಜ್ಯ ಬಜೆಟ್‌ನಲ್ಲಿ ಶಾಸಕರಿಗೆ ಕೆಲಸ ಇಲ್ಲ. ಬಜೆಟ್ ತಯಾರು ಮಾಡೋದು ಸಿಎಂ, ಹಣಕಾಸು ಇಲಾಖೆಯವರು. ಸಿಎಲ್‌ಪಿ ಸಭೆಯಲ್ಲಿ ಬಜೆಟ್ ಕುರಿತು ಶಾಸಕರು ತಮ್ಮ ಅನಿಸಿಕೆಗಳನ್ನು ಈಗಾಗಲೇ ಹೇಳಿದ್ದಾರೆ. ಅವೆಲ್ಲವನ್ನೂ ಕ್ರೋಢೀಕರಿಸಿ ಬಜೆಟ್ ತಯಾರು ಮಾಡುತ್ತಾರೆ ಎಂದು ಪರಮೇಶ್ವರ್‌ ಹೇಳಿದರು.

ಎಚ್.ಸಿ ಮಹದೇವಪ್ಪ ಅವರ ದಲಿತ ಸಿಎಂ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಈಗ ದಲಿತ ಸಿಎಂ ಎಂಬ ಚರ್ಚೆಯೇ ಇಲ್ಲ. ನಾವು ಆಡಳಿತದ ಮೇಲೆ ನಿಗಾ ಇರಿಸಿದ್ದೇವೆ. ಮಹದೇವಪ್ಪ ಅವರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಮಹದೇವಪ್ಪ ಅವರು ಸಮರ್ಥರಿದ್ದಾರೆ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವುದಕ್ಕೆ ಅವರಿಗೆ ಸಾಮರ್ಥ್ಯ ಇದೆ. ಅದಕ್ಕೆ ಅವರು ಹೇಳಿರಬಹುದು ಎಂದರು.

ಕಾಂಗ್ರೆಸ್‌ನಲ್ಲಿ ಒಂದು ವ್ಯವಸ್ಥೆ ಇದೆ, ಹೈಕಮಾಂಡ್ ಇದೆ. ಹೈಕಮಾಂಡ್ ನವರು ಆ ಬಗ್ಗೆ ತೀರ್ಮಾನ ಮಾಡುತ್ತಾರೆ. ಯಾರೋ 10 ಜನ ನನ್ನ ಪರವಾಗಿ ಜೈಕಾರ ಹಾಕಿದರೆ ಆಗಲ್ಲ. ಈಗ ಅಂತಹ ಸಂದರ್ಭ ಇದೆ ಅಂತ ನನಗೆ ಅನಿಸುವುದಿಲ್ಲ ಎಂದು ಡಾ.ಪರಮೇಶ್ವರ್‌ ಹೇಳಿದರು. 

YouTube video player



Source link

Leave a Reply

Your email address will not be published. Required fields are marked *