
ಉಡುಪಿ ಜಿಲ್ಲೆಗೆ ಇಂದು ಸಾರ್ವತ್ರಿಕ ರಜೆ ಘೋಷಿಸಿದ ಜಿಲ್ಲಾಧಿಕಾರಿ, ಹಬ್ಬದ ಹಿನ್ನಲೆಯಲ್ಲಿ ಶಾಲಾ ಕಾಲೇಜು ಸೇರಿದಂತೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದರಿಂದ ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಡಬಲ್ ಆಗಿದೆ.
ಉಡುಪಿ (ಮಾ.20) ರಾಜ್ಯದಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಇದೀಗ ಮುಸ್ಲಿಮರು ಈದುಲ್ ಫಿತರ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಚಂದ್ರದರ್ಶನ ಹಿನ್ನಲೆಯಲ್ಲಿ ಉಡುಪಿಯಲ್ಲಿ ಈದುಲ್ ಫಿತರ್ ಹಬ್ಬವನ್ನು ಇಂದೇ ಆಚರಿಸಲಾಗುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಘೋಷಣೆ ಹೊರಬೀಳುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಡಬಲ್ ಆಗಿದೆ.
ಚಂದ್ರದರ್ಶನದ ಸಮಯ ಹಾಗೂ ದಿನಾಂಕದಲ್ಲಿ ವ್ಯತ್ಯಾಸಗಳಿರುವ ಕಾರಣ ಹಲೆವೆಡೆ ಗೊಂದಲ ಎರ್ಪಟ್ಟಿದೆ. ಆದರೆ ಉಡುಪಿಯಲ್ಲಿ ಇಂದು ಚಂದ್ರದರ್ಶನದ ಹಿನ್ನಲೆಯಲ್ಲಿ ಇಂದೇ ರಜೆ ಘೋಷಣೆ ಮಾಡಲಾಗಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಮಹತ್ವದ ನಿರ್ಧಾರ ಘೋಷಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿದೆ. ಇದರ ನಡುವೆ ರಜೆ ಘೋಷಣೆ ಪೋಷಕರ ನಿದ್ದೆಗೆಡಿಸಿದೆ. ಉಡುಪಿ ಹೊರತುಪಡಿಸಿದರೆ ಇನ್ಯಾವುದೇ ಜಿಲ್ಲೆಯಲ್ಲಿ ರಜೆ ಘೋಷಣೆ ಮಾಡಿಲ್ಲ.
ಬೆಂಗಳೂರು ಸೇರಿದಂತೆ ಹಲೆವೆಡೆ ಹೊಸತೊಡಕು ಸಂಭ್ರಮ
ಬೆಂಗಳೂರು ಸೇರಿದಂತೆ ರಾಜ್ಯದ ಹೆಲೆವೆಡೆ ಇಂದು (ಮಾ.20) ಹೊಸತೊಡಕು ಸಂಭ್ರಮ. ಯುಗಾದಿ ಹಬ್ಬದ ಮರುದಿನ ಮಾಂಸಪ್ರಿಯರು ಹೊಸತೊಡಕು ಹಬ್ಬ ಆಚರಿಸುತ್ತಾರೆ. ಬೆಂಗಳೂರಿನಲ್ಲಿ ಹೊಸತೊಡಕು ಹಬ್ಬದ ಹಿನ್ನಲೆಯಲ್ಲಿ ಇಂದು ಬಳಗ್ಗೆಯಿಂದಲೇ ಮಾಂಸದ ಅಂಗಡಿಗಳು ಜನರಿಂದ ತುಂಬಿ ತುಳುಕುತ್ತಿದೆ. ಅದರಲ್ಲೂ ಬ್ಯಾಟರಾಯನಪುರದಲ್ಲಿರುವ ಪಾಪಣ್ಣ ಮಟನ್ ಸ್ಟಾಲ್ನಲ್ಲಿ ಸರದಿ ಸಾಲಿನಲ್ಲಿ ನಿಂತು ಜನ ಮಟನ್ ಖರೀದಿಸುತ್ತಿದ್ದಾರೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಪಾಪಣ್ಣ ಮಟನ್ ಸ್ಟಾಲ್ ತೆರೆದಿದೆ. ಹಲವು ಕೌಂಟರ್ ಮೂಲಕ ಜನರಿಗೆ ಮಾಂಸ ಮಾರಾಟ ಮಾಡಲಾಗುತ್ತಿದೆ. ಪ್ರತಿ ಕೆಜಿಗೆ 900 ರೂಪಾಯಿ ದರದಲ್ಲಿ ಮಟನ್ ಮಾರಾಟ ಮಾಡಲಾಗುತ್ತಿದೆ. ಪಾಪಣ್ಣ ಮಟನ್ ಸ್ಟಾಲ್ನಲ್ಲಿ ಎಂದಿನ ದರದಲ್ಲೇ ಮಟನ್ ಮಾರಾಟ ಮಾಡಲಾಗುತ್ತಿದೆ. ಹಬ್ಬದ ಕಾರಣ ಬೆಲೆ ಏರಿಕೆ ಮಾಡಿಲ್ಲ. ರಾಜ್ಯದ ವಿವಿದೆಡೆ ಇಂದು ಹೊಸತೊಡಕು ಹಬ್ಬ ಆಚರಿಸಲಾಗುತ್ತಿದೆ.