ಹರ್ಮೋಜ್ ಜಲಸಂಧಿ ನಮಗೆ ಅಗತ್ಯವಿಲ್ಲ; ಯುದ್ಧ ಮುಗಿಸುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್ | Us Israel Iran War News Live Updates Middle East Tensions America President Donald Trump Press Meet Mrq

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ವಿಷಯಗಳನ್ನು ಹಂಚಿಕೊಂಡರು. ಇರಾನ್‌ನ ಎಲ್ಲಾ ಉನ್ನತ ನಾಯಕರು ಸಾವನ್ನಪ್ಪಿದ್ದಾರೆ. ಇಂದು ರಾತ್ರಿ ಇರಾನ್‌ನ ನೌಕಾಪಡೆ ಸಂಪೂರ್ಣವಾಗಿ ನಾಶವಾಗಿದೆ.

ವಾಷಿಂಗ್ಟನ್ ಡಿಸಿ: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ಯುದ್ಧಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿದ ಡೊನಾಲ್ಡ್ ಟ್ರಂಪ್, ಯುದ್ಧದ ಸಂದರ್ಭದಲ್ಲಿನ ಹಲವು ವಿಷಯಗಳನ್ನು ಹಂಚಿಕೊಂಡರು. ಇರಾನ್‌ಗೆ ಅಣ್ವಸ್ತ್ರ ಸಿದ್ದಪಡಿಸಲು ಆಗದ ಸ್ಥಿತಿಯಲ್ಲಿದೆ. ಸದ್ಯದಲ್ಲೇ ಇರಾನ್ ವಿರುದ್ಧ ಸೇನಾಕಾರ್ಯಚರಣೆಯನ್ನು ಮುಗಿಸಲಿದ್ದೇವೆ. ಕೆಲವೇ ದಿನಗಳಲ್ಲಿ ನಮ್ಮ ಸೇನಾಕಾರ್ಯಾಚರಣೆಯ ಉದ್ದೇಶ ಈಡೇರಲಿದೆ. ನಮಗೆ ಹರ್ಮೋಜ್ ಜಲಸಂಧಿಯ ಅಗತ್ಯವಿಲ್ಲ. ಅಮೆರಿಕ ಅಗತ್ಯ ಗ್ಯಾಸ್ ಮತ್ತು ತೈಲವನ್ನು ಹೊಂದಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಹರ್ಮೋಜ್ ಜಲಸಂಧಿ ಯಾವ ದೇಶಗಳಿಗೆ ಅಗತ್ಯವಿದೆಯೋ ಅವರು ಆ ಸಮಸ್ಯೆಯನ್ನು ನೋಡಿಕೊಳ್ಳಲಿ.

ಇರಾನ್ ಆಡಳಿತದ ಸಾಮರ್ಥ್ಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಷಣಕ್ಕೂ ಮುನ್ನ ಶ್ವೇತಭವನ ಎಪಿಕ್ ಫ್ಯೂರಿ ಬಗ್ಗೆ ಕೆಲವು ವಿವರಗಳನ್ನು ಹಂಚಿಕೊಂಡಿತು, “ಇದು ಅಮೆರಿಕ ಮತ್ತು ಜಗತ್ತಿಗೆ ಬೆದರಿಕೆ ಹಾಕುವ ಇರಾನ್ ಆಡಳಿತದ ಸಾಮರ್ಥ್ಯವನ್ನು ವ್ಯವಸ್ಥಿತವಾಗಿ ಕೆಡವಲು ಅಮೆರಿಕದ ಶಕ್ತಿಯ ನಿರ್ಣಾಯಕ ಅಭಿಯಾನವಾಗಿದೆ. ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತಡೆಯಲು ಇದು ನಿರ್ಣಾಯಕವಾಗಿದೆ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು.

Scroll to load tweet…

Source link

Leave a Reply

Your email address will not be published. Required fields are marked *