Headlines

RCB vs CSK ಐಪಿಎಲ್ ಟಿಕೆಟ್‌ಗಾಗಿ ವಿಧಾನಸೌಧದಲ್ಲಿ ಶಾಸಕರ ಆಪ್ತ ಸಿಬ್ಬಂದಿ ಕ್ಯೂ! | Ipl 2026 Rcb Vs Csk Ticket Rush At Vidhana Soudha Karnataka Mlas Staff Queue Up For Free Passes Rav

ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಹೈವೋಲ್ಟೇಜ್‌ ಐಪಿಎಲ್‌ ಪಂದ್ಯದ ಉಚಿತ ವಿಐಪಿ ಟಿಕೆಟ್‌ಗಳಿಗಾಗಿ ಶಾಸಕರ ಆಪ್ತ ಕಾರ್ಯದರ್ಶಿಗಳು ವಿಧಾನಸೌಧದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಪ್ರತಿ ಶಾಸಕರಿಗೆ ತಲಾ 3 ಟಿಕೆಟ್‌,   ಸ್ಪೀಕರ್ ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ಈ ಟಿಕೆಟ್‌ಗಳನ್ನು ವಿತರಿಸಲಾಯಿತು.

ಬೆಂಗಳೂರು (ಏ.5) ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದಿಂದಾಗಿ ಎಲ್‌ಪಿಜಿ ಸಮಸ್ಯೆಯಾಗಿ ಸಾರ್ವಜನಿಕರು ಗ್ಯಾಸ್‌ ಏಜೆನ್ಸಿ, ಆಟೋ ಎಲ್‌ಪಿಜಿ ಬಂಕ್‌ಗಳ ಬಳಿ ಕ್ಯೂ ನಿಂತಿದ್ದರೆ ವಿಧಾನಸೌಧದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿಗಳು ಶನಿವಾರ ಐಪಿಎಲ್‌ ಟಿಕೆಟ್‌ಗಾಗಿ ಸರತಿ ಸಾಲಲ್ಲಿ ನಿಂತಿದ್ದು ಗಮನ ಸೆಳೆಯಿತು.

ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ನಡುವೆ ಹೈವೋಲ್ಟೇಜ್‌ ಐಪಿಎಲ್‌ ಪಂದ್ಯವಿದ್ದು, ಈ ಪಂದ್ಯಕ್ಕೆ ಉಚಿತ ವಿಐಪಿ ಟಿಕೆಟ್‌ಗಾಗಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರ ಆಪ್ತ ಕಾರ್ಯದರ್ಶಿ ಮಹೇಶ್ ಕರ್ಜಗಿ ಅವರ ಕಚೇರಿ ಎದುರು ಶಾಸಕರ ಆಪ್ತ ಸಿಬ್ಬಂದಿ ಕ್ಯೂ ನಿಂತಿದ್ದರು. ಸರತಿ ಸಾಲಿನಲ್ಲಿ ಬಂದು ತಲಾ 3 ಟಿಕೆಟ್‌ ಪಡೆದುಕೊಂಡರು.

ಬಜೆಟ್‌ ಅಧಿವೇಶನದಲ್ಲಿ ಐಪಿಎಲ್‌ ಪಂದ್ಯಾವಳಿಗಳಿಗೆ ಶಾಸಕರ ಕುಟುಂಬಕ್ಕೆ ಕನಿಷ್ಠ 5 ವಿಐಪಿ ಟಿಕೆಟ್‌ ನೀಡಬೇಕು. ಇಲ್ಲದಿದ್ದರೆ ಕೆಎಸ್‌ಸಿಎಗೆ ಸಹಕಾರ ನೀಡಬಾರದು ಎಂದು ಆಗ್ರಹ ಕೇಳಿ ಬಂದಿತ್ತು.

ಇದರ ಬೆನ್ನಲ್ಲೇ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮೊದಲ ಪಂದ್ಯಕ್ಕೆ ತಲಾ ಎರಡು ಟಿಕೆಟ್‌ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಬಳಿಕ ನಡೆದ ಸಭೆಯಲ್ಲಿ ಪ್ರತಿ ಪಂದ್ಯಕ್ಕೆ ತಲಾ 3 ಟಿಕೆಟ್‌ ನೀಡುವುದಾಗಿ ಕೆಎಸ್‌ಸಿಎ ಸಮ್ಮತಿ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಲಿರುವ ಪಂದ್ಯದ ಟಿಕೆಟ್‌ಗಳನ್ನು ಶನಿವಾರ ವಿಧಾನಸಭೆ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ವಿತರಿಸಲಾಯಿತು. ಖುದ್ದು ಬಂದು ಟಿಕೆಟ್‌ ಪಡೆಯಲಾಗದೆ ಶಾಸಕರು ತಮ್ಮ ಪತ್ರಗಳನ್ನು ಕಳುಹಿಸಿದ್ದು, ಅದರ ಆಧಾರದ ಮೇಲೆ ಆಪ್ತ ಸಿಬ್ಬಂದಿಗೆ ಟಿಕೆಟ್ ನೀಡಲಾಗಿದೆ.

Source link

Leave a Reply

Your email address will not be published. Required fields are marked *