Virla News: ಲವ್ ಬ್ರೇಕಪ್/ ಲವ್ ಮ್ಯಾರೇಜ್ ಬಳಿಕ ವಿಜಯ್‌ಗೆ ಸಿಗುತ್ತೆ ಸಕ್ಸಸ್.. ಹೀಗಂದ್ರು ಆ ಜ್ಯೋತಿಷಿ; ರಶ್ಮಿಕಾ-ವಿಜಯ್ ಬಗ್ಗೆ ಯಾಕಿಷ್ಟು ಕುಹಕ?! | Vijay Devarakonda Will Get Hit Films After His Love Breakup Or Love Marriage Says Astrologer Prashanth Kini

Virla News: ಲವ್ ಬ್ರೇಕಪ್/ ಲವ್ ಮ್ಯಾರೇಜ್ ಬಳಿಕ ವಿಜಯ್‌ಗೆ ಸಿಗುತ್ತೆ ಸಕ್ಸಸ್.. ಹೀಗಂದ್ರು ಆ ಜ್ಯೋತಿಷಿ; ರಶ್ಮಿಕಾ-ವಿಜಯ್ ಬಗ್ಗೆ ಯಾಕಿಷ್ಟು ಕುಹಕ?! | Vijay Devarakonda Will Get Hit Films After His Love Breakup Or Love Marriage Says Astrologer Prashanth Kini



Virla News: ಲವ್ ಬ್ರೇಕಪ್/ ಲವ್ ಮ್ಯಾರೇಜ್ ಬಳಿಕ ವಿಜಯ್‌ಗೆ ಸಿಗುತ್ತೆ ಸಕ್ಸಸ್.. ಹೀಗಂದ್ರು ಆ ಜ್ಯೋತಿಷಿ; ರಶ್ಮಿಕಾ-ವಿಜಯ್ ಬಗ್ಗೆ ಯಾಕಿಷ್ಟು ಕುಹಕ?! | Vijay Devarakonda Will Get Hit Films After His Love Breakup Or Love Marriage Says Astrologer Prashanth Kini

ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ‘ವಿಜಯ್ ದೇವರಕೊಂಡ ಅವರು ಈ ಪ್ರೇಮ ವಿವಾಹದ ನಂತರ ಅಥವಾ ಲವ್ ಬ್ರೇಕಪ್ ಬಳಿಕ ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ, ‘ಯಾಕೆ ಹೀಗಂದಿದ್ದು’ ಅಂತ ಹಲವರು ಕೇಳುತ್ತಿದ್ದಾರೆ.

ಇದೆಂತಾ ಭವಿಷ್ಯ?

ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಕ್ರೇಜಿ ಕಪಲ್ ಎನಿಸಿಕೊಂಡಿರುವ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಗೊತ್ತೇ ಇದೆ. ವೈರಲ್ ಆಗಿರುವ ವೆಡ್ಡಿಂಗ್ ಕಾರ್ಡ್ ಪ್ರಕಾರ, ಫೆಬ್ರವರಿ 26 ರಂದು ಉದಯಪುರದಲ್ಲಿ ಇವರ ವಿವಾಹ ನಡೆಯಲಿದೆ. ನಂತರ ಮಾರ್ಚ್ 4 ರಂದು ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ಇರಲಿದೆ ಎಂಬ ಮಾಹಿತಿ ಇದೆ.

ಕಳೆದ ಕೆಲವು ಸಮಯದಿಂದ ವಿಜಯ್ ದೇವರಕೊಂಡ ನಟನೆಯ ‘ಲೈಗರ್’, ‘ಖುಷಿ’, ‘ಫ್ಯಾಮಿಲಿ ಸ್ಟಾರ್’ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡ ವಿಜಯ್ ದೇವರಕೊಂಡ ಅವರಿಗೆ ಆ ಬಳಿಕ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಅಲ್ಲಿಂದ ಇಲ್ಲಿಯವರೆಗೂ ನಟ ವಿಜಯ್ ದೇವರಕೊಂಡ ಸಕ್ಸಸ್ ಬಯಸಿ ಸೈಕಲ್ ಹೊಡೆಯುತ್ತಲೇ ಇದ್ದಾರೆ. ಆದರೆ ವಿಜಯ್‌ಗೆ ಗೆಲವು ಸಿಗುತ್ತಿಲ್ಲ.

ಆದರೆ, ಅವರ ಗರ್ಲ್‌ಫ್ರೆಂಡ್ ಹಾಗೂ ಇದೀಗ ಹೆಂಡತಿ ಆಗಲಿರುವ ರಶ್ಮಿಕಾ ಮಂದಣ್ಣ ಮಾತ್ರ ತಮ್ಮ ವೃತ್ತಿ ಜೀವನದಲ್ಲಿ ಮೇಲೇರುತ್ತಲೇ ಸಾಗಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ‘ಸಿಕಂದರ್’ ಬಿಟ್ಟರೆ ರಶ್ಮಿಕಾ ನಟಿಸಿದ ಬೇರೆಲ್ಲಾ ಸಿನಿಮಾಗಳೂ ಸೂಪರ್ ಡೂಪರ್ ಹಿಟ್. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಬಳಿಕ ನಟಿ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಅವರು ಭಾರತದ ನಂಬರ್ 1 ನಾಯಕಿ ನಟಿ ಎನ್ನಿಸಿದ್ದಾರೆ. ಆದರೆ, ವಿಜಯ್ ದೇವರಕೊಂಡ ಅವರು ನಂಬರ್‌ ರೇಸ್‌ನಲ್ಲೇ ಇಲ್ಲ.

ಈ ಹಿನ್ನೆಲೆಯಲ್ಲಿ, ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಇದೀಗ ಹೇಳಿರೋ ಭವಿಷ್ಯ ತುಂಬಾ ಮುಖ್ಯ ಎನ್ನಿಸಿದೆ. ಹೌದು, ಪ್ರಶಾಂತ್ ಕಿಣಿ ಅವರು ವಿಜಯ್ ದೇವರಕೊಂಡ ಭವಿಷ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ‘ವಿಜಯ್ ದೇವರಕೊಂಡ ಅವರು ಈ ಪ್ರೇಮ ವಿವಾಹದ ನಂತರ ಅಥವಾ ಲವ್ ಬ್ರೇಕಪ್ ಬಳಿಕ ತಮ್ಮ ವೃತ್ತಿಜೀವನದಲ್ಲಿ ಅದ್ಭುತ ಯಶಸ್ಸನ್ನು ಪಡೆಯುತ್ತಾರೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ‘ಅದೃಷ್ಟವಂತೆ ರಶ್ಮಿಕಾ ಅದೃಷ್ಟ ಜೊತೆಗೂಡಿದರೆ ವಿಜಯ್ ಮತ್ತೆ ಹಳೆ ಫಾರ್ಮ್‌ಗೆ ಮರಳಿ ಬಾಕ್ಸಾಫೀಸ್ ಶೇಕ್ ಮಾಡುತ್ತಾರೆ’ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಿದ್ದಾರೆ.

ಲವ್ ಮ್ಯಾರೇಜ್ ಅಥವಾ ಲವ್ ಬ್ರೇಕಪ್ ಅಂದ್ರೆ ಏನರ್ಥ?

ಆದರೆ, ಪ್ರಶಾಂತ್ ಕಿಣಿ ಹಾಗ್ಯಾಕೆ ಹೇಳಿದ್ದು? ‘ಲವ್ ಮ್ಯಾರೇಜ್ ಓಕೆ, ಲವ್ ಬ್ರೇಕಪ್ ಯಾಕೆ?’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ, ಅದಕ್ಕೆ ಉತ್ತರವನ್ನು ಭವಿಷ್ ಬಲ್ಲ, ಅದನ್ನು ಹೇಳಿರೋ ಜ್ಯೋತಿಷಿಗಳೇ ಹೇಳಬೇಕು. ಸದ್ಯಕ್ಕಂತೂ ರಶ್ಮಿಕಾ-ವಿಜಯ್ ಜೋಡಿ ಜೋರಾಗಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.

Vijay Devarakonda will get hit films after his love breakup or love marriage….😂😜 https://t.co/Yi05NUJXGm

— Prashanth Kini (@AstroPrashanth9) January 9, 2026

ಇಬ್ಬರ ಕೈನಲ್ಲಿವೆ ಹಲವು ಸಿನಿಮಾ

ಸದ್ಯದಲ್ಲೇ ವಿಜಯ್ ದೇವರಕೊಂಡ ‘ರಣಬಲಿ’ ಎಂಬ ಸಿನಿಮಾದಲ್ಲಿ ನಟಿಸಲಿದ್ದು, ಇದರಲ್ಲಿ ರಶ್ಮಿಕಾ ನಾಯಕಿಯಾಗಿರುವುದು ವಿಶೇಷ. ಮದುವೆ ನಂತರ ಇಬ್ಬರೂ ಒಟ್ಟಿಗೆ ನಟಿಸುವ ಮೊದಲ ಸಿನಿಮಾ ಇದಾಗುವ ಸಾಧ್ಯತೆ ಇದೆ. ಈ ಸಿನಿಮಾ ಹೊರತುಪಡಿಸಿಯೂ ಈ ಇಬ್ಬರ ಕೈನಲ್ಲೂ ಬೇರೆಬೇರೆ ಸಿನಿಮಾಗಳಿವೆ.



Source link

Leave a Reply

Your email address will not be published. Required fields are marked *