Headlines

ಜೀವ ಬೇಡವೆಂದೆನಿಸಿದರೂ ಬದುಕಬೇಕು ಅಂತೇಕೆ ಅನ್ಸುತ್ತೆ? ಪ್ರೀತಿ ಡೆಫಿನೇಷನ್ ಹೇಳಿದ ಕಿರಣ್ ರಾಜ್ | Kiran Raj Definition Of Love Goes Viral On Valentines Day Karna Serial Actor Wins Hearts Kvn

ಜೀವ ಬೇಡವೆಂದೆನಿಸಿದರೂ ಬದುಕಬೇಕು ಅಂತೇಕೆ ಅನ್ಸುತ್ತೆ? ಪ್ರೀತಿ ಡೆಫಿನೇಷನ್ ಹೇಳಿದ ಕಿರಣ್ ರಾಜ್ | Kiran Raj Definition Of Love Goes Viral On Valentines Day Karna Serial Actor Wins Hearts Kvn



ಜೀವ ಬೇಡವೆಂದೆನಿಸಿದರೂ ಬದುಕಬೇಕು ಅಂತೇಕೆ ಅನ್ಸುತ್ತೆ? ಪ್ರೀತಿ ಡೆಫಿನೇಷನ್ ಹೇಳಿದ ಕಿರಣ್ ರಾಜ್ | Kiran Raj Definition Of Love Goes Viral On Valentines Day Karna Serial Actor Wins Hearts Kvn

‘ಕರ್ಣ’ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ಪ್ರೀತಿಯ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ. ಬದುಕೇ ಬೇಡವೆನಿಸಿದಾಗ ಉತ್ಸಾಹ ಮೂಡಿಸುವುದೇ ಪ್ರೀತಿ ಎಂದಿರುವ ಅವರ ಮಾತುಗಳು ವೈರಲ್ ಆಗಿವೆ.  

ಕಿರಣ್ ರಾಜ್. ಸದ್ಯಕ್ಕೆ ಕನ್ನಡ ಸೀರಿಯಲ್ ಜಗತ್ತಿನ ಹೆಣ್ಣು ಹೈಕ್ಳ ಹಾರ್ಟ್ ಥ್ರೋಬ್. ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್‌ನಲ್ಲಿ ಗೈನಾಕಲಿಜಿಸ್ಟ್ ಆಗಿ ನಟಿಸುತ್ತಿರುವ ಕಿರಣ್ ಏನೇ ಹೇಳಿದ್ರೂ ಸುದ್ದಿ. ಇದೀಗ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.

ಇವತ್ತು ವ್ಯಾಲಂಟೈನ್ಸ್ ಡೇ. ಹೇಳಿ ಕೇಳಿ ಹೆಣ್ಣು ಮಕ್ಕಳ ಹೃದಯ ಕದಿಯುವಲ್ಲಿ ಮುಂಚೂಣಿಯಲ್ಲಿರುವ ಕಿರಣ್ ರಾಜ್‌ಗೆ ಅದೆಷ್ಟು ಪ್ರಪೋಸಲ್ಸ್ ಬಂದಿರುತ್ತೋ ಗೊತ್ತಿಲ್ಲ. ಹ್ಯಾಂಡ್ಸಮ್ ಆಗಿರೋ ನಟ ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್‌ನಲ್ಲಿ ಹರ್ಷನಾಗಿಯೇ ಬಹುತೇಕ ಹುಡ್ಗೀರ ಹೃದಯಕ್ಕೆ ನೇರವಾಗಿ ದಾಳಿ ಮಾಡಿದ್ದರು. ಇದೀಗ ಕರ್ಣನಾಗಿಯಂತೂ ಮತ್ತಷ್ಟು ಹೆಣ್ಣು ಮಕ್ಕಳ ನಿದ್ದೆ ಕದಿಯುವಂತೆ ಮಾಡಿದ್ದಾರೆ.

ಲವ್ ಬಗ್ಗೆ ಕಿರಣ್ ರಾಜ್ ಡೆಫಿನೇಷನ್ ವೈರಲ್

ಕಿರಣ್ ರಾಜ್‌ದ್ದೊಂದು ರೀಲ್ಸ್ ವ್ಯಾಲಂಟೈನ್ಸ್ ಡೇ ದಿನ ಸದ್ದು ಮಾಡುತ್ತಿದೆ. ಅದೂ ಲವ್ ಬಗ್ಗೆ ಕಿರಣ್ ರಾಜ್ ಮಾತನಾಡಿದ್ರೆ ಕೇಳಬೇಕಾ? ಮತ್ತೆ ಮತ್ತೆ ನೋಡುತ್ತಿದ್ದಾರೆ ಅವರ ಫ್ಯಾನ್ಸ್. ಪ್ರೀತಿ ಅಂದ್ರೇನು ಎನ್ನುವುದಕ್ಕೆ ತಮ್ಮದೇ ಆದ ಡೆಫಿನೇಷನ್ ಕೊಟ್ಟಿದ್ದಾರೆ ಕರುನಾಡ ಕರ್ಣ. ಇನ್ನೇನು ಬದುಕುವುದೇ ಬೇಡ ಎಂದೆನಿಸಿದಾಗ ಜೀವನದ ಬಗ್ಗೆ ಉತ್ಸಾಹ ಮೂಡಿಸುವುದೇ ಈ ಪ್ರೀತಿ. ಅದೊಂದು ಪ್ರೀತಿ ಇದ್ದರೆ ಎಲ್ಲರಿಗೂ ಬದುಕುವ ಆಸೆ ಹುಟ್ಟುತ್ತದೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಪ್ರತಿಯೊಂದೂ ಕಾಯಿಲೆ ವಾಸಿ ಮಾಡುವ ಒಂದೇ ಒಂದು ಮದ್ದು ಎಂದ್ರೆ ಅದು ಪ್ರೀತಿ ಎಂಬಂಥ ಸಂದೇಶಗಳು ಹರಿದಾಡುತ್ತಲೇ ಇವೆ.

ಮೂಲತಃ ಮೈಸೂರಿನವರಾದ ಕಿರಣ್ ರಾಜ್ ಬಹುತೇಕ ಬೇರೆ ಬೇರೆ ರಾಜ್ಯಗಳಲ್ಲಿಯೇ ಕಾಲ ಕಳೆದವರು. ಮುಂಬೈನಲ್ಲಿದ್ದಾಗಲೇ ನಟನೆ ಕಡೆಗೆ ಆಸಕ್ತಿ ತೋರಿದ ಕಿರಣ್ ಕೈ ಹಿಡಿದಿದ್ದು ಕನ್ನಡತಿ ಸೀರಿಯಲ್ ಹರ್ಷ ಎಂಬ ಕ್ಯಾರೆಕ್ಟರ್. ಭುವಿ ಎಂಬ ಹಳ್ಳಿಯಿಂದ ಬಂದ ಮದ್ಯಮ ವರ್ಗದ ಮಗಳ ಮೇಲೆ ಪ್ರೀತಿ ಉಕ್ಕುವ ನವಿರಾದ ಕಥೆ. ನಾಯಕಿಯ ಕನ್ನಡ ಪ್ರೀತಿ ಸೇರಿ ಕನ್ನಡ ನಾಡಿನಲ್ಲಿಯೇ ಮನೆ ಮಾತಾಗಿತ್ತು ಈ ಸೀರಿಯಲ್.

ನಿಧಿ-ಕರ್ಣ ಒಂದಾಗೋದು ಯಾವಾಗ?

ಆಮೇಲೆ ಸಿನಿಮಾ, ವೆಬ್ ಸೀರಿಸ್ ಎಲ್ಲದರಲ್ಲಿಯೂ ನಟಿಸಿದರೂ ಮತ್ತೆ ಕಿರಣ್‌ಗೆ ಹೆಸರು ತಂದು ಕೊಟ್ಟಿದ್ದು ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ. ಅನಾಥ ಮಗುವೊಂದನ್ನು ಸಿರಿವಂತ ಮನೆಯವರು ಸಾಕಿರುತ್ತಾರೆ. ಗೈನಾಕಲಿಜಿಸ್ಟ್ ಆಗುವ ಕರ್ಣನಿಗೆ ಅಮ್ಮನಂಥ ಹೃದಯ. ಎಲ್ಲರನ್ನೂ ಪ್ರೀತಿಯಿಂದ ನೋಡಿಕೊಳ್ಳುವ ಈ ಡಾಕ್ಟರ್‌ಗೆ ತನ್ನವರೇ ಹಿಂದಿನಿಂದ ಚೂರಿ ಹಾಕುವುದು ಗೊತ್ತಾಗುತ್ತಲೇ ಇರುವುದಿಲ್ಲ. ಇದೀಗ ಅಪ್ಪನ ಕುತಂತ್ರ, ಅಮ್ಮ ಅನುಭವಿಸುತ್ತಿರುವ ನೋವು ಎಲ್ಲವೂ ಗಮನಕ್ಕೆ ಬಂದಿದ್ದು, ಸೀರಿಯಲ್ ತನ್ನದೇ ಆದ ತಿರುವು ಪಡೆದುಕೊಂಡಿದೆ.

ನಿಧಿಯೂ ವೈದ್ಯ ವಿದ್ಯಾರ್ಥಿನಿ. ಅವಳೆಡೆಗಿನ ಪ್ರೀತಿ ಎಕ್ಸ್‌ಪ್ರೆಸ್ ಮಾಡಿಕೊಂಡಾಗಲೇ ಅನಿವಾರ್ಯವಾಗಿ ನಿಧಿ ಅಕ್ಕ ನಿತ್ಯಾಳನ್ನು ವರಿಸುವ ಸಂದರ್ಭ ಕರ್ಣನಿಗೆ ಬರುತ್ತದೆ. ಸಮಾಜದೆದರು ನಿತ್ಯಾಗೆ ಗಂಡನಾಗಿ, ನಿಧಿಯ ಪ್ರಿಯಕರನಾಗಿ ಕರ್ಣ ಇದೀಗ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದು, ವ್ಯಾಲೆಂಟೈನ್ಸ್ ದಿನ ಜೋಡಿಗಳ ಪ್ರೇಮ ಪಾಠ ಪ್ರಸಾರವಾಗಿದೆ.

ಕೊರೋನಾ ಟೈಮಲ್ಲಿ ಕಿರಣ್ ರಾಜ್ ಬಡವರಿಗೆ ಅನ್ನ ಕೊಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಹಲವರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುವ ಕಿರಣ್ ರಾಜ್‌ ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿ ಹಾಕಿಕೊಳ್ಳುತ್ತಾರೆ. ಕರ್ಣನೆಡೆಗೆ ಇರುವ ಪ್ರೀತಿಯನ್ನು ಅಭಿವ್ಯಕ್ತಗೊಳಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ನಟನ ಅನೇಕ ಫ್ಯಾನ್ ಪೇಜಸ್ ಇದ್ದು, ಅಭಿಮಾನಿಗಳ ಜೊತೆಗಿನ ಲೈಟ್ ಮೂಮೆಂಟ್ಸ್ ಅನ್ನು ಎಲ್ಲರೂ ಶೇರ್ ಮಾಡಿ ಕೊಳ್ಳುತ್ತಿರುತ್ತಾರೆ.

ಕರ್ಣ ಸೀರಿಯಲ್ ಕಥೆ ಹೇಳುವುದಾದರೆ, ಅಪ್ಪ ರಮೇಶ್ ಮಾಡುತ್ತಿರುವ ಕುತಂತ್ರ ಮಗನಿಗೆ ಅರ್ಥವಾಗಿದ್ದು, ಅಪ್ಪ ಚಾಪೆ ಕೆಳಗೆ ನುಸುಳಲು ಯತ್ನಿಸಿದರೆ, ಮಗ ರಂಗೋಲಿ ಕೆಳಗೆ ನುಸುಳಿ ಅಪ್ಪ ರಮೇಶನಿಗೆ ಪಾಠ ಕಲಿಸುತ್ತಿದ್ದಾನೆ. ಜೊತೆಗೆ ನಿತ್ಯಾಳ ಬದುಕು ಸೆಟಲ್ ಆಗಲು ಏನೇನು ಸಹಕಾರ ಬೇಕೋ ಎಲ್ಲವನ್ನೂ ಕೊಡುತ್ತಿದ್ದು, ರಮೇಶನ ಕುತಂತ್ರಕ್ಕೆ ಉತ್ತರವಾಗಿ ಇತ್ತೀಚಿಗೆ 3 ಕೋಟಿ ರೂ. ಆಸ್ತಿಯನ್ನೂ ನಿತ್ಯಾ ಹೆಸರಿಗೆ ಬರೆಯುವಂತೆ ಮಾಡಿದ್ದಾನೆ. ಆದರೆ, ಪ್ರೇಕ್ಷಕರಿಗೆ ನಿಧಿ ಜೊತೆ ಕರ್ಣನ ಮದ್ವೆ ಬೇಗ ಆಗಲಿ ಎಂಬ ಆಸೆ ಇದೆ.



Source link

Leave a Reply

Your email address will not be published. Required fields are marked *