IPL 2026: ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Kolkata Knight Riders Ipl Match Kvn

IPL 2026: ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Kolkata Knight Riders Ipl Match Kvn



IPL 2026: ಮುಂಬೈ ಇಂಡಿಯನ್ಸ್ vs ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು? | Who Won Yesterday Mumbai Indians Vs Kolkata Knight Riders Ipl Match Kvn

ಐಪಿಎಲ್‌ನಲ್ಲಿ 13 ವರ್ಷಗಳ ಬಳಿಕ ತನ್ನ ಆರಂಭಿಕ ಪಂದ್ಯವನ್ನು ಗೆದ್ದ ಮುಂಬೈ ಇಂಡಿಯನ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕೆಕೆಆರ್‌ ನೀಡಿದ 221 ರನ್‌ಗಳ ಬೃಹತ್ ಗುರಿಯನ್ನು, ರೋಹಿತ್ ಶರ್ಮಾ ಮತ್ತು ರಿಕೆಲ್ಟನ್‌ ಅವರ ಸ್ಫೋಟಕ ಆರಂಭಿಕ ಜೊತೆಯಾಟದ ನೆರವಿನಿಂದ ಮುಂಬೈ ಯಶಸ್ವಿಯಾಗಿ ಬೆನ್ನಟ್ಟಿತು.

ಮುಂಬೈ: ಐಪಿಎಲ್‌ನಲ್ಲಿ ಕಳೆದ 13 ವರ್ಷಗಳಿಂದಲೂ ತನ್ನ ಆರಂಭಿಕ ಪಂದ್ಯದಲ್ಲಿ ಸೋಲು ಕಾಣುತ್ತಿದ್ದ ಮುಂಬೈ ಇಂಡಿಯನ್ಸ್‌ ಈ ಬಾರಿ ಕೊನೆಗೂ ಯಶಸ್ಸು ಸಾಧಿಸಿದೆ. 2012ರ ಬಳಿಕ ತಂಡ ಇದೇ ಮೊದಲ ಬಾರಿ ಆರಂಭಿಕ ಪಂದ್ಯ ಗೆದ್ದು ಬೀಗಿದೆ. ಭಾನುವಾರ ನಡೆದ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಪಂದ್ಯದಲ್ಲಿ ಮುಂಬೈ 6 ವಿಕೆಟ್‌ನಿಂದ ಭರ್ಜರಿ ಗೆಲುವು ಸಾಧಿಸಿದೆ.

ಬ್ಯಾಟಿಂಗ್‌ ಸ್ನೇಹಿ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕೋಲ್ಕತಾ 4 ವಿಕೆಟ್‌ ನಷ್ಟದಲ್ಲಿ 220 ರನ್‌ ಕಲೆಹಾಕಿತು. ಆದರೆ ಈ ಮೊತ್ತ ಮುಂಬೈಗೆ ದೊಡ್ಡ ಹೊರೆಯಾಗಲಿಲ್ಲ. ಆರಂಭಿಕ ಜೋಡಿ ರಿಕೆಲ್ಟನ್‌ ಹಾಗೂ ರೋಹಿತ್‌ ಶರ್ಮಾರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ತಂಡ 19.1 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು.

ರಹಾನೆ, ಅಂಗ್‌ಕೃಷ್‌ ಮಿಂಚು:

ಸ್ಫೋಟಕ ಆರಂಭ ಪಡೆದ ಕೆಕೆಆರ್‌ 200ರ ಗಡಿ ದಾಟುವುದು ಪವರ್‌-ಪ್ಲೇನಲ್ಲೇ ಬಹುತೇಕ ಖಚಿತವಾಗಿತ್ತು. ಮೊದಲ 6 ಓವರಲ್ಲಿ ತಂಡ 78 ರನ್‌ ಗಳಿಸಿತು. ಫಿನ್‌ ಆ್ಯಲೆನ್‌ 17 ಎಸೆತಕ್ಕೆ 37 ರನ್‌ ಸಿಡಿಸಿ ಔಟಾದರೆ, ನಾಯಕ ಅಜಿಂಕ್ಯ ರಹಾನೆ 40 ಎಸೆತಕ್ಕೆ 67 ರನ್‌ ಬಾರಿಸಿದರು. ಬಳಿಕ ತಂಡಕ್ಕೆ ನೆರವಾಗಿದ್ದ ಅಂಗ್‌ಕೃಷ್‌ ರಘುವಂಶಿ. 21 ವರ್ಷದ ಯುವ ಆಟಗಾರ ರಘುವಂಶಿ 29 ಎಸೆತಕ್ಕೆ 51 ರನ್‌ ಸಿಡಿಸಿದರು. ರಿಂಕು ಔಟಾಗದೆ 33 ರನ್‌ ಬಾರಿಸಿದರು. ಮೊದಲ 10 ಓವರಲ್ಲಿ 120 ರನ್ ಗಳಿಸಿದ್ದ ತಂಡ, ಕೊನೆ 10 ಓವರ್‌ನಲ್ಲಿ 100 ರನ್‌ ದೋಚಿತು.

ಸ್ಫೋಟಕ ಆರಂಭ:

ರೋಹಿತ್‌-ರಿಕೆಲ್ಟನ್‌ ಅಬ್ಬರದ ಆಟ ಮುಂಬೈಗೆ ಸುಲಭ ಗೆಲುವು ತಂದುಕೊಡಬೇಕಿತ್ತು. ಇವರಿಬ್ಬರು 11.5 ಓವರ್‌ಗಳಲ್ಲಿ 148 ರನ್‌ ಸೇರಿಸಿದರು. ರೋಹಿತ್‌ 38 ಎಸೆತಕ್ಕೆ 78 ರನ್‌ ಸಿಡಿಸಿದರೆ, ರಿಕೆಲ್ಟನ್ 43 ಎಸೆತಕ್ಕೆ 81 ರನ್‌ ಗಳಿಸಿ ರನ್‌ಔಟ್‌ ಆದರು. ಸೂರ್ಯಕುಮಾರ್‌ ಔಟಾದ ಬಳಿಕ ತಂಡ ತಿಲಕ್‌(20), ಹಾರ್ದಿಕ್(18) ತಂಡವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರ್: ಕೆಕೆಆರ್‌ 20 ಓವರ್‌ನಲ್ಲಿ 220/4 (ರಹಾನೆ 67, ರಘುವಂಶಿ 51, ಶಾರ್ದೂಲ್‌ 3-39), ಮುಂಬೈ 19.1 ಓವರ್‌ನಲ್ಲಿ 224/4 (ರಿಕೆಲ್ಟನ್‌ 81, ರೋಹಿತ್‌ 78, ನರೈನ್‌ 1-30)

ಕೆಕೆಆರ್‌ ವಿರುದ್ಧ 25 ಪಂದ್ಯ ಗೆದ್ದು ದಾಖಲೆ

ಕೆಕೆಆರ್‌ ವಿರುದ್ಧ ಐಪಿಎಲ್‌ನಲ್ಲಿ ಮುಂಬೈ 25ನೇ ಗೆಲುವು ಸಾಧಿಸಿದ್ದು, ಯಾವುದೇ ತಂಡವೊಂದರ ವಿರುದ್ಧ ಈ ಮೈಲುಗಲ್ಲು ಸಾಧಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಪಾತ್ರವಾಯಿತು. ಆರ್‌ಸಿಬಿ ವಿರುದ್ಧ ಸಿಎಸ್‌ಕೆ 21, ಪಂಜಾಬ್‌ ವಿರುದ್ಧ ಕೆಕೆಆರ್ 21, ಸಿಎಸ್‌ಕೆ ವಿರುದ್ಧ ಮುಂಬೈ 21, ಡೆಲ್ಲಿ ವಿರುದ್ಧ ಮುಂಬೈ 21 ಪಂದ್ಯಗಳಲ್ಲಿ ಗೆದ್ದಿದೆ.

ಟಿ20ಯಲ್ಲಿ ರೋಹಿತ್‌ ಶರ್ಮಾ 550 ಸಿಕ್ಸರ್‌

ರೋಹಿತ್‌ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 550 ಸಿಕ್ಸರ್‌ ಸಿಡಿಸಿದ್ದು, ಈ ಸಾಧನೆ ಮಾಡಿದ ವಿಶ್ವದ 9ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಕ್ರಿಸ್‌ ಗೇಲ್‌ 1056 ಸಿಕ್ಸರ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.



Source link

Leave a Reply

Your email address will not be published. Required fields are marked *