Ugadi Special Recipe:ಬಾಯಲ್ಲಿ ಇಟ್ಟರೆ ಬೆಣ್ಣೆಯಂತೆ ಕರಗುವ ಒಬ್ಬಟ್ಟು ಮಾಡುವ ಸುಲಭ ವಿಧಾನ | How To Prepare Perfect Obbattu At Home A Step By Step Ugadi Recipe

Ugadi Special Recipe:ಬಾಯಲ್ಲಿ ಇಟ್ಟರೆ ಬೆಣ್ಣೆಯಂತೆ ಕರಗುವ ಒಬ್ಬಟ್ಟು ಮಾಡುವ ಸುಲಭ ವಿಧಾನ | How To Prepare Perfect Obbattu At Home A Step By Step Ugadi Recipe



Ugadi Special Recipe:ಬಾಯಲ್ಲಿ ಇಟ್ಟರೆ ಬೆಣ್ಣೆಯಂತೆ ಕರಗುವ ಒಬ್ಬಟ್ಟು ಮಾಡುವ ಸುಲಭ ವಿಧಾನ | How To Prepare Perfect Obbattu At Home A Step By Step Ugadi Recipe

Ugadi Special Soft Ghee Obbattu Recipe: ಯುಗಾದಿ ಹಬ್ಬದ ಸಡಗರ ಎಲ್ಲೆಡೆ ಶುರುವಾಗಿದೆ. ಈ ಸಮಯದಲ್ಲಿ ಪ್ರತಿ ಮನೆಯಲ್ಲೂ ತಯಾರಾಗುವ ಮುಖ್ಯ ಖಾದ್ಯವೆಂದರೆ ಅದುವೇ ‘ಒಬ್ಬಟ್ಟು’. ಬಾಯಲ್ಲಿ ಇಟ್ಟರೆ ಕರಗುವಂತಹ ಮೃದುವಾದ, ತುಪ್ಪದ ಘಮವಿರುವ ಒಬ್ಬಟ್ಟು ಮಾಡುವುದು ಒಂದು ಕಲೆ. ನಿಮ್ಮ ಮನೆ ಮಂದಿಯೆಲ್ಲಾ ಮೆಚ್ಚುವಂತೆ ಪರ್ಫೆಕ್ಟ್ ಒಬ್ಬಟ್ಟು ತಯಾರಿಸಲು ಈ ಸರಳ ವಿಧಾನವನ್ನು ಒಮ್ಮೆ ನೋಡಿ.   

ನ್ನಡಿಗರ ಮನೆಗಳಲ್ಲಿ ಹಬ್ಬದ ಸಂಭ್ರಮ ಶುರುವಾಗಿದೆ. ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಪ್ರತೀಕವಾದ ಯುಗಾದಿ ಹಬ್ಬವು ಈ ವರ್ಷ ಮಾರ್ಚ್ 19 ರಂದು ಬಂದಿದೆ. ಯುಗಾದಿ ಎಂದರೆ ನಮಗೆ ಮೊದಲು ನೆನಪಿಗೆ ಬರುವುದು ಆರು ರುಚಿಗಳ ಸಮ್ಮಿಶ್ರಣವಾದ ‘ಯುಗಾದಿ ಪಚ್ಚಡಿ’ ಅಥವಾ ‘ಬೇವು-ಬೆಲ್ಲ’. ಆದರೆ ಈ ಪಚ್ಚಡಿಯ ಜೊತೆಗೆ ಹಬ್ಬದ ದಿನದಂದು ಪ್ರತಿ ಮನೆಯಲ್ಲೂ ಘಮಘಮಿಸುವ ಮತ್ತೊಂದು ಅದ್ಭುತ ಸಿಹಿ ತಿಂಡಿ ಎಂದರೆ ಅದುವೇ ‘ಒಬ್ಬಟ್ಟು’.

ಪ್ರದೇಶಕ್ಕೆ ತಕ್ಕಂತೆ ಒಬ್ಬಟ್ಟನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಅದರಲ್ಲೂ ತುಪ್ಪ ಹಾಕಿದ ಬಿಸಿಬಿಸಿ ಒಬ್ಬಟ್ಟು ತಿನ್ನುತ್ತಿದ್ದರೆ ಆ ಮಜಾವೇ ಬೇರೆ, ತಿಂದಷ್ಟೂ ಬೇಕೆನಿಸುತ್ತದೆ. ಮತ್ಯಾಕೆ ತಡ ತುಪ್ಪದ ಒಬ್ಬಟ್ಟು ತಯಾರಿಸಲು ಬೇಕಾಗುವ ಪದಾರ್ಥಗಳು ಹಾಗೂ ಮಾಡುವ ವಿಧಾನ ನೋಡೋಣ ಬನ್ನಿ..

ಬೇಕಾಗುವ ಪದಾರ್ಥಗಳು
ಕಡಲೆಬೇಳೆ: 1 ಕಪ್
ಮೈದಾ ಹಿಟ್ಟು: 2 ಕಪ್
ಬೆಲ್ಲದ ಪುಡಿ (ತುರಿ): 1 ಕಪ್
ಏಲಕ್ಕಿ ಪುಡಿ: ಅರ್ಧ ಟೀ ಚಮಚ
ಉಪ್ಪು: ಕಾಲು ಟೀ ಚಮಚ
ಅರಿಶಿನ: ಕಾಲು ಟೀ ಚಮಚ
ಎಣ್ಣೆ: 4 ಟೇಬಲ್ ಚಮಚ
ತುಪ್ಪ: ಅಗತ್ಯಕ್ಕೆ ತಕ್ಕಷ್ಟು

ಒಬ್ಬಟ್ಟು ತಯಾರಿಸುವ ವಿಧಾನ

1. ಕಣಕ ತಯಾರಿಕೆ
*ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಚಿಟಿಕೆ ಉಪ್ಪು ಮತ್ತು ಕಾಲು ಚಮಚ ಅರಿಶಿನ ಹಾಕಿ ಮಿಶ್ರಣ ಮಾಡಿ.
*ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತಲೂ ಮೃದುವಾಗಿ ಕಲಸಿಕೊಳ್ಳಿ.
*ನಂತರ 2 ಟೇಬಲ್ ಚಮಚ ತುಪ್ಪ ಹಾಕಿ ಚೆನ್ನಾಗಿ ನಾದಿ.
*ಕೊನೆಯದಾಗಿ ಮೇಲೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿ, ದೊಡ್ಡ ಉಂಡೆ ತರಹ ಮಾಡಿಟ್ಟುಕೊಂಡು ಪ್ಲೇಟ್ ಮುಚ್ಚಿಡಿ. ಕನಿಷ್ಠ 2 ಗಂಟೆಗಳ ಕಾಲ ನೆನೆಯಲು ಬಿಡಿ. (ಹಿಟ್ಟು ಎಷ್ಟು ನೆನೆಯುತ್ತದೋ ಒಬ್ಬಟ್ಟು ಅಷ್ಟು ಮೃದುವಾಗಿ ಬರುತ್ತದೆ).

2. ಹೂರಣ ತಯಾರಿಕೆ (Stuffing)
*ಕಡಲೆಬೇಳೆಯನ್ನು ಶುಚಿಯಾಗಿ ತೊಳೆದು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿಡಿ.
*ಕುಕ್ಕರ್‌ನಲ್ಲಿ ನೆನೆಸಿದ ಬೇಳೆ, ಎರಡು ಕಪ್ ನೀರು, ಸ್ವಲ್ಪ ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು ವಿಶಲ್ ಬರುವವರೆಗೆ ಬೇಯಿಸಿ.
*ಬೇಳೆ ಬೆಂದ ನಂತರ ನೀರನ್ನು ಪೂರ್ತಿಯಾಗಿ ಬಸಿದು (ಬೇಳೆಕಟ್ಟು), ಬೇಳೆ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
*ಈಗ ಸ್ಟೌವ್ ಮೇಲೆ ಬಾಣಲೆ ಇಟ್ಟು ಸ್ವಲ್ಪ ತುಪ್ಪ ಮತ್ತು ಬೆಲ್ಲದ ತುರಿ ಹಾಕಿ ಕರಗಿಸಿ.
*ಬೆಲ್ಲ ಪೂರ್ತಿ ಕರಗಿದ ನಂತರ ಅದಕ್ಕೆ ರುಬ್ಬಿದ ಕಡಲೆಬೇಳೆ ಮಿಶ್ರಣ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಬೆರೆಸಿ.
*ಮಧ್ಯಮ ಉರಿಯಲ್ಲಿ ಬೇಯಿಸುವಾಗ ಮಧ್ಯೆ ಮಧ್ಯೆ ತುಪ್ಪ ಸೇರಿಸುತ್ತಿರಿ.
ಮಿಶ್ರಣವು ಗಟ್ಟಿಯಾಗಿ ಪಾತ್ರೆಯನ್ನು ಬಿಡಲು ಶುರುಮಾಡಿದಾಗ ಸ್ಟೌವ್ ಆಫ್ ಮಾಡಿ ಪೂರ್ತಿ ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಸಣ್ಣ ಉಂಡೆಗಳನ್ನು (ಹೂರಣ) ಮಾಡಿ ಇಟ್ಟುಕೊಳ್ಳಿ.

3. ಒಬ್ಬಟ್ಟು ತಟ್ಟುವ ವಿಧಾನ
*ಈಗ ಮೊದಲು ನೆನೆಸಿಟ್ಟ ಮೈದಾ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿ.
*ಒಂದು ಹಿಟ್ಟಿನ ಉಂಡೆಯನ್ನು ಕೈಯಿಂದ ಸ್ವಲ್ಪ ಅಗಲ ಮಾಡಿ, ಅದರೊಳಗೆ ಹೂರಣದ ಉಂಡೆಯನ್ನು ಇಟ್ಟು ಅಂಚುಗಳನ್ನು ಪೂರ್ತಿಯಾಗಿ ಮುಚ್ಚಿ.
*ಹೋಳಿಗೆ ಮಣೆ ಅಥವಾ ಚಪಾತಿ ಮಣೆಯ ಮೇಲೆ ಬಟರ್ ಪೇಪರ್ ಅಥವಾ ಪ್ಲಾಸ್ಟಿಕ್ ಶೀಟ್ ಇಟ್ಟು ಅದಕ್ಕೆ ತುಪ್ಪ ಸವರಿ. ತಯಾರಿಸಿದ ಉಂಡೆಯನ್ನು ಅದರ ಮೇಲಿಟ್ಟು ಯಾವುದೇ ಒತ್ತಡ ಹಾಕದೆ ಮೆಲ್ಲನೆ ಒತ್ತಿರಿ. ಮೇಲೆ ಮತ್ತೊಂದು ಬಟರ್ ಪೇಪರ್ ಇಟ್ಟು ಲಟ್ಟಣಿಗೆಯಿಂದ ತೆಳ್ಳಗೆ ಲಟ್ಟಿಸಿಕೊಳ್ಳಿ.

4. ಬೇಯಿಸುವ ವಿಧಾನ

ಹಂಚನ್ನು ಬಿಸಿ ಮಾಡಿ, ತಯಾರಿಸಿದ ಒಬ್ಬಟ್ಟನ್ನು ಅದರ ಮೇಲೆ ಹಾಕಿ.
ಎರಡು ಬದಿಗಳಲ್ಲಿ ತುಪ್ಪ ಸವರಿಕೊಂಡು ಕೆಂಪಾಗುವವರೆಗೆ ಬೇಯಿಸಿ ತಟ್ಟೆಗೆ ಹಾಕಿಟ್ಟುಕೊಳ್ಳಿ. ಈಗ ರುಚಿಕರವಾದ ಒಬ್ಬಟ್ಟು ಸವಿಯಲು ಸಿದ್ಧ!



Source link

Leave a Reply

Your email address will not be published. Required fields are marked *