
ಅರ್ಜುನ್ ತೆಂಡೂಲ್ಕರ್ ಅವರ ವಿವಾಹ ಸಮಾರಂಭದಲ್ಲಿ ಸಹೋದರಿ ಸಾರಾ ತೆಂಡುಲ್ಕರ್ ಎಲ್ಲರ ಗಮನ ಸೆಳೆದರು. ಆದರೆ, ಅವರ ಪ್ರಿಯಕರ ಎನ್ನಲಾದ ನಟ ಸಿದ್ಧಾಂತ್ ಚತುರ್ವೇದಿ ಗೈರುಹಾಜರಾಗಿದ್ದು, ಶುಭಮನ್ ಗಿಲ್ ನಂತರ ಮತ್ತೊಂದು ಬ್ರೇಕಪ್ ಆಗಿದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಮಗ, ಕ್ರಿಕೆಟ್ ತಾರೆ ಅರ್ಜುನ್ ತೆಂಡೂಲ್ಕರ್ ಮತ್ತು ಉದ್ಯಮಿ ಸಾನಿಯಾ ಚಂಡೋಕ್ ಅವರ ಮದುವೆ ಇತ್ತೀಚೆಗೆ ನಡೆಯಿತು. ಅರ್ಜುನ್ ತೆಂಡುಲ್ಕರ್ ತಮ್ಮ ಬಹುಕಾಲದ ಗೆಳತಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಲವಾರು ವರ್ಷಗಳಿಂದ ಸಾನಿಯಾ ಮತ್ತು ಸಾರಾ ತೆಂಡುಲ್ಕರ್ ಉತ್ತಮ ಸ್ನೇಹಿತೆಯರು. ತಮ್ಮನ ಮದುವೆಯಲ್ಲಿ ಅಕ್ಕ ಸಾರಾ ಮಿಂಚಿಂಗೋ ಮಿಂಚಿಂಗು. ಆದ್ರೆ ಒಂದೇ ಒಂದು ಕೊರತೆ- ಆಕೆಯ ಲವರ್, ಭಾವಿ ಗಂಡ ಎಲ್ಲೂ ಕಾಣಿಸಿಕೊಳ್ಲಿಲ್ಲ.
ಮದುವೆಗೆ ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್, ಐಶ್ವರ್ಯಾ ರೈ, ಮುಕೇಶ್ ಅಂಬಾನಿ, ಎಂ.ಎಸ್.ಧೋನಿ, ರಾಹುಲ್ ದ್ರಾವಿದ್, ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಮೊದಲಾದವರೆಲ್ಲ ಬಂದು ಹಾರೈಸಿದರು. ಆದ್ರೆ ಸಾರಾ ತೆಂಡುಲ್ಕರ್ ಪ್ರಿಯಕರ ಎಂದು ಭಾವಿಸಲಾಗಿರುವ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಕಾಣಿಸಿಕೊಳ್ಳಲಿಲ್ಲ.
ಹೀಗಾಗಿ ಒಂದು ಸುದ್ದಿ ಹರಿದಾಡಲು ಶುರುವಾಗಿದೆ- ಸಿದ್ಧಾಂತ್ ಜೊತೆಗೂ ಸಾರಾಗೆ ಬ್ರೇಕಪ್ ಆಯ್ತಾ? ತಮ್ಮನ ಮದುವೆ ಮೊದಲು ಯಾಕಾಯ್ತು? ಅಕ್ಕನ ಮದುವೆ ಯಾಕಾಗಲಿಲ್ಲ? ಸಿದ್ಧಾಂತ್ ಚತುರ್ವೇದಿಗೂ ಮೊದಲು ಕ್ರಿಕೆಟರ್ ಶುಭಮನ್ ಗಿಲ್ ಜೊತೆಗೆ ಸಾರಾ ಓಡಾಡ್ತಾ ಇದ್ದಳು. ಆ ಲವ್ ಕೂಡ ಬ್ರೇಕಪ್ ಆಗಿತ್ತು. ಇದೂ ಹಾಗೇ ಆಯ್ತಾ?
ಮಾಧ್ಯಮ ವರದಿಗಳ ಪ್ರಕಾರ, ಸಾರಾ ಮತ್ತು ಸಿದ್ಧಾಂತ್ ಇತ್ತೀಚೆಗೆ ಕೆಲವೆಡೆ ಒಟ್ಟಿಗೆ ಸಮಯ ಕಳೆದದ್ದು ಕಂಡುಬಂದಿತ್ತು. ಇಬ್ಬರ ನಡುವೆ ಒಳ್ಳೆಯ ಸ್ನೇಹ ಕಂಡುಬಂದಿತ್ತು. ಆದರೆ ಇಬ್ಬರೂ ಈ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಮೂಲಗಳ ಪ್ರಕಾರ ಅದು ಇನ್ನೂ ಪ್ರಾರಂಭದ ಹಂತದಲ್ಲಿದೆ. ಆದ್ದರಿಂದ ಈ ಸುದ್ದಿ ಬಹಿರಂಗವಾಗಬಾರದು ಎಂದು ಇಬ್ಬರೂ ಬಯಸುತ್ತಿದ್ದಾರೆ ಎನ್ನಲಾಗಿತ್ತು.
ಸಿದ್ಧಾಂತ್ ಚತುರ್ವೇದಿ ಯಾರು?
ಸಿದ್ಧಾಂತ್ ಚತುರ್ವೇದಿ ಮೊದಲಿಗೆ ಟಿವಿ ಸರಣಿ ʼಲೈಫ್ ಸಹೀ ಹೈʼ ಮೂಲಕ ಅಭಿನಯ ಆರಂಭಿಸಿದರು. ಆದರೆ ಅವರಿಗೆ ದೊಡ್ಡ ಹೆಸರು ತಂದ ಸಿನಿಮಾ ʼಗಲ್ಲಿ ಬಾಯ್ʼ. ಈ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸಿ ಬಾಲಿವುಡ್ನಲ್ಲಿ ಗಮನ ಸೆಳೆದರು. ಆತ ಮುಂಬೈನ ಗೋಕುಲಧಾಮ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಪಡೆದು ನಂತರ ಕಾಮರ್ಸ್ ಓದಿ Chartered Accountant ಆಗುವ ಕನಸಿನೊಂದಿಗೆ ಓದನ್ನು ಮುಂದುವರಿಸಿದ್ದ.
ಮಾಧ್ಯಮ ವರದಿಗಳ ಪ್ರಕಾರ, ಸಿದ್ಧಾಂತ್ ಅವರ ಒಟ್ಟು ಆಸ್ತಿ ಸುಮಾರು ₹41 ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ಒಂದು ಜಾಹೀರಾತಿಗೆ ಅವರು ಸುಮಾರು ₹40 ಲಕ್ಷ ವರೆಗೆ ಶುಲ್ಕ ಪಡೆಯುತ್ತಾರೆ ಎನ್ನಲಾಗುತ್ತದೆ.
ಮೊದಲು ಶುಭಮನ್ ಗಿಲ್ ಜೊತೆಗೆ
ಇದಕ್ಕೂ ಮೊದಲು ಸಾರಾ ಹೆಸರು ಭಾರತೀಯ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಹಲವು ಬಾರಿ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕ್ರಿಕೆಟ್ ಮೈದಾನದಲ್ಲಿಯೂ ಗಿಲ್ ಅವರನ್ನು “ಸಾರಾ” ಹೆಸರಿನಿಂದ ಹಲವರು ಚುಡಾಯಿಸುತ್ತಿದ್ದ ಘಟನೆಗಳು ನಡೆದಿವೆ.
ಆಸಕ್ತಿದಾಯಕ ಸಂಗತಿ ಏನೆಂದರೆ, ಸಿದ್ಧಾಂತ್ ಚತುರ್ವೇದಿ ಹೆಸರು ಈ ಹಿಂದೆ ನವ್ಯಾ ನಾವೇಲಿ ನಂದಾ ಅವರ ಜೊತೆಗೂ ಕೇಳಿಬಂದಿತ್ತು. ಅವರು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಈ ಗಾಸಿಪ್ ಹುಟ್ಟಿತ್ತು. ಒಮ್ಮೆ ಟಾಕ್ ಶೋ Koffee With Karanನಲ್ಲಿ ನಟಿ ಸಾರಾ ಆಲಿ ಖಾನ್ ಅವರನ್ನು ಶುಭಮನ್ ಗಿಲ್ ಬಗ್ಗೆ ಕೇಳಿದಾಗ, ಅವರು ವಿನೋದವಾಗಿ “ನೀವು ತಪ್ಪು ಸಾರಾ ಹಿಂದೆ ಬಿದ್ದಿದ್ದೀರಾ” ಎಂದು ಹೇಳಿ ಎಲ್ಲರನ್ನೂ ನಗಿಸಿದ್ದರು.