ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್: ವಿಜಯ್ ‘ಜನ ನಾಯಕನ್’ ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ! | Rishab Shetty Condemns Jana Nayagan Leak Calls It Unacceptable Asks To Respect Cinema And Stop Piracy

ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್: ವಿಜಯ್ ‘ಜನ ನಾಯಕನ್’ ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ! | Rishab Shetty Condemns Jana Nayagan Leak Calls It Unacceptable Asks To Respect Cinema And Stop Piracy



ಪೈರಸಿ ವಿರುದ್ಧ ಗರ್ಜಿಸಿದ ‘ಕಾಂತಾರ’ ಸ್ಟಾರ್: ವಿಜಯ್ ‘ಜನ ನಾಯಕನ್’ ವಿಡಿಯೋ ಲೀಕ್ ಬೆನ್ನಲ್ಲೇ ಕಿಡಿಕಿಡಿಯಾದ ರಿಷಬ್ ಶೆಟ್ಟಿ! | Rishab Shetty Condemns Jana Nayagan Leak Calls It Unacceptable Asks To Respect Cinema And Stop Piracy

ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲದೆ, ರಜನಿಕಾಂತ್, ಕಮಲ್ ಹಾಸನ್, ಸೂರ್ಯ ಮತ್ತು ಚಿರಂಜೀವಿ ಅವರಂತಹ ದಿಗ್ಗಜ ನಟರು ಕೂಡ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್, ಅನಧಿಕೃತವಾಗಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ.

ಪೈರಸಿ ವಿರುದ್ಧ ರಿಷಬ್ ಶೆಟ್ಟಿ ಕಿಡಿ

ಭಾರತೀಯ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳಿಗೆ ಈಗ ‘ಪೈರಸಿ’ ಎಂಬ ದೊಡ್ಡ ತಲೆನೋವು ಶುರುವಾಗಿದೆ. ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಕನ್’ (Jana Nayagan) ಬಿಡುಗಡೆಗೂ ಮುನ್ನವೇ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿರುವುದು ಇಡೀ ಸಿನಿಮಾರಂಗವನ್ನೇ ಬೆಚ್ಚಿಬೀಳಿಸಿದೆ. ಈ ಗಂಭೀರ ಘಟನೆಯನ್ನು ಸ್ಯಾಂಡಲ್‌ವುಡ್‌ನ ಹೆಮ್ಮೆ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ತೀವ್ರವಾಗಿ ಖಂಡಿಸಿದ್ದಾರೆ. “ಸಿನಿಮಾ ತಂಡದ ಶ್ರಮವನ್ನು ಈ ರೀತಿ ಹಾಳು ಮಾಡುವುದು ಅಕ್ಷಮ್ಯ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

“ಸಿನಿಮಾ ಅಂದರೆ ಅದು ಬರಿ ಮನರಂಜನೆಯಲ್ಲ, ನೂರಾರು ಕನಸು!”

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ರಿಷಬ್ ಶೆಟ್ಟಿ, ಪೈರಸಿ ಭೂತಕ್ಕೆ ಕಡಿವಾಣ ಹಾಕುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. “ಸಿನಿಮಾ ಎಂಬುದು ಕೇವಲ ಬಣ್ಣದ ಲೋಕವಲ್ಲ, ಅದು ಅದೆಷ್ಟೋ ಜನರ ಪ್ಯಾಶನ್, ಕನಸು ಮತ್ತು ಪ್ರೀತಿಯ ಮೇಲೆ ನಿರ್ಮಾಣವಾಗಿರುತ್ತದೆ. ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಲು ಸಾವಿರಾರು ಜನರು ಹಗಲು ರಾತ್ರಿ ಶ್ರಮಿಸಿರುತ್ತಾರೆ. ಯಾರಾದರೂ ಆ ಶ್ರಮಕ್ಕೆ ಕಿಂಚಿತ್ತೂ ಹಾನಿ ಮಾಡಲು ಯತ್ನಿಸಿದರೆ, ಅದು ಆ ಸಿನಿಮಾದ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ನೋವುಂಟು ಮಾಡುತ್ತದೆ” ಎಂದು ರಿಷಬ್ ಭಾವುಕರಾಗಿ ನುಡಿದಿದ್ದಾರೆ.

‘ಜನ ನಾಯಕನ್’ ಲೀಕ್ ಪ್ರಕರಣ: ತೀವ್ರ ಖಂಡನೆ

ಕೆಲವು ಕಿಡಿಗೇಡಿಗಳು ‘ಜನ ನಾಯಕನ್’ ಚಿತ್ರದ ಸುಮಾರು 5 ನಿಮಿಷಗಳ ಪ್ರಮುಖ ವಿಡಿಯೋ ತುಣುಕನ್ನು ಇಂಟರ್ನೆಟ್‌ನಲ್ಲಿ ಹರಿಬಿಟ್ಟಿದ್ದರು. ಇದು ಚಿತ್ರತಂಡಕ್ಕೆ ಅತೀವ ನಷ್ಟ ಉಂಟು ಮಾಡುವ ಸಂಭವವಿದೆ. ಈ ಬಗ್ಗೆ ಮಾತನಾಡಿದ ರಿಷಬ್, “ಜನ ನಾಯಕನ್ ವಿಡಿಯೋ ಸೋರಿಕೆಯಾಗಿರುವುದು ಗಂಭೀರವಾದ ಮತ್ತು ಸ್ವೀಕರಿಸಲಾಗದ ವಿಷಯ. ದಯವಿಟ್ಟು ಪ್ರೇಕ್ಷಕರು ಇಂತಹ ಸೋರಿಕೆಯಾದ ತುಣುಕುಗಳನ್ನು ಹಂಚಬೇಡಿ. ನಾಳೆ ನಿಮಗೆ ಇನ್ನು ಒಳ್ಳೆಯ ಸಿನಿಮಾಗಳನ್ನು ನೀಡುವ ಶಕ್ತಿಯನ್ನು ಈ ರೀತಿ ಕೊಲ್ಲಬೇಡಿ. ಈ ಕಷ್ಟದ ಸಮಯದಲ್ಲಿ ನಾನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಮತ್ತು ಇಡೀ ಚಿತ್ರತಂಡದ ಪರವಾಗಿ ನಿಲ್ಲುತ್ತೇನೆ. ನಮ್ಮ ಸಿನಿಮಾ ಕುಟುಂಬವನ್ನು ನಾವೇ ರಕ್ಷಿಸೋಣ. ಪೈರಸಿಯನ್ನು ಕೊಲ್ಲೋಣ (Kill Piracy)” ಎಂದು ಕರೆ ನೀಡಿದ್ದಾರೆ.

ಕಾನೂನು ಕ್ರಮಕ್ಕೆ ಮುಂದಾದ ಕೆವಿಎನ್ ಪ್ರೊಡಕ್ಷನ್ಸ್

ಕೇವಲ ರಿಷಬ್ ಶೆಟ್ಟಿ ಮಾತ್ರವಲ್ಲದೆ, ರಜನಿಕಾಂತ್, ಕಮಲ್ ಹಾಸನ್, ಸೂರ್ಯ ಮತ್ತು ಚಿರಂಜೀವಿ ಅವರಂತಹ ದಿಗ್ಗಜ ನಟರು ಕೂಡ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್, ಅನಧಿಕೃತವಾಗಿ ವಿಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದೆ. “ಸಿನಿಮಾದ ದೃಶ್ಯಗಳನ್ನು ಅಕ್ರಮವಾಗಿ ಕಾಪಿ ಮಾಡಿ ಪ್ರಸಾರ ಮಾಡುವುದು ಅಪರಾಧ. ಇಂತಹ ಕೃತ್ಯ ಎಸಗುವವರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಸಂಸ್ಥೆ ಖಡಕ್ ಎಚ್ಚರಿಕೆ ನೀಡಿದೆ.

ಹೆಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಪ್ರಕಾಶ್ ರಾಜ್ ಮತ್ತು ಗೌತಮ್ ವಾಸುದೇವ್ ಮೆನನ್ ಅವರಂತಹ ಘಟಾನುಘಟಿ ನಟರಿದ್ದಾರೆ. ಚಿತ್ರವು ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗುತ್ತಿದ್ದು, ಅಭಿಮಾನಿಗಳು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ ಪ್ರೋತ್ಸಾಹಿಸಲಿ ಎಂಬುದು ಚಿತ್ರರಂಗದ ಆಶಯವಾಗಿದೆ.



Source link

Leave a Reply

Your email address will not be published. Required fields are marked *