Headlines

24 ವರ್ಷಗಳ ಹಿಂದೆ ಸತ್ತಿದ್ದ ಪತ್ನಿಯಿಂದ ದೂರು ! ಸತ್ಯ ತಿಳಿದು ಗಂಡ, ಪೊಲೀಸ್ ದಂಗು | Wife Who Died 24 Years Ago Files Complaint Against Husband

24 ವರ್ಷಗಳ ಹಿಂದೆ ಸತ್ತಿದ್ದ ಪತ್ನಿಯಿಂದ ದೂರು ! ಸತ್ಯ ತಿಳಿದು ಗಂಡ, ಪೊಲೀಸ್ ದಂಗು | Wife Who Died 24 Years Ago Files Complaint Against Husband



24 ವರ್ಷಗಳ ಹಿಂದೆ ಸತ್ತಿದ್ದ ಪತ್ನಿಯಿಂದ ದೂರು ! ಸತ್ಯ ತಿಳಿದು ಗಂಡ, ಪೊಲೀಸ್ ದಂಗು | Wife Who Died 24 Years Ago Files Complaint Against Husband

ಸತ್ತ ಪತ್ನಿ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಈ ವಿಷ್ಯ ತಿಳಿದು ಗಂಡ ಅಚ್ಚರಿಗೊಳಗಾಗಿದ್ದಾನೆ. ಇನ್ನು ಪೊಲೀಸರು ತಲೆಗೆ ಹುಳು ಬಿಟ್ಕೊಂಡು ತನಿಖೆ ನಡೆಸಿದ್ದಾರೆ. 

ಉತ್ತರ ಪ್ರದೇಶದ (Uttar Pradesh) ಗೋರಖ್ಪುರದಲ್ಲಿ ವಿಚಿತ್ರ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 24 ವರ್ಷಗಳ ಹಿಂದೆ ಸಾವನ್ನಪ್ಪಿದ ಪತ್ನಿ ಹೆಸರಿನಲ್ಲಿ ಬಂದ ದೂರನ್ನು ನೋಡಿ ಗಂಡ ಹಾಗೂ ಪೊಲೀಸರು ದಂಗಾಗಿದ್ದಾರೆ. ಪತ್ನಿ ದೂರು ನೀಡಿದ್ದಾಳೆ ಎಂಬುದನ್ನು ಕೇಳಿ ಗಂಡ ಅಚ್ಚರಿಗೊಳಗಾಗಿದ್ದ. ಆದ್ರೆ ಪೊಲೀಸ್ ಠಾಣೆಗೆ ಬಂದಾಗ ಸತ್ಯ ಗೊತ್ತಾಗಿದೆ. ತನಿಖೆಯಲ್ಲಿ ಪೊಲೀಸರನ್ನೂ ದಿಗ್ಭ್ರಮೆಗೊಳಿಸುವ ಕಥೆ ಹೊರಬಿದ್ದಿದೆ.

ಸತ್ತ ಹೆಂಡ್ತಿ ದೂರು ನೀಡಿದ್ಲಾ?

ಗೋರಖ್ಪುರದ ಮೆಹದವಾಲ್ ಪ್ರದೇಶದ ಬರುಯಿಪುರದಲ್ಲಿ ಘಟನೆ ನಡೆದಿದೆ. ಅಲ್ಲಿನ ನಿವಾಸಿ ರಾಮ್ಜೀತ್ ಧನ್ಬಾದ್ನ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಹೆಸರು ಕಪುರಾ ದೇವಿ. ರಾಮ್ ಜೀತ್, ಕಪುರಾ ದೇವಿಯನ್ನು 2002 ರಲ್ಲಿ ಕಳೆದುಕೊಂಡಿದ್ದಾರೆ. ಕಪುರಾ ದೇವಿ ನಿಧನದ ನಂತ್ರ ರಾಮ್ ಜೀತ್ ಎರಡನೇ ಮದುವೆ ಆಗಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಒಬ್ಬ ಮಹಿಳೆಯನ್ನು ನೇಮಿಸಿಕೊಂಡಿದ್ದರು.

ಬೆಂಗಳೂರು: ಮಗನಿಂದಲೇ ನಿವೃತ್ತ ನೇವಿ ಕ್ಯಾಪ್ಟನ್, ಪತ್ನಿ ಕೊಲೆ, ಆರೋಪಿಗಿತ್ತು ಅನೈತಿಕ ಸಂಬಂಧ, ಹಣ ಕೊಡದ್ದಕ್ಕೆ ಹೆತ್ತವರ ಕೊಂದ

ಕಪುರಾ ದೇವಿ ಹೆಸರಿನಲ್ಲಿ ಆ ಮಹಿಳೆ ಮೋಸ ಮಾಡಲು ಮುಂದಾಗಿದ್ದಾಳೆ. ರಾಮ್ ಜೀತ್ ವಿರುದ್ಧ ಆಕೆ ದೂರು ನೀಡಿದ್ದಾಳೆ. ಆದ್ರೆ ತನ್ನ ಹೆಸರಿನ ಬದಲು ರಾಮ್ ಜೀತ್ ಪತ್ನಿ ಹೆಸರನ್ನು ಬಳಸಿದ್ದೇ ಈ ಎಲ್ಲ ಗೊಂದಲಕ್ಕೆ ಕಾರಣವಾಗಿದೆ. ರಾಮ್ ಜೀತ್ ಪತ್ನಿ ಕಪುರಾ ದೇವಿ ಹೆಸರಿನಲ್ಲಿ ದೂರು ನೀಡಿದ ಮಹಿಳೆ, ರಾಮ್ ಜೀತ್ ಮೋಸ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾಳೆ. ದೂರಿನ ಮೇಲೆ ಪೊಲೀಸರು ರಾಮ್ ಜೀತ್ ಅವರನ್ನು ಠಾಣೆಗೆ ಕರೆಸಿದ್ದಾರೆ. ನಿಮ್ಮ ಪತ್ನಿ ನಿಮ್ಮ ವಿರುದ್ಧ ದೂರು ನೀಡಿದ್ದಾರೆ ಅಂತ ಪೊಲೀಸರು ಹೇಳ್ತಿದ್ದಂತೆ ರಾಮ್ ಜೀತ್ ಗೆ ಶಾಕ್ ಆಗಿದೆ.

ರಾಮಜೀತ್ ಪೊಲೀಸ (police)ರಿಗೆ ತಮ್ಮ ವಿಷ್ಯ ಹೇಳಿದ್ದಾರೆ. ತಮ್ಮ ಪತ್ನಿ 24 ವರ್ಷಗಳ ಹಿಂದೆ ನಿಧನರಾಗಿದ್ದಾರೆ, ಅವರು ಹೇಗೆ ಮತ್ತೆ ಬದುಕಲು ಸಾಧ್ಯ ಅಂತ ಕೇಳಿದ್ದಾರೆ. ಆಗ ಪೊಲೀಸರಿಗೆ ಗೊಂದಲ ಶುರುವಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ. ಆಗ ಮೋಸ ಮಾಡಿದ ಮಹಿಳೆ ಹೆಸರು ಗಂಗಾ ಭಾರತಿ ಎಂಬುದು ಗೊತ್ತಾಗಿದೆ. ಗಂಗಾಭಾರತಿ ಮಕ್ಕಳನ್ನು ನೋಡಿಕೊಳ್ಳಲು ರಾಮ್ ಜೀತ್ ಮನೆಯಲ್ಲಿದ್ದಳು. ರಾಮ್ ಜೀತ್ ಗೆ ಹಣ ನೀಡುವಂತೆ ಒತ್ತಾಯಿಸಿದ್ದಳು. ರಾಮ್ ಜೀತ್ ಹಣ ನೀಡಲು ನಿರಾಕರಿಸ್ತಿದ್ದಂತೆ ಗಂಗಾ ಭಾರತಿ ಮನೆಬಿಟ್ಟು ಹೋಗಿದ್ದಳು.

ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪತಿಯನ್ನು ಪರಲೋಕಕ್ಕೆ ಕಳಿಸಲು ಪ್ಲಾನ್! ಆಮೇಲೆ ಸಿನಿಮಾ ಕಥೆ ಕಟ್ಟಿದ ಕಿಲಾಡಿ ಲೇಡಿ

ರಾಮ್ ಜೀತ್ ರಿಂದ ಹಣ ವಸೂಲಿ ಮಾಡಲು ಗಂಗಾಭಾರತಿ ಈ ಟೆಕ್ನಿಕ್ ಬಳಸಿದ್ದಾಳೆ. ಪೊಲೀಸರ ಪ್ರಕಾರ, ಮಹಿಳೆ ಗೋರಖ್ಪುರ ಸಿವಿಲ್ ನ್ಯಾಯಾಲಯದಲ್ಲಿ ರಾಮ್ಜೀತ್ ಹೆಸರಿನಲ್ಲಿ ಅಫಿಡವಿಟ್ನೊಂದಿಗೆ ಪ್ರಕರಣ ದಾಖಲಿಸಿದ್ದಾಳೆ. ತನ್ನ ಹೆಸರನ್ನು ರಾಮ್ ಜೀತ್ ಕುಟುಂಬದ ಲೀಸ್ಟ್ ನಲ್ಲಿ ಸೇರಿಸುವ ಪ್ರಯತ್ನ ಕೂಡ ಮಾಡಿದ್ದಾಳೆ. ಗಂಗಾಭಾರತಿ ವಿರುದ್ಧ ಕೋರ್ಟ್ಮೊರೆ ಹೋಗಲು ರಾಮ್ ಜೀತ್ ನಿರ್ಧರಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದು, ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕ್ಬೇಕಿದೆ.



Source link

Leave a Reply

Your email address will not be published. Required fields are marked *