Headlines

ಮಾನವರಿಲ್ಲ, ರೋಬೋಗಳೆ ಕೆಲ್ಸ ಮಾಡುವ 24/7 ಫ್ಯಾಕ್ಟ್ರಿ! – ತ.ನಾಡಲ್ಲಿ ಚಿಪ್‌ ತಯಾರಕ ಡಾರ್ಕ್‌ ಫ್ಯಾಕ್ಟ್ರಿ | Tamilnadu No Humans Only Robots A 24 7 Factory In Action

ಮಾನವರಿಲ್ಲ, ರೋಬೋಗಳೆ ಕೆಲ್ಸ ಮಾಡುವ 24/7 ಫ್ಯಾಕ್ಟ್ರಿ! – ತ.ನಾಡಲ್ಲಿ ಚಿಪ್‌ ತಯಾರಕ ಡಾರ್ಕ್‌ ಫ್ಯಾಕ್ಟ್ರಿ | Tamilnadu No Humans Only Robots A 24 7 Factory In Action



ಮಾನವರಿಲ್ಲ, ರೋಬೋಗಳೆ ಕೆಲ್ಸ ಮಾಡುವ 24/7 ಫ್ಯಾಕ್ಟ್ರಿ! – ತ.ನಾಡಲ್ಲಿ ಚಿಪ್‌ ತಯಾರಕ ಡಾರ್ಕ್‌ ಫ್ಯಾಕ್ಟ್ರಿ | Tamilnadu No Humans Only Robots A 24 7 Factory In Action

ಕೃತಕ ಬುದ್ಧಿಮತ್ತೆಯ (ಎಐ) ಜಗತ್ತಿನಲ್ಲಿ ಟೆಕ್ಕಿಗಳಿಗೆ ಕೆಲಸದ ಆತಂಕ ಕಾಡುತ್ತಿರುವ ಹೊತ್ತಿನಲ್ಲೇ, ಎಐ ಮತ್ತು ರೋಬೋಟ್‌ಗಳು ಈಗಾಗಲೇ ಟೆಕ್ಕಿಗಳ ಕೆಲಸ ಕಸಿದುಕೊಂಡು, ಸಮಯದ ಹಂಗಿಲ್ಲದೇ 5-6 ವರ್ಷದಿಂದ ಕೆಲಸ ಮಾಡುತ್ತಿರುವ ಬೆಳವಣಿಗೆಯೊಂದು ತಮಿಳುನಾಡಿನಲ್ಲಿ ನಡೆದಿದೆ

ಕಾಂಚೀಪುರಂ: ಕೃತಕ ಬುದ್ಧಿಮತ್ತೆಯ (ಎಐ) ಜಗತ್ತಿನಲ್ಲಿ ಟೆಕ್ಕಿಗಳಿಗೆ ಕೆಲಸದ ಆತಂಕ ಕಾಡುತ್ತಿರುವ ಹೊತ್ತಿನಲ್ಲೇ, ಎಐ ಮತ್ತು ರೋಬೋಟ್‌ಗಳು ಈಗಾಗಲೇ ಟೆಕ್ಕಿಗಳ ಕೆಲಸ ಕಸಿದುಕೊಂಡು, ಸಮಯದ ಹಂಗಿಲ್ಲದೇ 5-6 ವರ್ಷದಿಂದ ಕೆಲಸ ಮಾಡುತ್ತಿರುವ ಬೆಳವಣಿಗೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ‘ಪಾಲಿಮ್ಯಾಟೆಕ್’ ಎಂಬ ಸೆಮಿಕಂಡಕ್ಟರ್‌ ಉತ್ಪಾದಕ ಈ ಕಾರ್ಖಾನೆಯಲ್ಲಿ ಕೆಲವೇ ಕೆಲವು ಎಂಜಿನಿಯರ್‌ಗಳು ಇಡೀ ದಿನದಲ್ಲಿ ಕೆಲವೇ ಕೆಲವು ಹೊತ್ತು ಮಾತ್ರವೇ ಮೇಲ್ವಿಚಾರಣೆ ಮಾಡುವ ಕೆಲಸ ಮಾಡುತ್ತಾರೆ. ಆದರೂ ಉತ್ಪಾದನೆ ನಡೆಯುತ್ತಲೇ ಇರುತ್ತದೆ ಎಂದರೆ ನಂಬುತ್ತೀರಾ?

ಹೌದು, ದೇಶದ ಈ ಏಕೈಕ ಡಾರ್ಕ್ ಫ್ಯಾಕ್ರ್ಟಿಯಲ್ಲಿ ರೋಬೋಟ್‌ಗಳದ್ದೇ ಕಾರುಬಾರು. ಅವುಗಳು ವಿಶ್ರಾಂತಿಯೇ ಇಲ್ಲದೆ ಇಡೀ ದಿನ ಯಾಂತ್ರಿಕವಾಗಿ ಕೆಲಸ ಮಾಡುತ್ತಿರುತ್ತವೆ.

ಏನೇನು ಮಾಡ್ತವೆ?:

ಕತ್ತಲ ಕೋಣೆಯಂತಿರುವ ಈ ಕಾರ್ಖಾನೆಯಲ್ಲಿ ಕಾಣಿಸುವುದು ಹಸಿರು, ನೀಲಿ, ಕೆಂಪು ಬಣ್ಣದ ಯುವಿ ಕಿರಣಗಳು, ಕೇಳುವುದು ಅವುಗಳ ಬೀಪ್‌ ಸದ್ದು ಮಾತ್ರ. ಈ ಬಣ್ಣ ಮತ್ತು ಸದ್ದುಗಳನ್ನೇ ಬಳಸಿಕೊಂಡು ಪರಸ್ಪರ ಸಹಯೋಗದಿಂದ ರೋಬೋಟ್‌ಗಳು ಬಿಡುವಿಲ್ಲದೆ ಮೊಬೈಲ್‌, ಲ್ಯಾಪ್‌ಟಾಪ್‌, ಟಿ.ವಿ.ಗಳಿಗೆ ಸೆಮಿಕಂಡಕ್ಟರ್‌ ಮತ್ತು ಸರ್ಕಿಟ್‌ ಬೋರ್ಡ್‌ ಜೋಡಿಸುತ್ತಿರುತ್ತವೆ.

ಇಲ್ಲಿ ಮನುಷ್ಯರ ಕೆಲಸ, ಚಿಪ್‌ ತಯಾರಾಗುವ ಪ್ರದೇಶವನ್ನು ಸ್ವಚ್ಛತೆ, ಯಂತ್ರಗಳ ಪರಿಶೀಲನೆ, ಸ್ಟಾಕ್ ಎಣಿಕೆ, ನಿರ್ವಹಣೆ ಇತ್ಯಾದಿ. ಇದಕ್ಕೆ ತಗುಲುವುದು ಕೆಲ ಗಂಟೆಗಳಷ್ಟೇ. ಉಳಿದಂತೆ ಉತ್ಪಾದನೆಯನ್ನು ಮೇಲ್ವಿಚಾರಣೆ, ಸಂಶೋಧನೆ, ಖಾತೆ ನಿರ್ವಹಣೆ, ಮಾರ್ಕೆಟಿಂಗ್, ಭದ್ರತೆ, ಆಡಳಿತಗಳಂತಹ ಕಾರ್ಯಗಳನ್ನು ಸಿಬ್ಬಂದಿ ಮಾಡುತ್ತಾರೆ.

ಪಾಲಿಮ್ಯಾಟೆಕ್‌ನ ನಿರ್ದೇಶಕ ವಿಶಾಲ್‌ ನಂದಂ ಅವರನ್ನು ಕೇಳಿದರೆ, ‘ಅಭಿಯಂತರರು ಕೆಲಸ ಮಾಡುವುದು ಬೇಡ. ಅವರು ಸುಮ್ಮನೆ ಕುಳಿತಿರಲಿ. ಕೆಲಸವೇನಿದ್ದರೂ ಯಂತ್ರಗಳು ಮಾಡಲಿ’ ಎನ್ನುತ್ತಾರೆ. ಈ ಮಾತನ್ನು ನಿಜ ಮಾಡಿರುವ ಅವರ ಈ ಕಂಪನಿಯಲ್ಲಿ ರೋಬೋಟ್‌ಗಳು ಶಿಫ್ಟ್‌, ವಿರಾಮ ಇಲ್ಲದೆ ಇಡೀ ದಿನ ತಮ್ಮ ಕೆಲಸವನ್ನು ಮಾಡುತ್ತಿರುತ್ತವೆ. ಇವುಗಳಿಗೆ ವಿಶ್ರಾಂತಿ ಸಿಗುವುದು ವರ್ಷದಲ್ಲೊಮ್ಮೆ, ಅದೂ ಬರೀ ಅರ್ಧ ಗಂಟೆ!

ಮೊದಲ ಫ್ಯಾಕ್ಟರಿ ಜಪಾನ್‌ನಲ್ಲಿ:

ವಿಶ್ವದ ಪ್ರಥಮ ಡಾರ್ಕ್‌ ಫ್ಯಾಕ್ಟರಿ ಎಫ್‌ಎಎನ್‌ಯುಸಿ ಇರುವುದು ಜಪಾನ್‌ನಲ್ಲಿ. ಇದು ಸ್ಥಾಪನೆಯಾಗಿದ್ದು 2001ರಲ್ಲಿ. ಭಾರತದಲ್ಲಿ ಮೊತ್ತಮೊದಲ ಬಾರಿ ಭಾರೀ ಸಂಖ್ಯೆಯಲ್ಲಿ ರೋಬೋಟ್‌ಗಳನ್ನು ಬಳಸಲು ಮುಂದಾಗಿದ್ದು ರಾಯಲ್‌ ಎನ್‌ಫೀಲ್ಡ್‌. 2015ರಲ್ಲಿ ಪೈಂಟ್‌ಲೈನ್‌ ಎಂಬ ಕಂಪನಿ ಸ್ಥಾಪಿಸಲಾಯಿತಾದರೂ ಇದು ಪೂರ್ಣಪ್ರಮಾಣದಲ್ಲಿ ಮಾನವ ಹಸ್ತಕ್ಷೇಪಮುಕ್ತವಾಗಿಲ್ಲ.

ಡಾರ್ಕ್‌ ಫ್ಯಾಕ್ಟರಿ ಎಂದರೇನು?

ಮಾನವನ ಹಸ್ತಕ್ಷೇಪ ಇಲ್ಲದೆಯೇ ಪೂರ್ಣ ರೋಬೋಟ್‌ಗಳ ಮೂಲಕ ನಿರ್ವಹಿಸುವ ಫ್ಯಾಕ್ಟರಿಗಳನ್ನು ಡಾರ್ಕ್‌ ಫ್ಯಾಕ್ಟರಿ ಎನ್ನುತ್ತಾರೆ. ಇಲ್ಲಿ ರೋಬೋಟ್‌ಗಳ ಕಾರ್ಯನಿರ್ವಹಣೆಗೆ ಬೆಳಕಿಗೆ ಅವಶ್ಯಕತೆ ಇರುವುದಿಲ್ಲ. ಕತ್ತಲಿನಲ್ಲೂ ಅವು ಪರಸ್ಪರ ಸಂದೇಶಗಳ ಮೂಲಕ ಕಾರ್ಯನಿರ್ವಹಿಸಬಲ್ಲವು. ಹೀಗಾಗಿ ಇವುಗಳಿಗೆ ಡಾರ್ಕ್‌ ಫ್ಯಾಕ್ಟರಿ ಎಂಬ ಹೆಸರು ಬಂದಿದೆ.

– ತಮಿಳ್ನಾಡಿನ ಸೆಮಿಕಂಡಕ್ಟರ್‌ ಘಟಕದಲ್ಲಿ ಎಂಜಿನಿಯರ್‌ಗಳಿಗಿಲ್ಲ ಕೆಲಸ

– ಕಾಂಚೀಪುರಂನ ಇದೆ ದೇಶದ ಏಕೈಕ ಸಂಪೂರ್ಣ ಡಾರ್ಕ್‌ ಫ್ಯಾಕ್ಟರಿ

– ರೋಬೋಟ್‌ಗಳಿಂದ ಮೊಬೈಲ್‌, ಟಿ.ವಿ.ಗೆ ಚಿಪ್‌ ಜೋಡಿಸೋ ಕೆಲಸ

– ಅಲ್ಲಿ ಇಡೀ ವರ್ಷ ಹಗಲು-ರಾತ್ರಿ ಕೆಲಸ. ವರ್ಷಕ್ಕೆ 30 ನಿಮಿಷ ವಿರಾಮ

– ಕೆಲವೇ ಕೆಲವು ಎಂಜಿನಿಯರ್‌ಗಳಿಂದ ಇಲ್ಲಿ ಮೇಲ್ವಿಚಾರಣೆ ಕೆಲಸ



Source link

Leave a Reply

Your email address will not be published. Required fields are marked *