Headlines

Air Canada plane hits fire truck: ಲಾಗಾರ್ಡಿಯಾ ಏರ್‌ಪೋರ್ಟ್: ರನ್‌ವೇಯಲ್ಲಿ ಟ್ರಕ್‌ಗೆ ವಿಮಾನ ಡಿಕ್ಕಿ | Laguardia Airport Plane Crash Plane Collides With Truck

Air Canada plane hits fire truck: ಲಾಗಾರ್ಡಿಯಾ ಏರ್‌ಪೋರ್ಟ್: ರನ್‌ವೇಯಲ್ಲಿ ಟ್ರಕ್‌ಗೆ ವಿಮಾನ ಡಿಕ್ಕಿ | Laguardia Airport Plane Crash Plane Collides With Truck



Air Canada plane hits fire truck: ಲಾಗಾರ್ಡಿಯಾ ಏರ್‌ಪೋರ್ಟ್: ರನ್‌ವೇಯಲ್ಲಿ ಟ್ರಕ್‌ಗೆ ವಿಮಾನ ಡಿಕ್ಕಿ | Laguardia Airport Plane Crash Plane Collides With Truck

LaGuardia airport plane crash: ಅಮೆರಿಕಾದ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನವು ರನ್‌ವೇಯಲ್ಲಿದ್ದ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಟ್ರಕ್‌ಗೆ ಡಿಕ್ಕಿ ಹೊಡೆದ ವಿಮಾನ: ನಾಲ್ವರಿಗೆ ಗಂಭೀರ ಗಾಯ

ರನ್‌ವೇಯಲ್ಲಿದ್ದ ಟ್ರಕ್‌ಗೆ ವಿಮಾನವೊಂದು ಡಿಕ್ಕಿ ಹೊಡೆದ ಪರಿಣಾಮ ವಿಮಾನಕ್ಕೆ ತೀವ್ರ ಹಾನಿಯಾಗಿದ್ದಲ್ಲದೇ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಅಮೆರಿಕಾದ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಲ್ಯಾಂಡಿಂಗ್‌ ಅನ್ನು ನಿರ್ಬಂಧಿಸಲಾಗಿತ್ತು. ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ಸಿಆರ್‌ಜೆ-900 ಯು ರನ್‌ವೇಯಲ್ಲಿ ಅಗ್ನಿ ಶಾಮಕ ಇಲಾಖೆಯೆ ಟ್ರಕ್ಕೊಂದಕ್ಕೆ ಡಿಕ್ಕಿ ಹೊಡೆದಿದ್ದು, ಇದರಿಂದ ವಿಮಾನದ ಮೂಗಿಗೆ (ಮುಂಭಾಗ) ಭಾರಿ ಹಾನಿಯಾಗಿ ನಜ್ಜುಗುಜ್ಜಾಗಿದೆ. ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ FlightRadar24 ಈ ಬಗ್ಗೆ ವರದಿ ಮಾಡಿದೆ.

ಘಟನೆಯ ಬಳಿಕ ವಿಮಾನ ನಿಲ್ದಾಣದಲ್ಲಿ ಜನರ ಸ್ಥಳಾಂತರ ಹಾಗೂ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾಣಿಸುತ್ತಿರುವ ವೀಡಿಯೋಗಳಲ್ಲಿ ಪ್ರಯಾಣಿಕ ವಿಮಾನದ ಮುಂಭಾಗವು ಪುಡಿಪುಡಿಯಾಗಿ, ಪ್ರಯಾಣಿಕರು ವಾಹನದಿಂದ ಇಳಿಯುತ್ತಿದ್ದಂತೆ ಅದು ಗಾಳಿಯಲ್ಲಿ ಓರೆಯಾಗುತ್ತಿರುವುದನ್ನು ಕಾಣಬಹುದಾಗಿದೆ.

ಗಾಯಗೊಂಡವರು ಅಗ್ನಿಶಾಮಕ ದಳದ ಸಿಬ್ಬಂದಿ:

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಅಲ್ಲಿನ ಸ್ಥಳೀಯ ಕಾಲಮಾನ ರಾತ್ರಿ 11:40 ಕ್ಕೆ ಮೊದಲು ನಡೆದ ಈ ಘಟನೆಯಲ್ಲಿ ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಅಗ್ನಿಶಾಮಕ ದಳದವರು ಬಂದರು ಪ್ರಾಧಿಕಾರದ ಪೊಲೀಸ್ ಇಲಾಖೆಗೆ ಸೇರಿದವರು ಎಂದು ವರದಿಯಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಗಂಡನ ಸಾವನ್ನು ಆತ್ಮ*ಹತ್ಯೆ ಎಂದು ಬಿಂಬಿಸಿದ ಪತ್ನಿ: ಸಿಸಿಟಿವಿಯಿಂದ ಸಿಕ್ತು ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಯುನೈಟೆಡ್ 737 ಮ್ಯಾಕ್ಸ್ ವಿಮಾನವು ವಿಮಾನದ ಸಿಬ್ಬಂದಿಯನ್ನು ಅಸ್ವಸ್ಥಗೊಳಿಸುತ್ತಿದ್ದ ವಿಚಿತ್ರ ವಾಸನೆಯಿಂದಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ, ಅಗ್ನಿಶಾಮಕ ಟ್ರಕ್ ರನ್‌ವೇ 4 ಅನ್ನು ದಾಟಲು ಅನುಮತಿ ನೀಡಲಾಗಿತ್ತು. ಇದೇ ವೇಳೆ ಈ ಏರ್ ಕೆನಡಾ ಎಕ್ಸ್‌ಪ್ರೆಸ್ ವಿಮಾನ ರನ್‌ವೇಗೆ ಬಂದಿದ್ದು, ಪರಿಣಾಮ ಪರಸ್ಪರ ಡಿಕ್ಕಿ ಹೊಡೆದಿದೆ. ಸಿಆರ್‌ಜೆ-900 ವಿಮಾನದಲ್ಲಿ ಒಟ್ಟು 100 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ. ಅವರ ಸ್ಥಿತಿಯನ್ನು ಅವಲೋಕನ ಮಾಡಲಾಗುತ್ತಿದೆ. ಈ ವಿಮಾನವು ನ್ಯೂಯಾರ್ಕ್ ಪ್ರದೇಶದ ಸಾಂಪ್ರದಾಯಿಕ ಯಹೂದಿಗಳ ಗುಂಪನ್ನು ಹೊತ್ತೊಯ್ಯುತ್ತಿತ್ತು ಎಂದು ಪ್ರಕಟಣೆಯಿಂದ ತಿಳಿದು ಬಂದಿದೆ. ಘಟನೆಯ ಬಳಿಕ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದ ರನ್‌ವೇಯನ್ನು ಲ್ಯಾಂಡ್ ಆಗುವುದಕ್ಕೆ ಮುಚ್ಚಲಾಗಿತ್ತು.

ಇದನ್ನೂ ಓದಿ: ಬೆಕ್ಕು ಸಾಕೋದು ಬೇಡ ಎಂದಿದ್ದಕ್ಕೆ ಕೆಲ ದಿನಗಳಲ್ಲಿ ಡಾಕ್ಟರ್ ಆಗೋಳಿದ್ದ MBBS ವಿದ್ಯಾರ್ಥಿನಿ ಸಾವಿಗೆ ಶರಣು



Source link

Leave a Reply

Your email address will not be published. Required fields are marked *