Headlines

Oracle ನಿವೃತ್ತಿಗೆ 2 ವರ್ಷ ಇರುವಾಗಲೇ ಕ್ಯಾನ್ಸರ್ ಪೀಡಿತ ಒರಾಕಲ್ ಉದ್ಯೋಗಿ ವಜಾ, ಕಣ್ಣೀರ ಬದುಕು ಬಿಚ್ಚಿಟ್ಟ ಮಗ | Heartbreaking Cancer Stricken Oracle Employee Fired Just 2 Years Before Retirement

ನಿವೃತ್ತಿಗೆ 2 ವರ್ಷ ಇರುವಾಗಲೇ ಕ್ಯಾನ್ಸರ್ ಪೀಡಿತ ಒರಾಕಲ್ ಉದ್ಯೋಗಿ ವಜಾ, ಕಣ್ಣೀರ ಬದುಕು ಬಿಚ್ಚಿಟ್ಟ ಮಗ, ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿರುವ ಈ ಉದ್ಯೋಗಿಯ ಕತೆ ಹಲವರ ಕಣ್ಣಾಲಿ ತೇವಗೊಳಿಸಿದೆ. 

ನವದೆಹಲಿ (ಏ.02) ಅತೀ ದೊಡ್ಡ ಟೆಕ್ ಕಂಪನಿಗಳಲ್ಲಿ ಒಂದಾದ ಒರಾಕಲ್ ಈಗಾಗಲೇ ಉದ್ಯೋಗ ಕಡಿತ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಬರೋಬ್ಬರಿ 12,000 ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದೆ. ಈಗಾಗಲೇ ಹಲವರಿಗೆ ಇಮೇಲ್ ಮೂಲಕ ಉದ್ಯೋಗ ಕಡಿತದ ಮಾಹಿತಿ ನೀಡಿದ್ದಾರೆ. ಇದರ ನಡುವೆ ಕಳೆದ 20 ವರ್ಷದಿಂದ ಒರಾಕಲ್‍‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ಕೂಡ ಇದೇ ಲೇಆಪ್‌ನಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಹಿರಿಯ ಉದ್ಯೋಗಿಯ ಕಣ್ಣೀರ ಕತೆಯನ್ನು ಅವರ ಮಗ ತೆರೆದಿಟ್ಟಿದ್ದಾರೆ.

2 ವರ್ಷ ಇತ್ತು ಅಷ್ಟೇ

ನನ್ನ ತಂದೆ ಕಳೆದ 20 ವರ್ಷಗಳಿಂದ ಒರಾಕಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 20 ವರ್ಷದಿಂದ ಒಂದೇ ಮ್ಯಾನೇಜರ್ ಕಳೆಗಡೆ ಕೆಲಸ ಮಾಡಿದ್ದಾರೆ. ನಿವೃತ್ತಿಗೆ ಇನ್ನು ಎರಡು ವರ್ಷ ಮಾತ್ರ ಬಾಕಿ ಇತ್ತು. ಆದರೆ ಅದಕ್ಕೂ ಮೊದಲೇ ಒರಾಕಲ್ ಕಂಪನಿ ಉದ್ಯೋಗ ಕಡಿತ ಮಾಡಿದೆ. ತಂದೆ ಕ್ಯಾನ್ಸರ್ ರೋಗಿ. ಇಷ್ಟು ದಿನ ಕಂಪನಿಯ ವಿಮೆಯಲ್ಲಿ ತಂದೆಯ ಚಿಕಿತ್ಸೆ ನಡೆಯುತ್ತಿತ್ತು. ಇನ್ನು ಅದು ಕೂಡ ಇಲ್ಲ. ಇಷ್ಟು ವರ್ಷ ಕೆಲಸ ಮಾಡಿದ ಉದ್ಯೋಗಿಯನ್ನು ಒಂದು ಕರೆ ಮಾಡಿ ಹೇಳದೆ, ಸೂಚನೆ ನೀಡದೆ ಕೇವಲ ಒಂದು ಇಮೇಲ್ ಮೂಲಕ ಉದ್ಯೋಗ ಕಡಿತ ಮಾಡಿದ್ದಾರೆ ಎಂದು ತಂದೆಯ ಕಣ್ಣೀರ ಕತೆಯನ್ನು ಮಗ ರೆಡ್ಡಿಟ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಉದ್ಯೋಗ ಕಡಿತದ ಬಿರುಗಾಳಿಯಲ್ಲಿ ಕೆಲಸ ಕಳೆದುಕೊಂಡವರ ಉದ್ಯೋಗಿಗಳ ಕಣ್ಣೀರ ಕತೆ ಒಂದೊಂದು. ಇದೇ ವೇಳೆ ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದು, ತನ್ನ ತಂದೆ 19 ವರ್ಷ ಕೆಲಸ ಮಾಡಿದ್ದರು. ಕಂಪನಿ ಒಂದು ದಿನ ಲೇಆಫ್ ಎಂದು ಉದ್ಯೋಗ ಕಡಿತ ಮಾಡಿತ್ತು. ಕಂಪನಿ ಇದ್ಯಾವುದನ್ನು ನೋಡುವುದಿಲ್ಲ ಎಂದು ಕಮೆಂಟ್ ಮಾಡದ್ದಾರೆ.

ಇದೇ ವೇಳ ಹಲವರು ಧೈರ್ಯ ತುಂಬಿದ್ದಾರೆ. ನಾನು 29 ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಮೇಲ್ ಮೂಲಕ ಉದ್ಯೋಗ ಕಡಿತ ತಿಳಿಸಿದ್ದಾರೆ. ಇದು ಬುದುಕ, ನಿಮ್ಮ ತಂದೆಯ ಮಾಹಿತಿ ನೋಡಿ ನೋವಾಗಿದೆ. ಧೈರ್ಯವಾಗಿರಲು ಹೇಳಿ. ಎಲ್ಲದ್ದಕ್ಕೂ ಪರಿಹಾರವಿದೆ ಎಂದು ಸಂದೇಶ ನೀಡಿದ್ದಾರೆ. 

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಕಾರಣದಿಂದ ಒರಾಕಲ್ ಹಲವು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಮೊದಲ ಹಂತದ ಬಳಿಕ ಶೀಘ್ರದಲ್ಲೇ 2ನೇ ಹಂತದ ಉದ್ಯೋಗ ಕಡಿತವನ್ನು ಒರಾಕಲ್ ಮಾಡಲಿದೆ.

Source link

Leave a Reply

Your email address will not be published. Required fields are marked *