Headlines

Ramayana: ಮುಂಬೈನ ‘ರಾಮಾಯಣ’ ಈವೆಂಟ್‌ಗೆ ‘ರಾಮ’ನೇ ಗೈರಾಗಿರೋ ಸೀಕ್ರೆಟ್ ಹೊರಬಿತ್ತು! | Ranbir Kapoor Absence From The Ramayana Event Mumbai To Launch The First Look Of Rama Raises Eyebrows

Ramayana: ಮುಂಬೈನ ‘ರಾಮಾಯಣ’ ಈವೆಂಟ್‌ಗೆ ‘ರಾಮ’ನೇ ಗೈರಾಗಿರೋ ಸೀಕ್ರೆಟ್ ಹೊರಬಿತ್ತು! | Ranbir Kapoor Absence From The Ramayana Event Mumbai To Launch The First Look Of Rama Raises Eyebrows



Ramayana: ಮುಂಬೈನ ‘ರಾಮಾಯಣ’ ಈವೆಂಟ್‌ಗೆ ‘ರಾಮ’ನೇ ಗೈರಾಗಿರೋ ಸೀಕ್ರೆಟ್ ಹೊರಬಿತ್ತು! | Ranbir Kapoor Absence From The Ramayana Event Mumbai To Launch The First Look Of Rama Raises Eyebrows

ಚಿತ್ರತಂಡದ ಯೋಜನೆಗಳ ಪ್ರಕಾರ, ‘ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ಜಾಗತಿಕವಾಗಿ ತೆರೆಗೆ ಬರಲಿದೆ. ಇನ್ನು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ರಣಬೀರ್ ಅವರ ಗೈರುಹಾಜರಿಯ ಸೀಕ್ರೆಟ್ ರಿವೀಲ್ ಆಗಿದೆ. ಇನ್ನೇನಿದೆ..?

‘ರಾಮಾಯಣ’ದ ರಾಮನ ಲುಕ್ ಬಿಡುಗಡೆ ವೇಳೆ ಅಭಿಮಾನಿಗಳಿಗೆ ಬಿಗ್ ಶಾಕ್!

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಅದ್ಧೂರಿ ಮತ್ತು ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ನಿರ್ದೇಶಕ ನಿತೇಶ್ ತಿವಾರಿ ಅವರ ‘ರಾಮಾಯಣ’. ಈ ಚಿತ್ರದ ಪ್ರತಿ ಅಪ್‌ಡೇಟ್‌ಗಾಗಿ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಹನುಮ ಜಯಂತಿಯ ಶುಭ ಸಂದರ್ಭದಲ್ಲಿ ರಣಬೀರ್ ಕಪೂರ್ (Ranbir Kapoor) ಅವರ ‘ರಾಮ’ನ ಲುಕ್ ಅನಾವರಣಗೊಳಿಸಲು ಮುಂಬೈನಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಇಡೀ ಕಾರ್ಯಕ್ರಮದಲ್ಲಿ ಸಾಕ್ಷಾತ್ ರಾಮನ ಪಾತ್ರಧಾರಿ ರಣಬೀರ್ ಅವರೇ ಕಾಣಿಸಿಕೊಳ್ಳದೆ ಇರುವುದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಆದರೆ, ಅದಕ್ಕೆ ಕಾರಣ, ಇಲ್ಲಿದೆ ನೋಡಿ..

ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದ ರಣಬೀರ್!

ಮುಂಬೈನಲ್ಲಿ ನಡೆದ ಈ ಹೈ ಪ್ರೊಫೈಲ್ ಈವೆಂಟ್‌ನಲ್ಲಿ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಉಪಸ್ಥಿತರಿದ್ದರು. ಪತ್ರಕರ್ತರು, ಕ್ಯಾಮೆರಾಗಳು ಮತ್ತು ಚಿತ್ರದ ಫಸ್ಟ್ ಲುಕ್ ನೋಡಲು ನಗರದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ರಣಬೀರ್ ಕಪೂರ್ ಅವರನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು.

ಆದರೆ, ಕಾರ್ಯಕ್ರಮ ಆರಂಭವಾದರೂ ರಣಬೀರ್ ಮಾತ್ರ ವೇದಿಕೆಯ ಮೇಲೆ ಬರಲೇ ಇಲ್ಲ. ಇದು ಅಲ್ಲಿ ನೆರೆದಿದ್ದ ಜನರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತು. ವಿಶೇಷವೆಂದರೆ, ಲಾಸ್ ಏಂಜಲೀಸ್‌ನಲ್ಲಿ (LA) ನಡೆದ ಚಿತ್ರದ ಮೊದಲ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ರಣಬೀರ್ ಭಾಗವಹಿಸಿದ್ದರು. ಅಲ್ಲದೆ, ಮುಂಬೈ ಈವೆಂಟ್‌ಗಿಂತ ಒಂದು ದಿನ ಮುಂಚಿತವಾಗಿ ನಡೆದ ಖಾಸಗಿ ಪ್ರದರ್ಶನದಲ್ಲಿ ಕೂಡ ಅವರು ಪತ್ರಕರ್ತರ ಜೊತೆ ಕಾಣಿಸಿಕೊಂಡಿದ್ದರು. ಹೀಗಿರುವಾಗ, ಸಾರ್ವಜನಿಕವಾಗಿ ಮತ್ತು ಅಧಿಕೃತವಾಗಿ ‘ರಾಮ’ನ ಲುಕ್ ರಿಲೀಸ್ ಮಾಡುವಾಗ ಅವರು ಏಕೆ ಗೈರಾದರು? ಇಲ್ಲಿದೆ ಇದಕ್ಕೆ ಉತ್ತರ..

ಐಮ್ಯಾಕ್ಸ್ ಅನುಭವ ನೀಡಲಿರುವ ಮಹಾಕಾವ್ಯ:

ಮುಂಬೈನಲ್ಲಿ ನಡೆದ ಈ ಸಮಾರಂಭದಲ್ಲಿ ಚಿತ್ರದ ಟೀಸರ್ ಅನ್ನು ಐಮ್ಯಾಕ್ಸ್ (IMAX) ಫಾರ್ಮ್ಯಾಟ್‌ನಲ್ಲಿ ತೋರಿಸಲಾಯಿತು. ಈ ಚಿತ್ರವನ್ನು ಐಮ್ಯಾಕ್ಸ್ ಪರದೆಯ ಮೇಲೆಯೇ ಅದ್ಭುತವಾಗಿ ನೋಡುವಂತೆ ನಿರ್ಮಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ರಣಬೀರ್ ಕಪೂರ್ ಸದ್ಯ ಲಾಸ್ ಎಂಜಲೀಸ್‌ನಲ್ಲಿ ಇದ್ದಾರೆ. ಅವರು ವಿಮಾನದಲ್ಲಿ ಪ್ರಯಾಣಿಸಿದರು ಕೂಡ ಅಷ್ಟು ಬೇಗ ಮುಂಬೈಗೆ ಬರಲು ಸಾಧ್ಯವಿಲ್ಲ. ಹೀಗಾಗಿ ರಣಬೀರ್ ಕಪೂರ್ ಈ ಈವೆಂಟ್‌ನಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಇದಕ್ಕೆ ಕಾರಣ ಇಷ್ಟೇ, ಬೇರೇನೂ ಇಲ್ಲ. ಇದರಲ್ಲಿ ಯಾವುದೇ ಸಂದೇಹಕ್ಕೆ ಅವಕಾಶ ಇಲ್ಲ. ಹೀಗಾಗಿ, ರಣಬೀರ್ ಕಪೂರ್ ಗೈರಾಗಿದ್ದರೂ, ಅವರ ‘ರಾಮ’ನ ಅವತಾರವನ್ನು ಕಂಡ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ. ರಣಬೀರ್ ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ದಿಗ್ಗಜರ ಸಂಗಮದ ‘ರಾಮಾಯಣ’:

ಈ ಚಿತ್ರ ಕೇವಲ ರಣಬೀರ್ ಅವರಿಂದ ಮಾತ್ರವಲ್ಲದೆ, ಒಂದು ದೊಡ್ಡ ತಾರಾಬಳಗದಿಂದಲೇ ಗಮನ ಸೆಳೆಯುತ್ತಿದೆ. ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್, ರಾವಣನಾಗಿ ನಮ್ಮ ಹೆಮ್ಮೆಯ ಕನ್ನಡಿಗ ‘ರಾಕಿಂಗ್ ಸ್ಟಾರ್’ ಯಶ್ ಈ ಚಿತ್ರದಲ್ಲಿದ್ದಾರೆ. ಇನ್ನು ಲಾರಾ ದತ್ತಾ ಮತ್ತು ರವಿ ದುಬೆ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಸಂಗೀತಕ್ಕಾಗಿ ವಿಶ್ವದ ಇಬ್ಬರು ಮಾಂತ್ರಿಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಕೈಜೋಡಿಸಿರುವುದು ಚಿತ್ರದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಿಲೀಸ್ ಡೇಟ್ ಫಿಕ್ಸ್!

ಚಿತ್ರತಂಡದ ಯೋಜನೆಗಳ ಪ್ರಕಾರ, ‘ರಾಮಾಯಣ’ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬಕ್ಕೆ ಜಾಗತಿಕವಾಗಿ ತೆರೆಗೆ ಬರಲಿದೆ. ಇನ್ನು ಎರಡನೇ ಭಾಗವು 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ. ರಣಬೀರ್ ಅವರ ಗೈರುಹಾಜರಿಯ ಸೀಕ್ರೆಟ್ ರಿವೀಲ್ ಆಗಿದೆ. ಇನ್ನೇನಿದೆ..? ಈ ರಾಮಾಯಣ ಸಿನಿಮಾವನ್ನು ದೀಪಾವಳಿ ಸಮಯದಲ್ಲಿ ಕಣ್ತುಂಬಿಕೊಳ್ಳಬಹುದು.



Source link

Leave a Reply

Your email address will not be published. Required fields are marked *