Headlines

Dhurandhar 2 ನೋಡಿ ರಜನಿಕಾಂತ್ ಫಿದಾ: ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಎಂದ ತಲೈವಾ | Rajinikanth Praises Dhurandhar 2 Calls It A Must Watch For Every Indian Gvd

Dhurandhar 2 ನೋಡಿ ರಜನಿಕಾಂತ್ ಫಿದಾ: ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಎಂದ ತಲೈವಾ | Rajinikanth Praises Dhurandhar 2 Calls It A Must Watch For Every Indian Gvd



Dhurandhar 2 ನೋಡಿ ರಜನಿಕಾಂತ್ ಫಿದಾ: ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ ಎಂದ ತಲೈವಾ | Rajinikanth Praises Dhurandhar 2 Calls It A Must Watch For Every Indian Gvd

ಸೂಪರ್‌ಸ್ಟಾರ್ ರಜನಿಕಾಂತ್ ಅವರು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ ಚಿತ್ರವನ್ನು ‘ಮಸ್ಟ್-ವಾಚ್’ ಎಂದು ಹೊಗಳಿದ್ದಾರೆ. ರಣವೀರ್ ಸಿಂಗ್ ನಟನೆಯ ಈ ಸಿನಿಮಾ, ವಿಶ್ವಾದ್ಯಂತ ಮೊದಲ ವಾರಾಂತ್ಯದಲ್ಲಿ ₹761 ಕೋಟಿ ಗಳಿಸಿ, ಭಾರತೀಯ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್ ಆಗಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ನಿರ್ದೇಶಕ ಆದಿತ್ಯ ಧರ್ ಅವರ ಹೊಸ ಸಿನಿಮಾ ‘ಧುರಂಧರ್: ದಿ ರಿವೆಂಜ್’ ಅನ್ನು ಹಾಡಿ ಹೊಗಳಿದ್ದಾರೆ. ಇದನ್ನು “ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ” ಎಂದು ಅವರು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ತಲೈವಾ, ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

“ಎಂತಹ ಅದ್ಭುತ ಸಿನಿಮಾ… #Dhurandhar2!!! ಆದಿತ್ಯ ಧರ್ ಬಾಕ್ಸ್ ಆಫೀಸ್-ಕಾ ಬಾಪ್!!! ರಣವೀರ್ ಮತ್ತು ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ. ಜೈ ಹಿಂದ್ @AdityaDharFilms @RanveerOfficial,” ಎಂದು ರಜನಿಕಾಂತ್ ಬರೆದುಕೊಂಡಿದ್ದಾರೆ. ಚಿತ್ರದ ದೇಶಭಕ್ತಿಯ ಕಥಾಹಂದರ ಮತ್ತು ಬಾಕ್ಸ್ ಆಫೀಸ್‌ನಲ್ಲಿನ ಭರ್ಜರಿ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಜನಿಕಾಂತ್ ಅವರ ಈ ಪ್ರಶಂಸೆ ಬಂದಿದೆ.

ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಸುರಿಮಳೆ

ಜಿಯೋ ಸ್ಟುಡಿಯೋಸ್ ನಿರ್ಮಾಣದ, ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ ಭಾರತ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೊಸ ದಾಖಲೆಗಳನ್ನು ಬರೆದಿದೆ. ಚಿತ್ರದ ಸ್ಕೇಲ್, ರೀಚ್ ಮತ್ತು ಪ್ರೇಕ್ಷಕರ ಪ್ರತಿಕ್ರಿಯೆ ಹೊಸ ಮಾನದಂಡಗಳನ್ನೇ ಸೃಷ್ಟಿಸಿದೆ. ಜಿಯೋ ಸ್ಟುಡಿಯೋಸ್ ಮೊದಲಿನಿಂದಲೂ ‘ಧುರಂಧರ್: ದಿ ರಿವೆಂಜ್’ ಚಿತ್ರವನ್ನು ಒಂದು ಐತಿಹಾಸಿಕ ಸಿನಿಮಾ ಎಂದು ಬಿಂಬಿಸಿತ್ತು. ಭಾರಿ ಪ್ರಮಾಣದ ಅಡ್ವಾನ್ಸ್ ಬುಕಿಂಗ್ ಮತ್ತು ಪ್ರೇಕ್ಷಕರ ಬೇಡಿಕೆಯಿಂದಾಗಿ, ಈ ಚಿತ್ರವು ತನ್ನ ಆರಂಭಿಕ ವಾರಾಂತ್ಯದ ಪ್ರತಿ ದಿನವೂ ಇದುವರೆಗಿನ ಅತಿ ಹೆಚ್ಚು ಕಲೆಕ್ಷನ್ ದಾಖಲಿಸಿದೆ.

ಭಾರತೀಯ ಚಿತ್ರರಂಗದಲ್ಲೇ ಐತಿಹಾಸಿಕ ಸಾಧನೆ ಮಾಡಿರುವ ‘ಧುರಂಧರ್: ದಿ ರಿವೆಂಜ್’, ವಿಶ್ವಾದ್ಯಂತ ಮೊದಲ ವಾರಾಂತ್ಯದಲ್ಲಿ ಬರೋಬ್ಬರಿ ₹761 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ, ಇದುವರೆಗಿನ ಅತಿದೊಡ್ಡ ಭಾರತೀಯ ಬ್ಲಾಕ್‌ಬಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ‘ಧುರಂಧರ್’ ಚಿತ್ರವು ಅತಿದೊಡ್ಡ ಗ್ಲೋಬಲ್ ಹಿಂದಿ ಬ್ಲಾಕ್‌ಬಸ್ಟರ್ ಆಗಿತ್ತು. ಈಗ ಅದರ ಸೀಕ್ವೆಲ್ ಈ ಫ್ರಾಂಚೈಸಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ಈ ಚಿತ್ರವು ಅತಿ ಹೆಚ್ಚು ಅಡ್ವಾನ್ಸ್ ಸೇಲ್ಸ್, ಅತಿ ಹೆಚ್ಚು ಪೇಯ್ಡ್ ಪ್ರಿವ್ಯೂಗಳು ಮತ್ತು ದೇಶೀಯವಾಗಿ ಅತಿ ವೇಗವಾಗಿ ₹300 ಕೋಟಿ ದಾಟಿದ ಸಿನಿಮಾ ಎಂಬ ಹಲವು ದಾಖಲೆಗಳನ್ನು ಮಾಡಿದೆ. ಅಲ್ಲದೆ, ಮೊದಲ ಶನಿವಾರ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, BookMyShow ನಲ್ಲಿ ಪ್ರತಿ ಗಂಟೆಗೆ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾದ ದಾಖಲೆಯನ್ನೂ ನಿರ್ಮಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಚಿತ್ರದ ಪ್ರದರ್ಶನ ಅಷ್ಟೇ ಪ್ರಬಲವಾಗಿದೆ. ಜಿಯೋ ಸ್ಟುಡಿಯೋಸ್ ಹಂಚಿಕೊಂಡಿರುವ ಡೇಟಾ ಪ್ರಕಾರ, ‘ಧುರಂಧರ್: ದಿ ರಿವೆಂಜ್’ ವಿದೇಶಗಳಲ್ಲಿ ಮೊದಲ ವಾರಾಂತ್ಯದಲ್ಲಿ ಸುಮಾರು ₹210 ಕೋಟಿ (USD 22.7 ಮಿಲಿಯನ್) ಗಳಿಸಿದೆ. ಇದು ಭಾರತೀಯ ಸಿನಿಮಾವೊಂದರ ಅತಿದೊಡ್ಡ ಓವರ್‌ಸೀಸ್ ಓಪನಿಂಗ್ ಆಗಿದೆ.

ಸಿನಿಮಾ ಗಣ್ಯರಿಂದ ‘ಧುರಂಧರ್ 2’ಗೆ ಮೆಚ್ಚುಗೆ

ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರ ಮಾರ್ಚ್ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ರಿಲೀಸ್ ಆದಾಗಿನಿಂದ ಎಸ್‌ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ಅನುಪಮ್ ಖೇರ್ ಸೇರಿದಂತೆ ಹಲವು ಗಣ್ಯರು ಚಿತ್ರವನ್ನು ಹೊಗಳಿದ್ದಾರೆ. ಕಂಗನಾ ರಣಾವತ್ ಅವರು ಆದಿತ್ಯ ಧರ್ ಅವರನ್ನು ‘ಸೂಪರ್‌ಸ್ಟಾರ್ ಫಿಲ್ಮ್‌ಮೇಕರ್’ ಎಂದು ಕರೆದಿದ್ದಾರೆ. ಹಾಲಿವುಡ್‌ನಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್, ಕ್ವೆಂಟಿನ್ ಟ್ಯಾರಂಟಿನೋ ಮತ್ತು ಕ್ರಿಸ್ಟೋಫರ್ ನೋಲನ್ ಅವರಂತಹ ನಿರ್ದೇಶಕರಿಗೆ ಸಿಗುವ ಮನ್ನಣೆ, ಆದಿತ್ಯ ಧರ್ ಅವರ ಯಶಸ್ಸಿನ ಮೂಲಕ ಭಾರತದ ಯುವ ನಿರ್ದೇಶಕರಿಗೂ ಸ್ಫೂರ್ತಿ ನೀಡಬಹುದು ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು, ಚಿತ್ರತಂಡ ‘ಹಿಟ್ಟಿಂಗ್ ಇಟ್ ಔಟ್ ಆಫ್ ದಿ ಪಾರ್ಕ್’ (ಅದ್ಭುತ ಸಾಧನೆ) ಮಾಡಿದೆ ಎಂದು ಶ್ಲಾಘಿಸಿದರೆ, ರಾಕೇಶ್ ರೋಶನ್ ಅವರು ಈ ಚಿತ್ರ ‘ಸಿನಿಮಾ ನಿರ್ಮಾಣದಲ್ಲಿ ಹೊಸ ಯುಗ’ವನ್ನು ಆರಂಭಿಸಿದೆ ಎಂದು ಹೇಳಿದ್ದಾರೆ. ಇನ್ನು ಆಲಿಯಾ ಭಟ್, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್ ಮತ್ತು ಅಲ್ಲು ಅರ್ಜುನ್ ಅವರಂತಹ ನಟರೂ ಸಹ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್, ಆರ್. ಮಾಧವನ್, ರಾಕೇಶ್ ಬೇಡಿ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ದೊಡ್ಡ ತಾರಾಗಣವಿದೆ.



Source link

Leave a Reply

Your email address will not be published. Required fields are marked *