ಆನ್‌ಲೈನ್ ಪೇಮೆಂಟ್‌ನಲ್ಲಿ ಬಿಗ್ ಚೇಂಜ್: ₹10,000 ಮೇಲ್ಪಟ್ಟ ಹಣ ವರ್ಗಾವಣೆ ಇನ್ನು 1 ಗಂಟೆ ಲೇಟ್‌! | Rbi New Rule Online Payment Delay 1 Hour Kill Switch Digital Fraud Check

ಆನ್‌ಲೈನ್ ಪೇಮೆಂಟ್‌ನಲ್ಲಿ ಬಿಗ್ ಚೇಂಜ್: ₹10,000 ಮೇಲ್ಪಟ್ಟ ಹಣ ವರ್ಗಾವಣೆ ಇನ್ನು 1 ಗಂಟೆ ಲೇಟ್‌! | Rbi New Rule Online Payment Delay 1 Hour Kill Switch Digital Fraud Check



ಆನ್‌ಲೈನ್ ಪೇಮೆಂಟ್‌ನಲ್ಲಿ ಬಿಗ್ ಚೇಂಜ್: ₹10,000 ಮೇಲ್ಪಟ್ಟ ಹಣ ವರ್ಗಾವಣೆ ಇನ್ನು 1 ಗಂಟೆ ಲೇಟ್‌! | Rbi New Rule Online Payment Delay 1 Hour Kill Switch Digital Fraud Check

ಡಿಜಿಟಲ್ ವಂಚನೆ ತಡೆಯಲು, ಆರ್‌ಬಿಐ ₹10,000 ಕ್ಕಿಂತ ಹೆಚ್ಚಿನ ಆನ್‌ಲೈನ್ ಹಣ ವರ್ಗಾವಣೆಗೆ ಒಂದು ಗಂಟೆಯ ವಿಳಂಬವನ್ನು ಪ್ರಸ್ತಾಪಿಸಿದೆ. ಈ ಹೊಸ ನಿಯಮವು ಗ್ರಾಹಕರಿಗೆ ತಪ್ಪಾದ ವಹಿವಾಟುಗಳನ್ನು ರದ್ದುಗೊಳಿಸಲು ಅವಕಾಶ ನೀಡಲಿದೆ.

ಮುಂಬೈ (ಏ.10): ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಹತ್ತು ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಿದರೆ ಅದು ತಕ್ಷಣವೇ ಪಾವತಿಯಾಗುವುದಿಲ್ಲ. ಬದಲಿಗೆ, ಒಂದು ಗಂಟೆಯ ಕಾಲಾವಕಾಶದ ನಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಡಿಜಿಟಲ್ ವಂಚನೆಗಳನ್ನು ತಡೆಗಟ್ಟಲು ಮತ್ತು ತಪ್ಪಾಗಿ ಹಣ ಕಳುಹಿಸಿದರೆ ಅದನ್ನು ರದ್ದುಗೊಳಿಸಲು ಗ್ರಾಹಕರಿಗೆ ಅವಕಾಶ ನೀಡಲು ಆರ್‌ಬಿಐ ಈ ಪ್ರಸ್ತಾಪವನ್ನು ಮುಂದಿಟ್ಟಿದೆ.

ಸೈಬರ್ ವಂಚಕರು ಸಾಮಾನ್ಯವಾಗಿ ಗ್ರಾಹಕರ ಮೇಲೆ ಮಾನಸಿಕ ಒತ್ತಡ ಹೇರಿ ತಕ್ಷಣವೇ ಹಣ ವರ್ಗಾಯಿಸುವಂತೆ ಮಾಡುತ್ತಾರೆ. ಈ 1 ಗಂಟೆಯ ವಿಳಂಬವು ಆ ಒತ್ತಡವನ್ನು ನಿವಾರಿಸುತ್ತದೆ ಮತ್ತು ಗ್ರಾಹಕರು ತಮ್ಮ ವ್ಯವಹಾರವನ್ನು ಮತ್ತೊಮ್ಮೆ ಪರಿಶೀಲಿಸಲು ಸಮಯ ನೀಡುತ್ತದೆ. ಪ್ರಸ್ತುತ ಡಿಜಿಟಲ್ ಪಾವತಿಗಳು ಕ್ಷಣಾರ್ಧದಲ್ಲಿ ನಡೆಯುವುದರಿಂದ, ತಪ್ಪುಗಳನ್ನು ಸರಿಪಡಿಸಲು ಬಳಕೆದಾರರಿಗೆ ಸಮಯವೇ ಸಿಗುತ್ತಿಲ್ಲ ಎಂಬುದು ಆರ್‌ಬಿಐ ಅಭಿಪ್ರಾಯ.

ಆರ್‌ಬಿಐ ಪ್ರಸ್ತಾವನೆಯಲ್ಲಿರುವ 3 ಪ್ರಮುಖ ಅಂಶಗಳು

ಹಿರಿಯ ನಾಗರಿಕರಿಗೆ ‘ವಿಶ್ವಾಸಾರ್ಹ ವ್ಯಕ್ತಿ’ ಸೌಲಭ್ಯ

70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸುರಕ್ಷತೆಗಾಗಿ ವಿಶೇಷ ನಿಯಮ ರೂಪಿಸಲಾಗಿದೆ. ₹50,000 ಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಮಾಡುವಾಗ ಮನೆಯವರು ಅಥವಾ ಯಾರಾದರೂ ಒಬ್ಬ “ವಿಶ್ವಾಸಾರ್ಹ ವ್ಯಕ್ತಿ”ಯ (Trusted Person) ಅನುಮೋದನೆ ಅಗತ್ಯವಿರುತ್ತದೆ. ಇದು ವಂಚನೆಯ ವಿರುದ್ಧ ಮತ್ತೊಂದು ಪದರದ ರಕ್ಷಣೆ ನೀಡುತ್ತದೆ.

‘ವೈಟ್‌ಲಿಸ್ಟ್’ ಮೂಲಕ ಸುಲಭ ಪಾವತಿ

ನೀವು ಪದೇ ಪದೇ ಹಣ ಕಳುಹಿಸುವ ಪರಿಚಿತರು ಅಥವಾ ವ್ಯಾಪಾರಿಗಳನ್ನು ‘ವೈಟ್‌ಲಿಸ್ಟ್’ಗೆ (Whitelist) ಸೇರಿಸಬಹುದು. ಇಂತಹ ವ್ಯಕ್ತಿಗಳಿಗೆ ಹಣ ಪಾವತಿಸುವಾಗ 1 ಗಂಟೆಯ ವಿಳಂಬ ಅನ್ವಯಿಸುವುದಿಲ್ಲ. ಇದರಿಂದ ನಿಯಮಿತ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಡಿಜಿಟಲ್ ಪಾವತಿ ಸ್ಥಗಿತಗೊಳಿಸಲು ‘ಕಿಲ್ ಸ್ವಿಚ್’

ಖಾತೆ ಹ್ಯಾಕ್ ಆಗಿದೆ ಅಥವಾ ವಂಚನೆ ನಡೆಯುತ್ತಿದೆ ಎಂದು ಸಂಶಯ ಬಂದರೆ, ಕೇವಲ ಒಂದು ಕ್ಲಿಕ್ ಮೂಲಕ ಎಲ್ಲಾ ಡಿಜಿಟಲ್ ಪಾವತಿ ಸೇವೆಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸುವ ‘ಕಿಲ್ ಸ್ವಿಚ್’ (Kill Switch) ವ್ಯವಸ್ಥೆಯನ್ನು ತರಲು ಆರ್‌ಬಿಐ ಸೂಚಿಸಿದೆ.

ಈ ಬದಲಾವಣೆಯ ಅಗತ್ಯವೇನಿತ್ತು?

ಕಳೆದ ವರ್ಷ ಭಾರತದಲ್ಲಿ ಡಿಜಿಟಲ್ ವಂಚನೆಗಳಿಂದಾದ ನಷ್ಟ ₹22,000 ಕೋಟಿ ದಾಟಿದೆ. ಆರ್‌ಬಿಐ ಅಂಕಿಅಂಶಗಳ ಪ್ರಕಾರ, ₹10,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರಗಳು ಒಟ್ಟು ವಂಚನೆ ಪ್ರಕರಣಗಳಲ್ಲಿ ಕೇವಲ 45% ಆಗಿದ್ದರೂ, ಹಣದ ಮೌಲ್ಯದ ದೃಷ್ಟಿಯಿಂದ 98.5% ರಷ್ಟು ಪಾಲನ್ನು ಹೊಂದಿವೆ! ಈ ಕಾರಣಕ್ಕಾಗಿಯೇ ₹10,000 ಮಿತಿಯನ್ನು ನಿಗದಿಪಡಿಸಲಾಗಿದೆ.

ನಿಯಮ ಜಾರಿ ಯಾವಾಗ?

ಸದ್ಯ ಆರ್‌ಬಿಐ ಈ ಬಗ್ಗೆ ಬ್ಯಾಂಕುಗಳು ಮತ್ತು ಎನ್‌ಪಿಸಿಐ (NPCI) ಜೊತೆ ತಾಂತ್ರಿಕ ಚರ್ಚೆ ನಡೆಸುತ್ತಿದೆ. ಪಾವತಿಯ ‘ವೇಗ’ ಮತ್ತು ‘ಸುರಕ್ಷತೆ’ಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸದ್ಯದ ಸವಾಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ವಿವರವಾದ ಮಾರ್ಗಸೂಚಿಗಳು ಹೊರಬೀಳಲಿದ್ದು, ಹಂತ ಹಂತವಾಗಿ ಈ ನಿಯಮ ಜಾರಿಗೆ ಬರಲಿದೆ.

ಡಿಜಿಟಲ್ ಪಾವತಿಯ ಮೂಲ ಉದ್ದೇಶವೇ ‘ತಕ್ಷಣದ ಪಾವತಿ’. ಆದರೆ ಸುರಕ್ಷತೆಯ ದೃಷ್ಟಿಯಿಂದ ಈ ವಿಳಂಬ ಅನಿವಾರ್ಯವಾಗಿದೆ. ಈ ಪ್ರಸ್ತಾಪದ ಕುರಿತು ಸಾರ್ವಜನಿಕರು ಮತ್ತು ಪಾಲುದಾರರು ಮೇ 8ರೊಳಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಆರ್‌ಬಿಐ ಕೋರಿದೆ.



Source link

Leave a Reply

Your email address will not be published. Required fields are marked *