India vs Pakistan T20 World Cup Match Boycott ಭಾರತ-ಪಾಕ್ ಪಂದ್ಯ: ಒಂದು ನಿರ್ಧಾರ, ಸಾವಿರಾರು ಕೋಟಿ ಪ್ರಶ್ನೆ! | India Vs Pakistan T20 World Cup Match Boycott Could Lead To 2200 Crore Loss Kvn

India vs Pakistan T20 World Cup Match Boycott ಭಾರತ-ಪಾಕ್ ಪಂದ್ಯ: ಒಂದು ನಿರ್ಧಾರ, ಸಾವಿರಾರು ಕೋಟಿ ಪ್ರಶ್ನೆ! | India Vs Pakistan T20 World Cup Match Boycott Could Lead To 2200 Crore Loss Kvn



India vs Pakistan T20 World Cup Match Boycott ಭಾರತ-ಪಾಕ್ ಪಂದ್ಯ: ಒಂದು ನಿರ್ಧಾರ, ಸಾವಿರಾರು ಕೋಟಿ ಪ್ರಶ್ನೆ! | India Vs Pakistan T20 World Cup Match Boycott Could Lead To 2200 Crore Loss Kvn

ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರದಿಂದ ಕ್ರಿಕೆಟ್ ಜಗತ್ತಿಗೆ ಭಾರೀ ಆರ್ಥಿಕ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಒಂದು ಪಂದ್ಯ ರದ್ದಾದರೆ, ಐಸಿಸಿ, ಪ್ರಸಾರಕರು, ಪ್ರಾಯೋಜಕರು ಸೇರಿದಂತೆ ಹಲವು ಕ್ರಿಕೆಟ್ ಮಂಡಳಿಗಳಿಗೆ ಸುಮಾರು ₹2200 ಕೋಟಿ ನಷ್ಟವಾಗಲಿದೆ.

ನವದೆಹಲಿ: ಫೆ.15ರಂದು ಭಾರತ ವಿರುದ್ಧ ಶ್ರೀಲಂಕಾದ ಕೊಲಂಬೊದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್‌ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಘೋಷಿಸಿದ ಬೆನ್ನಲ್ಲೇ, ಇದರಿಂದಾಗುವ ಪರಿಣಾಮ ಹಾಗೂ ಆರ್ಥಿಕ ನಷ್ಟವನ್ನು ಅಂದಾಜಿಸಲಾಗುತ್ತಿದೆ. ವರದಿಗಳ ಪ್ರಕಾರ, ಭಾರತ-ಪಾಕ್‌ ಪಂದ್ಯ ನಡೆಯದಿದ್ದರೆ ಬರೋಬ್ಬರಿ ₹2200 ಕೋಟಿ ನಷ್ಟವಾಗಲಿದೆ ಎಂದು ತಿಳಿದುಬಂದಿದೆ.

ಈ ನಷ್ಟ ಐಸಿಸಿಗೆ ಮಾತ್ರವಲ್ಲದೆ ಪಾಕ್‌ ಕ್ರಿಕೆಟ್‌, ಬಿಸಿಸಿಐ, ಶ್ರೀಲಂಕಾ, ಟೂರ್ನಿಯ ಪ್ರಾಯೋಜಕರು, ಜಾಹೀರಾತುದಾರರಿಗೂ ಅನ್ವಯಿಸಲಿದೆ.

ಭಾರತ-ಪಾಕಿಸ್ತಾನ ಪ್ರತಿ 10 ಸೆಕೆಂಡ್ ಜಾಹೀರಾತಿಗೆ 25-40 ಲಕ್ಷ ಶುಲ್ಕ

ಕ್ರಿಕೆಟ್‌ನಲ್ಲಿ ಪಂದ್ಯದ ಪ್ರಸಾರ ಹಕ್ಕು, ಜಾಹೀರಾತು, ಪ್ರಾಯೋಜಕತ್ವ, ಟಿಕೆಟ್ ಆದಾಯ ಮತ್ತು ಕಾನೂನುಬದ್ಧ ಬೆಟ್ಟಿಂಗ್(ಭಾರತದ ಹೊರಗಡೆ) ಸೇರಿ ಹಲವು ವಿಧದಲ್ಲಿ ಆದಾಯ ಸಿಗಲಿದೆ. ಒಂದು ವೇಳೆ ಭಾರತ-ಪಾಕ್‌ ಪಂದ್ಯ ರದ್ದಾದರೆ, ಬರೀ ಜಾಹೀರಾತು ಆದಾಯದಲ್ಲೇ 200ರಿಂದ 250 ಕೋಟಿ ರು. ನಷ್ಟ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಈ ಪಂದ್ಯದ ವೇಳೆ ಪ್ರಸಾರವಾಗುವ ಪ್ರತಿ 10 ಸೆಕೆಂಡ್‌ಗಳ ಜಾಹೀರಾತಿಗೆ ಬ್ರಾಡ್‌ಕಾಸ್ಟರ್‌ಗಳು 25ರಿಂದ 40 ಲಕ್ಷ ರು. ಶುಲ್ಕ ವಿಧಿಸುತ್ತಾರೆ. ಅಲ್ಲದೆ, ಭಾರತ-ಪಾಕ್‌ ದೇಶಗಳ ಕ್ರಿಕೆಟ್‌ ಮಂಡಳಿಗಳು ನೇರ ಮತ್ತು ಪರೋಕ್ಷ ಆದಾಯದಲ್ಲಿ ತಲಾ ₹200 ಕೋಟಿ ಹಣವನ್ನು ತಕ್ಷಣವೇ ಕಳೆದುಕೊಳ್ಳಲಿದೆ.

ಪಂದ್ಯ ರದ್ದಾದರೆ ಪ್ರಾಯೋಜಕರು, ಪ್ರಸಾರಕರಿಗೆ ಐಸಿಸಿ ನಷ್ಟ ಪರಿಹಾರ ನೀಡಬೇಕಾಗುತ್ತದೆ. ಟಿಕೆಟ್‌ ಮಾರಾಟದ ಮೂಲಕ ಬರಬೇಕಿದ್ದ ಹಣ ಕೈತಪ್ಪಲಿದೆ. ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಲಂಕಾ ಕ್ರಿಕೆಟ್‌ ಮಂಡಳಿ ಐಸಿಸಿ ಬಳಿ ಪರಿಹಾರ ಕೇಳಬಹುದು. ಮತ್ತೊಂದೆಡೆ ಐಸಿಸಿ ಸದಸ್ಯ ದೇಶಗಳಿಗೂ ಇದರ ಪರಿಣಾಮ ತಟ್ಟಲಿದೆ. ವಾರ್ಷಿಕ ಆದಾಯದಲ್ಲಿ ಕಡಿತಗೊಳ್ಳಲಿದ್ದು, ಈ ಆದಾಯವನ್ನೇ ನಂಬಿಕೊಂಡಿರುವ ವಿಂಡೀಸ್‌, ಸ್ಕಾಟ್ಲೆಂಡ್‌, ಜಿಂಬಾಬ್ವೆ, ನಮೀಬಿಯಾ, ಆಫ್ಘನ್‌ ಸೇರಿದಂತೆ ಹಲವು ಮಂಡಳಿಗಳೂ ನಷ್ಟ ಅನುಭವಿಸಲಿದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವೇಳಾಪಟ್ಟಿ ಹೀಗಿದೆ:

ಫೆಬ್ರವರಿ 07: ಪಾಕಿಸ್ತಾನ-ನೆದರ್‌ಲೆಂಡ್ಸ್‌

ಫೆಬ್ರವರಿ 10: ಪಾಕಿಸ್ತಾನ – ಯುಎಸ್‌ಎ

ಫೆಬ್ರವರಿ 15: ಪಾಕಿಸ್ತಾನ- ಭಾರತ

ಫೆಬ್ರವರಿ 18: ಪಾಕಿಸ್ತಾನ- ನಮೀಬಿಯಾ

ಟಿ20 ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಹೀಗಿದೆ:

ಸಲ್ಮಾನ್ ಅಲಿ ಆಘಾ (ನಾಯಕ), ಬಾಬರ್ ಅಜಂ, ಶಾಹೀನ್ ಶಾ ಆಫ್ರಿದಿ, ಫಖರ್ ಜಮಾನ್, ಶಾದಾಬ್ ಖಾನ್, ನಸೀಮ್ ಶಾ, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಖವಾಜಾ ಮೊಹಮ್ಮದ್ ನಫಯ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಖ್.



Source link

Leave a Reply

Your email address will not be published. Required fields are marked *