Headlines

ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ: ಹಸೆಮಣೆ ಏರಬೇಕಾದ ಯುವಕ ಮಸಣಕ್ಕೆ | Groom Died In Accident Who Went To Distribute Marriage Invitation

ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ: ಹಸೆಮಣೆ ಏರಬೇಕಾದ ಯುವಕ ಮಸಣಕ್ಕೆ | Groom Died In Accident Who Went To Distribute Marriage Invitation



ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ: ಹಸೆಮಣೆ ಏರಬೇಕಾದ ಯುವಕ ಮಸಣಕ್ಕೆ | Groom Died In Accident Who Went To Distribute Marriage Invitation

Groom died in Accident:ಮದ್ವೆ ಆಹ್ವಾನ ಪತ್ರಿಕೆ ನೀಡುವುದಕ್ಕೆಂದು ಹೋದ ಯುವಕ ಮಸಣ ಸೇರಿದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ. 28 ವರ್ಷದ ಅಕ್ಷತ್ ಮೃತಪಟ್ಟ ಯುವಕ.

ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ

ಬೆಂಗಳೂರು: ಮದ್ವೆ ಆಹ್ವಾನ ಪತ್ರಿಕೆ ನೀಡುವುದಕ್ಕೆಂದು ಹೋದ ಯುವಕ ಮಸಣ ಸೇರಿದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ. 28 ವರ್ಷದ ಅಕ್ಷತ್ ಮೃತಪಟ್ಟ ಯುವಕ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆದಿತ್ತು. ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಅಕ್ಷತ್ ಅವರು ಇಲ್ಲಿಗೆ ಬಂದಿದ್ದು, ಬ್ರಹ್ಮರಥೋತ್ಸವದ ಪಲ್ಲಕ್ಕಿಗಳನ್ನು ನೋಡುತ್ತಾ ನಿಂತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ದುರಂತ

ಅಕ್ಷತ್ ಅವರ ಮದುವೆ ನಿಗದಿಯಾಗಿದ್ದು, ಮದುವೆ ಕಾಗದ ಹಂಚುವುದರಲ್ಲಿ ಅವರು ಬ್ಯುಸಿಯಾಗಿದ್ದರು. ಇದರ ನಡುವೆ ಕೋದಂಡರಾಮ ಬ್ರಹ್ಮರಥೋತ್ಸವಕ್ಕೆ ಬಂದಿದ್ದ ಅವರು ಅಲ್ಲಿ ಜಾತ್ರೆ ನೋಡಲು ನಿಂತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ಇಷ್ಟೊಂದು ದೊಡ್ಡ ದುರ್ಘಟನೆ ನಡೆದ್ರೂ ಸ್ಥಳಕ್ಕೆ ದೇವಾಲಯದ ಟ್ರಸ್ಟಿಗಳು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಟ್ರಾಫಿಕ್ ಚಲನ್ ಮೂಲಕ ಸಿಕ್ಕಿಬಿದ್ದ ಕಳ್ಳ: ಬೈಕ್ ಕಳವಾದ 3 ತಿಂಗಳ ಬಳಿಕ ಮನೆಗೆ ಬಂತು ಕಳ್ಳನ ಫೋಟೋ!

ಮುಂಜಾನೆ ಪಲ್ಲಕ್ಕಿಗಳನ್ನ ತೆರೆವುಗೊಳಿಸಲು ಪೊಲೀಸರ ಒತ್ತಡ ಹೆಚ್ಚಾದ ಚಾಲಕನಲ್ಲದವನು ಟ್ರ್ಯಾಕ್ಟರ್ ತೆಗೆಯಲು ಹೋದಾಗ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಗೋಪಾಲ್ ಬ್ಯಾಕೋಡ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಸೆಮಣೆ ಏರಬೇಕಾದ ಯುವಕನೇ ಈಗ ಅಪಘಾತದಿಂದಾಗಿ ಸಾವನ್ನಪ್ಪಿರುವುದರಿಂದ ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.

ಇದನ್ನೂ ಓದಿ: ಬೇಸಿಗೆ ಸೆಖೆಗೆ ಮನೆ ಹೊರಗೆ ಮಲಗಿದ್ದವರ ಮೇಲೆ ‘ಸೈಕೋ’ ದಾಳಿ: ಆರು ಜನರ ತಲೆ ಒಡೆದ ಮಾನಸಿಕ ಅಸ್ವಸ್ಥ!



Source link

Leave a Reply

Your email address will not be published. Required fields are marked *