
ಸಿಜೆ ರಾಯ್ ರೀತಿಯಲ್ಲಿ ಮತ್ತೊಬ್ಬ ಉದ್ಯಮಿ ಗುಂಡಿಕ್ಕಿ ಸಾವು, ಮಗಳ ಮದುವೆ 2 ದಿನ ಮೊದಲು ದುರಂತ, ಸುಂದರ ಸಂಸಾರದ ನಡುವೆ ಅಕ್ರಮವಾಗಿ ಶುರುವಾದ ಪ್ರೀತಿ ಕೊನೆಗೆ ಜೀವವನ್ನೇ ಬಲಿ ತೆಗೆದುಕೊಂಡಿದೆ. ಆಸ್ತಿ, ಹಣ ಎಲ್ಲಾ ನೀಡಿದರೂ ಸಾಲಲಿಲ್ಲ.
ಸೂರತ್ (ಫೆ.24) ಪತ್ನಿ ಹಾಗೂ ಮಗಳ ಸುಂದರ ಸಂಸಾರ. ಇದರ ನಡುವೆ ಉದ್ಯಮಿಗೆ ಬೇರೊಬ್ಬಳ ಜೊತೆ ಪ್ರೀತಿ ಶುರುವಾಗಿದೆ. ರಿಯಲ್ ಎಸ್ಟೇಟ್ ಉದ್ಯಮ, ಶಾಲೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಉದ್ಯಮಿ ಲವರ್ ಕಿರುಕುಳಕ್ಕೆ ಬೇಸತ್ತು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಮಗಳ ಮದುವೆಗೆ ಏರಡೇ ದಿನ ಬಾಕಿ ಇರುವಾಗ ತನ್ನ ರಿವಾಲ್ವರ್ ಮೂಲಕ ಗಂಡು ಹಾರಿಸಿ ದುರಂತ ಅಂತ್ಯ ಕಂಡಿರುವ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.
ತುಷಾರ್ ಗೆಲಾನಿ ಸೂರತ್ನ ಶ್ರೀಮಂತ ಉದ್ಯಮಿ. ಇದೀಗ ದುರಂತ ಅಂತ್ಯಕಂಡಿದ್ದಾರೆ. ಮಗಳ ಮದುವೆಗೆ 2 ದಿನ ಮೊದಲು ಗುಂಡಿಕ್ಕಿ ಸ್ವಯಂ ಬದುಕು ಅಂತ್ಯಗೊಳಿಸಿದ್ದಾರೆ. ಇತ್ತ ಮಗಳ ಮದುವೆಯೂ ಸ್ಥಗಿತಗೊಂಡಿದೆ. ಶ್ರೀಮಂತ ಕುಟುಂಬದಲ್ಲಿ ಕೋಲಾಹಲ ಸೃಷ್ಟಿಯಾಗಿರುವುದು ಮಾತ್ರವಲ್ಲ, ಇರುವ ಆಸ್ತಿಗಳೆಲ್ಲವೂ ತಂದೆಯ ಲವರ್ ಪಾಲಾಗಿದೆ. ತಂದೆ ಸಾವಿನ ಬೆನ್ನಲ್ಲೇ ಮಗಳು ಉಮ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನಲ್ಲಿ ತಂದೆ ತುಷಾರ್ ಗೆಲಾನಿ, ಪೂನಂ ಬದೊರಿಯಾ ಅನ್ನೋ ಮಹಿಳೆ ಜೊತೆ ರಿಲೇಶನ್ಶಿಪ್ನಲ್ಲಿದ್ದರು. ಈಕೆಯ ಕಿರುಕುಳಕ್ಕೆ ತಂದೆ ಈ ನಿರ್ಧಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನಲ್ಲಿ ಪುತ್ರಿ ಕೆಲ ಸ್ಫೋಟಕ ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದಾಳೆ.
ಮೋಸದ ಪ್ರೀತಿ
ತಂದೆಯ ಶ್ರೀಮಂತಿಕೆ, ಆಸ್ತಿ, ಅಂತಸ್ತು ನೋಡಿ ಪೂನಂ ಬದೋರಿಯಾ ಪ್ರೀತಿಯ ನಾಟಕವಾಗಿ ಬಲೆಯಲ್ಲಿ ಬೀಳಿಸಿದ್ದಾಳೆ. ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಇದು ಮೂಡಿದ ಪ್ರೀತಿಯಲ್ಲಿ ಆಸ್ತಿ ಕಬಳಿಸಲು ಆಡಿದ ನಾಟಕ ಎಂದಿದ್ದಾರೆ. ತಂದೆ ನಡೆಸುತ್ತಿದ್ದ ಬ್ಲೂ ಪಾಪಿಲಿಯನ್ ಪ್ರೈಮರಿ ಶಾಲೆಯ ಶೇಕಡಾ 50ರಷ್ಟು ಪಾಲು ತನ್ನ ಹೆಸರಿಗೆ ಬರೆಸಿಕೊಂಡಿದ್ದಾಳೆ. ಮ್ಯಾನೇಜಿಂಗ್ ಡೈರೆಕ್ಟ್ ಹುದ್ದೆಯನ್ನು ನೀಡಲಾಗಿದೆ. 2018ರಿಂದ 2024ರ ಅವಧಿಯಲ್ಲಿ 1.37 ಕೋಟಿ ರೂಪಾಯಿ ವೇತನ ಪಡೆದಿದ್ದಾಳೆ. 1.06 ಕೋಟಿ ರೂಪಾಯಿ ಮೊಲ್ಯದ ಎರಡು ಅಂಗಡಿಗಳನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ. ನಮ್ಮ ಕುಟುಂಬಕ್ಕೆ ಅವಮಾನ ಮಾಡುತ್ತೇವೆ. ಮಗಳ ಬದುಕಿಗೆ ಅಡ್ಡಿ ಮಾಡುತ್ತೇನೆ ಎಂದು ಬೆದರಿಸಿ ಆಸ್ತಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ.
ನನ್ನ ಮದುವೆಗೆ ಆಗಮಿಸಿ ರಂಪಾಟ ಮಾಡುವುದಾಗಿ ಬೆದರಿಸಿದ್ದಳು. ಇದರಿಂದ ತಂದೆ ತೀವ್ರವಾಗಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದರು. ಮಗಳ ಮದುವೆ ರದ್ದು ಮಾಡುವುದಾಗಿ ಬೆದರಿಸಿದ್ದರು. ಇದರಿಂದ ಒತ್ತಡಕ್ಕೆ ಸಿಲುಕಿದ ತಂದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪುತ್ರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಪೂರಕವಾಗಿ ಪಾಲು, ಹಣ ವರ್ಗಾವಣೆ ದಾಖಲೆಗಳನ್ನು ನೀಡಿದ್ದಾರೆ. ದೂರು ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೂನಂ ಬದೋರಿಯಾಳನ್ನು ಅರೆಸ್ಟ್ ಮಾಡಿ ವಿಚಾರಣೆ ಆರಂಭಿಸಿದ್ದಾರೆ.