Headlines

ಸೌಜನ್ಯ ಪ್ರಕರಣ: ವಿಠಲ ಗೌಡ ವಿರುದ್ದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ದೂರು! | Dharmasthala Soujanya Case Complaint Filed Against Snehamayi Krishna

ಸೌಜನ್ಯ ಪ್ರಕರಣ: ವಿಠಲ ಗೌಡ ವಿರುದ್ದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ದೂರು! | Dharmasthala Soujanya Case Complaint Filed Against Snehamayi Krishna



ಸೌಜನ್ಯ ಪ್ರಕರಣ: ವಿಠಲ ಗೌಡ ವಿರುದ್ದ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ದೂರು! | Dharmasthala Soujanya Case Complaint Filed Against Snehamayi Krishna

ಸೌಜನ್ಯ ಕೊಲೆ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಅವರು ಸೌಜನ್ಯನ ಮಾವ ವಿಠಲ ಗೌಡರ ವಿರುದ್ಧ ಮಾಡಿದ ಆರೋಪದ ಹಿನ್ನೆಲೆಯಲ್ಲಿ, ವೆಂಕಪ್ಪ ಕೋಟ್ಯಾನ್ ಎಂಬವರು ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಂಗಳೂರು (ಸೆ.14): ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೆಂಕಪ್ಪ ಕೋಟ್ಯಾನ್ ಎಂಬವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ದೂರು ನೀಡಿದ್ದಾರೆ.

ಸ್ನೇಹಮಯಿ ಕೃಷ್ಣ ವಿರುದ್ಧ ದೂರು ನೀಡಿದ್ದು ಯಾಕೆ?

2012ರಲ್ಲಿ ನಡೆದ ಸೌಜನ್ಯ ಕೊಲೆಯ ಹಳೆಯ ಘಟನೆ ಸ್ನೇಹಮಯಿ ಕೃಷ್ಣ ಅವರು ಸೌಜನ್ಯನ ಮಾವ ವಿಠಲ ಗೌಡ ಅವರನ್ನು ಕೊಲೆಗಾರ ಎಂದು ಆರೋಪಿಸಿ ನೀಡಿದ ಹೇಳಿಕೆಯು ದುರುದ್ದೇಶಪೂರಿತವಾಗಿದೆ ಎಂದು ಆರೋಪಿಸಲಾಗಿದೆ. ವೆಂಕಪ್ಪ ಕೋಟ್ಯಾನ್ ಅವರು ತಮ್ಮ ದೂರಿನಲ್ಲಿ, ‘ಸೌಜನ್ಯಳಿಗೆ ನ್ಯಾಯ ಒದಗಿಸುವ ಹೋರಾಟದ ದಾರಿಯನ್ನು ತಪ್ಪಿಸುವ ಉದ್ದೇಶವನ್ನು ಸ್ನೇಹಮಯಿ ಕೃಷ್ಣ ಹೊಂದಿದ್ದಾರೆ. ಮೈಸೂರಿನಿಂದ ಕರೆಯಿಸಿ ಈ ರೀತಿಯ ಸ್ಫೋಟಕ ಹೇಳಿಕೆ ನೀಡಿರುವ ಹಿಂದೆ ಯಾರು ಇದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಸ್ನೇಹಮಯಿ ಕೃಷ್ಣ ಅವರನ್ನು ತಕ್ಷಣ ವಿಚಾರಣೆಗೆ ತೆಗೆದುಕೊಳ್ಳುವಂತೆಯೂ ದೂರು ಪತ್ರದಲ್ಲಿ ಕೋರಲಾಗಿದೆ.

ಸ್ನೇಹಮಯಿ ಕೃಷ್ಣ ಆರೋಪವೇನು?

2012ರಲ್ಲಿ ಧರ್ಮಸ್ಥಳದಲ್ಲಿ ಪಿಯು ವಿದ್ಯಾರ್ಥಿನಿ ಸೌಜನ್ಯನ ಮೇಲೆ ಅತ್ಯಾ೧ಚಾರ ನಡೆಸಿ ಕೊಲೆ ಮಾಡಲಾಯಿತು ಎಂದು ಆರೋಪವಿದ್ದ ಈ ಪ್ರಕರಣವು ಇಂದಿಗೂ ಕೋರ್ಟ್‌ಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಚರ್ಚೆಯಲ್ಲಿದೆ. ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇತ್ತೀಚೆಗೆ (ಸೆಪ್ಟೆಂಬರ್ 8, 2025) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮಹಾನಿರೀಕ್ಷಕ (ಎಸ್‌ಪಿ) ಅವರಿಗೆ ದೂರು ಸಲ್ಲಿಸಿ, ಸೌಜನ್ಯನ ಮಾವ ವಿಠಲ ಗೌಡ ಅವರೇ ಈ ಕೊಲೆಯನ್ನು ಮಾಡಿರಬಹುದು. ಅವರ ಮೇಲೆ ನಾರ್ಕೊ ಟೆಸ್ಟ್ ನಡೆಸಿ ಮರು ತನಿಖೆ ಮಾಡಬೇಕು ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಅವರ ಆರೋಪಗಳ ವಿರುದ್ಧ ವೆಂಕಪ್ಪ ಕೋಟ್ಯಾನ್ ಅವರ ದೂರು ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.



Source link

Leave a Reply

Your email address will not be published. Required fields are marked *