Headlines

ನಾನು ಬಿಜೆಪಿ ಸೇರುತ್ತೇನೆಂದು ಹೇಳುವವರೇ ಜೆಡಿಎಸ್‌ ಸೇರಲಿದ್ದಾರೆ: ಶಾಸಕ ಲಕ್ಷ್ಮಣ ಸವದಿ | Laxman Savadi Denies Bjp Joining Rumours Athani Statement Gvd

ನಾನು ಬಿಜೆಪಿ ಸೇರುತ್ತೇನೆಂದು ಹೇಳುವವರೇ ಜೆಡಿಎಸ್‌ ಸೇರಲಿದ್ದಾರೆ: ಶಾಸಕ ಲಕ್ಷ್ಮಣ ಸವದಿ | Laxman Savadi Denies Bjp Joining Rumours Athani Statement Gvd



ನಾನು ಬಿಜೆಪಿ ಸೇರುತ್ತೇನೆಂದು ಹೇಳುವವರೇ ಜೆಡಿಎಸ್‌ ಸೇರಲಿದ್ದಾರೆ: ಶಾಸಕ ಲಕ್ಷ್ಮಣ ಸವದಿ | Laxman Savadi Denies Bjp Joining Rumours Athani Statement Gvd

ನಾನು ಬಿಜೆಪಿಗೆ ಬರುತ್ತೇನೆ ಎಂದು ಯಾರು ಹೇಳುವವರೇ ಬಿಜೆಪಿಯಲ್ಲಿ ಬಹಳ ದಿನ ಇರಲ್ಲ. ಮುಂದೆ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿ (ಏ.13): ನನ್ನ ಕ್ಷೇತ್ರದಲ್ಲಿ ನಾಳೆ ಅನೇಕ ಕೆಲಸ ಕಾರ್ಯಗಳಿವೆ. ಪೂರ್ವ ನಿಗದಿತ ಕಾರ್ಯಕ್ರಮಗಲ್ಲಿ ಭಾಗಿಯಾಗಬೇಕಿದೆ. ಹೀಗಾಗಿ, ನಾನು ದೆಹಲಿಗೆ ಹೊರಟಿಲ್ಲ. ಸಚಿವ ಸ್ಥಾನದ ಬಗ್ಗೆ ವರಿಷ್ಠರು ಎಲ್ಲ ತೀರ್ಮಾಣ ಕೈಗೊಳ್ಳಲಿದ್ದಾರೆ. ನಾನು ಬಿಜೆಪಿಗೆ ಬರುತ್ತೇನೆ ಎಂದು ಯಾರು ಹೇಳುವವರೇ ಬಿಜೆಪಿಯಲ್ಲಿ ಬಹಳ ದಿನ ಇರಲ್ಲ. ಮುಂದೆ ಜೆಡಿಎಸ್ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿಯ ಸರ್ಕಿಟ್‌ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ದುರದುದ್ದೇಶದಿಂದ ಕೆಲವು ಜನ ಕೆಲಸ ಇಲ್ಲದ್ದಕ್ಕೇ ಏನೇನೋ ಚರ್ಚೆ ಮಾಡುತ್ತಿದ್ದಾರೆ. ಅಂತಹುದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಮಾತನಾಡುವವರೇ ಬೇರೆ ಪಕ್ಷಕ್ಕೆ ಹೋಗುವ ಚಿಂತನೆಯಲ್ಲಿದ್ದಾರೆ.

ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ

ನಾನು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಹೀಗಿರುವಾಗ ನನ್ನ ಬಗ್ಗೆ ಅನುಮಾನಗಳೇಕೆ?. ಕೆಲವರು ಕೆಲಸ ಇಲ್ಲದ್ದಕ್ಕೆ ತಲೆ ಬುಡ ಇಲ್ಲದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನನಗೆ ಮೈತುಂಬು, ಕೈತುಂಬ ಕೆಲಸವಿದೆ. ಹೀಗಾಗಿ ಬೇರೆಯವರು ಆಡುವ ಮಾತುಗಳಿಗೆ, ಆರೋಪಗಳಿಗೆ ನಾನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.

ಈಚೆಗೆ ಅಥಣಿಯಲ್ಲಿ ಹೇಳಿಕೆ ನೀಡಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷ ಸೇರಿರುವ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ವದಂತಿ ಹಬ್ಬಿಸುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುವ ಕೆಲಸ ನಡೆದಿದೆ. ಸವದಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರುವುದಿಲ್ಲ. ಸೇರಿಸಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.



Source link

Leave a Reply

Your email address will not be published. Required fields are marked *