![]()
ಭಾರತದೊಂದಿಗಿನ ವ್ಯಾಪಾರ ಒಪ್ಪಂದವು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿರಲಿದೆ ಎಂದು ಅಮೆರಿಕದ ವಿದೇಶಾಂಗ ಉಪ ಸಚಿವ ಕ್ರಿಸ್ಟೋಫರ್ ಲ್ಯಾಂಡೌ ಸ್ಪಷ್ಟಪಡಿಸಿದ್ದಾರೆ. ಭಾರತವು ಚೀನಾದಂತೆ ತಮ್ಮ ಪ್ರತಿಸ್ಪರ್ಧಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಒಪ್ಪಂದವು ಅಂತಿಮ ಹಂತಕ್ಕೆ ತಲುಪಿರುವ ಹೊತ್ತಿನಲ್ಲಿ, ‘ವ್ಯಾಪಾರಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಹಿಂದೆ ಚೀನಾ ವಿಷಯದಲ್ಲಿ ಮಾಡಿದ ತಪ್ಪನ್ನು ನಾವೀಗ ಭಾರತದ ವಿಷಯದಲ್ಲಿ ಮಾಡುವುದಿಲ್ಲ’ ಎಂದು ಅಮೆರಿಕದ ವಿದೇಶಾಂಗ ಉಪ ಸಚಿವ ಕ್ರಿಸ್ಟೋಫರ್ ಲ್ಯಾಂಡೌ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ, ಭಾರತದ ಲಾಭಕ್ಕಿಂತ ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿಯೇ ಈ ಒಪ್ಪಂದ ಇರಲಿದೆ ಎಂದ ಸುಳಿವನ್ನವರು ನೀಡಿದ್ದಾರೆ.
ಭಾರತದ ವಿಷಯದಲ್ಲಿ ಹೀಗಾಗದು
ದೆಹಲಿಯಲ್ಲಿ ನಡೆಯುತ್ತಿರುವ ವಾರ್ಷಿಕ ಭೌಗೋಳಿಕ-ರಾಜಕೀಯ ಶೃಂಗಸಭೆಯಲ್ಲಿ ಮಾತನಾಡಿದ ಲ್ಯಾಂಡೌ, ‘20 ವರ್ಷಗಳ ಹಿಂದೆ ನಾವು ಚೀನಾಗೆ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಲು ಬಿಟ್ಟೆವು. ಪರಿಣಾಮ ಅವರ ಉತ್ಪನ್ನಗಳು ನಮ್ಮೊಂದಿಗೇ ಸ್ಪರ್ಧೆಗೆ ನಿಂತವು. ಭಾರತದ ವಿಷಯದಲ್ಲಿ ಹೀಗಾಗದು’ ಎಂದರು.
ತಪ್ಪುಗಳ್ಯಾವುವು?:
-1990ರಿಂದ ವೈರಿರಾಷ್ಟ್ರಗಳ ಮೇಲೆ ಅಮೆರಿಕ ಹೇರಿದ ಭಾರೀ ತೆರಿಗೆಯ ಪರಿಣಾಮ, ಸಂಪದ್ಭರಿತ ಮ್ಯಾನ್ಮಾರ್ ಮತ್ತು ಇರಾನ್, ಚೀನಾದತ್ತ ವಾಲಿದವು
-2000ರಲ್ಲಿ ಚೀನಾಗೆ ಅಮೆರಿಕ ಶಾಶ್ವತ ಸಾಮಾನ್ಯ ವ್ಯಾಪಾರ ಸಂಬಂಧದ ಸ್ಥಾನ ನೀಡಿದ ಪರಿಣಾಮ, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ ವಸ್ತುಗಳ ಮೇಲಿನ ತೆರಿಗೆ ತಗ್ಗಿತು. ಇದರಿಂದ ಚೀನಾದಲ್ಲಿ ಉತ್ಪಾದನಾ ಹೂಡಿಕೆ ಹೆಚ್ಚಿತು
-2001ರಲ್ಲಿ ವಿಶ್ವ ವ್ಯಾಪಾರ ಸಂಸ್ಥೆಗೆ(ಡಬ್ಲ್ಯುಟಿಒ) ಸೇರಲು ಚೀನಾಗೆ ಅಮೆರಿಕ ನೆರವು ನೀಡಿತ್ತು. ಈ ಕ್ರಮವು ಚೀನಾದ ಪಾಲಿಗೆ ವಿಶ್ವದ ಮಾರುಕಟ್ಟೆಯನ್ನು ತೆರೆದಿಟ್ಟು, ರಫ್ತು ಹೆಚ್ಚಳಕ್ಕೆ ಕಾರಣವಾಯಿತು
-ಈ ಎಲ್ಲಾ ಅನುಕೂಲಗಳಿಂದಾಗಿ ಅಮೆರಿಕದ ದೊಡ್ಡದೊಡ್ಡ ಕಂಪನಿಗಳು, ಉತ್ಪಾದನಾ ಸ್ನೇಹಿ ಚೈನಾಗೆ ವಲಸೆ ಹೋದವು. ಪರಿಣಾಮ ಚೀನಾ ಅತಿದೊಡ್ಡ ಉತ್ಪಾದಕನಾದರೆ, ಅದರ ಉತ್ಪನ್ನಗಳಿಗೆ ಅಮೆರಿಕ ಮಾರುಕಟ್ಟೆ ಆಗಬೇಕಾಯಿತು.
-ಬೌದ್ಧಿಕ ಆಸ್ತಿ ಕಳ್ಳತನ ಮತ್ತು ವಿದೇಶಿ ಸಂಸ್ಥೆಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ನಿರ್ಬಂಧ
ಇದನ್ನೂ ಓದಿ: ಇರಾನ್ ಮೇಲೆ ಮತ್ತೊಂದು ಬೃಹತ್ ದಾಳಿಗೆ ಟ್ರಂಪ್ ಸಿದ್ಧತೆ? ಅಮೆರಿಕ ವಿರುದ್ಧ ದಾಳಿಗೆ ರಷ್ಯಾ ಗುಪ್ತಚರ ನೆರವು
ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!