ವೈದ್ಯರು ಆಗಷ್ಟೇ ಜನಿಸಿದ ಮಗುವನ್ನು ಕೈಗಿತ್ತಾಗ ಹೆದರಿ ನಡುಗಿದ ಮಗುವಿನ ಅಪ್ಪ: ವೀಡಿಯೋ ಭಾರಿ ವೈರಲ್ | Father Got Emotional After Holding First Time His Newborn

ವೈದ್ಯರು ಆಗಷ್ಟೇ ಜನಿಸಿದ ಮಗುವನ್ನು ಕೈಗಿತ್ತಾಗ ಹೆದರಿ ನಡುಗಿದ ಮಗುವಿನ ಅಪ್ಪ: ವೀಡಿಯೋ ಭಾರಿ ವೈರಲ್ | Father Got Emotional After Holding First Time His Newborn



ವೈದ್ಯರು ಆಗಷ್ಟೇ ಜನಿಸಿದ ಮಗುವನ್ನು ಕೈಗಿತ್ತಾಗ ಹೆದರಿ ನಡುಗಿದ ಮಗುವಿನ ಅಪ್ಪ: ವೀಡಿಯೋ ಭಾರಿ ವೈರಲ್ | Father Got Emotional After Holding First Time His Newborn

ಮೊದಲ ಬಾರಿಗೆ ತಂದೆಯಾದ ವ್ಯಕ್ತಿಯೊಬ್ಬರು, ಆಗ ತಾನೇ ಜನಿಸಿದ ಮಗುವನ್ನು ಕೈಗೆತ್ತಿಕೊಳ್ಳಲು ಭಯಪಡುವ ವೀಡಿಯೋವೊಂದು ವೈರಲ್ ಆಗಿದೆ. ವೈದ್ಯರು ಮಗುವನ್ನು ಕೈಗಿಟ್ಟಾಗ ಭಯದಿಂದ ನಡುಗುವ ಆ ತಂದೆಯನ್ನು ಸಮಾಧಾನಪಡಿಸುವ ದೃಶ್ಯವು ಅನೇಕರ ಮನಗೆದ್ದಿದೆ.

ಮೊದಲ ಬಾರಿ ಮಗುವನ್ನು ನೋಡಿ ಭಾವುಕನಾದ ತಂದೆ

ಮೊದಲ ಬಾರಿ ಪೋಷಕರಾಗುತ್ತಿರುವವರಿಗೆ ಮಗು ಜನಿಸಿದಾಗ ಆಗುವ ಖುಷಿ ಆತಂಕ ತಲ್ಲಣ ಅಷ್ಟಿಷ್ಟಲ್ಲ, ಅನೇಕರಿಗೆ ಏನಾಗುವುದೋ ಎಂಬ ಭಯವಿರುತ್ತದೆ. ಮಗುವಿಗೆ ಜನ್ಮ ನೀಡುವುದು ತಾಯಿಗೆ ಪುನರ್ಜನ್ಮವೆಂದೇ ಹೇಳಲಾಗುತ್ತದೆ. ಹೆರಿಗೆ ವೇಳೆಯ ನೋವಿನ ಜೊತೆಗೆ ಧುತ್ತನೇ ಎದುರಾಗುವ ಆರೋಗ್ಯ ಸಮಸ್ಯೆಗಳು, ಮಾನಸಿಕ ತುಮುಲಗಳು ಇದಕ್ಕೆ ಕಾರಣ. ಮೊದಲ ಬಾರಿ ತಾಯಿಯಾಗುವ ಹೆಣ್ಣು ಮಕ್ಕಳು ಮೊದಲ ಬಾರಿಗೆ ಅನುಭವಿಸುವ ಪಾಡನ್ನು ಅನೇಕರು ಹೇಳಿಕೊಂಡಿದ್ದಾರೆ. ಮಗು ಜನಿಸಿ ಅಳಲು ಶುರು ಮಾಡಿದಾಗ ಅದು ತಾಯಿಗೆ ಪುನರ್ಜನ್ಮ. ಜೊತೆಗೆ ಖುಷಿ ಹಾಗೂ ನೋವಿನ ಮಿಶ್ರಣವಾದ ಅನುಭವ ಆದರೆ ತಂದೆಗೆ ಯಾವ ರೀತಿಯ ಫೀಲಿಂಗ್ ಇರುತ್ತೆ. ಮೊದಲ ಬಾರಿ ತಂದೆಯಾದವರಿಗೆ ಮಗು ಜನಿಸಿದಾಗ ಅಮ್ಮನಷ್ಟೇ ಆತಂಕ ಆಗುತ್ತಾ? ನೋವಾಗುತ್ತಾ? ಗೊತ್ತಿಲ್ಲ, ಆದರೆ ಇಲ್ಲೊಂದು ತಂದೆಯ ವಿಡಿಯೋ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ.

ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ವೈದ್ಯರೊಬ್ಬರು ಹಂಚಿಕೊಂಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ತಂದೆಯೊಬ್ಬರಿಗೆ ಆಗ ತಾನೇ ಜನಿಸಿದ ಮಗುವನ್ನು ತಂದು ಕೊಟ್ಟಿದ್ದು, ಪುಟ್ಟ ಮಗುವನ್ನು ನೋಡಿ ಅದನ್ನು ಕೈಯಲ್ಲಿ ಹಿಡಿದುಕೊಳ್ಳುವುದಕ್ಕೆ ಆ ತಂದೆ ಭಯಗೊಳ್ಳುತ್ತಾರೆ. ಸಣ್ಣ ಖುಷಿಯ ಮೂಟೆಯನ್ನು ಹಿಡಿದುಕೊಳ್ಳುವುದಕ್ಕೆ ಬಲಿಷ್ಠ ವ್ಯಕ್ತಿಯ ಕೈಗಳು ನಡುಗುತ್ತವೆ. ಈ ಕ್ಷಣಗಳು ಜೀವಂತವಾಗಿರುತ್ತವೆ. ನೆನಪುಗಳು ಪ್ರತಿದಿನ, ಪ್ರತಿ ನಿಮಿಷ, ಪ್ರತಿ ಸೆಕೆಂಡಿಗೆ, ಹೊಸ ಸಂತೋಷವು ಕುಟುಂಬವನ್ನು ಸೇರುತ್ತದೆ ಎಂದು ಆ ವೈದ್ಯರು ಬರೆದಿದ್ದಾರೆ.

ವೈರಲ್ ವೀಡಿಯೋದಲ್ಲಿ ವೈದ್ಯರು ಮಗುವನ್ನು ತಂದು ಕೈಗಿಡುತ್ತಿದ್ದಂತೆ ಆ ವ್ಯಕ್ತಿ ಮಗುವನ್ನು ಸ್ವೀಕರಿಸಲು ಭಯಪಡುತ್ತಾರೆ. ಮಗುವಿಗೇನಾಗುವುದೋ ಎಂಬ ಭಯದಲ್ಲೇ ಇರುವ ಅವರ ಕೈಗೆ ಮಗುವನ್ನು ವೈದ್ಯರು ನೀಡಿದ್ದು, ಆ ಮಹಿಳಾ ವೈದ್ಯರೇ ಅವರ ಭುಜ ತಟ್ಟಿ ಸಮಾಧಾನಿಸುವ ಮೂಲಕ ಅವರ ಆ ಕ್ಷಣದ ಉದ್ವೇಗವನ್ನು ಶಾಂತಗೊಳಿಸುತ್ತಾರೆ. ವೀಡಿಯೋದಲ್ಲಿ ಮೊದಲಿಗೆ ಭಯಗೊಂಡ ಆ ತಂದೆ ಮಗುವನ್ನು ಎತ್ತಿಕೊಳ್ಳುವುದಕ್ಕೆ ಹಿಂಜರಿಯುವುದನ್ನು ಕಾಣಬಹುದು. ಮಗುವನ್ನು ಸ್ವೀಕರಿಸದೇ ಅವರು ಭಯದಲ್ಲೇ ಆ ವೈದ್ಯರಿಗೆ ಕೈ ಮುಗಿಯುತ್ತಾರೆ. ಆಗ ವೈದ್ಯರು ಚೊಚ್ಚಲ ತಂದೆಯನ್ನು ಸಮಾಧಾನಿಸುತ್ತಾ, ಮಗುವನ್ನು ಮೆಲ್ಲನೆ ಅವರ ಕೈಗಿಟ್ಟು ಸಮಾಧಾನಪಡಿಸುತ್ತಾರೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಸಂಘರ್ಷ: ಇರಾನ್‌ ತೈಲ ಡಿಪೋಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ: ಆಕಾಶದೆತ್ತರಕ್ಕೆ ಎದ್ದ ಬೆಂಕಿ ಜ್ವಾಲೆ

ಈ ವೀಡಿಯೋ ಈಗ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಅನೇಕರು ನಮಗೂ ಇದೇ ರೀತಿಯ ಫೀಲಿಂಗ್ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. drsuganyad3vi ಎಂಬ ವೈದ್ಯೆ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಪ್ರತಿಯೊಬ್ಬ ತಂದೆಗೂ ಈ ಭಾವನೆ ಗೊತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತಂದೆಯ ಆ ಭಾವನೆಯನ್ನು ಹ್ಯಾಂಡಲ್ ಮಾಡುವ ಮೂಲಕ ವೈದ್ಯರು ಮಿಂಚಿದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಎಂಥಹಾ ಅದ್ಭುತವಾದ ದೃಶ್ಯ ನೀವು ಅವರನ್ನು ಸಮಾಧಾನಿಸಿದ ರೀತಿ ಅದ್ಭುತವಾಗಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಅದ್ಭುತ ಕ್ಷಣ ಶುಭಾಶಯಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೊಚ್ಚಲ ಬಾರಿ ತಂದೆಯಾದ ವ್ಯಕ್ತಿಯನ್ನು ವೈದ್ಯರು ಸಮಾಧಾನಿಸಿದ ರೀತಿಗೂ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: KSRTCಯಲ್ಲಿ ಕೆಲಸ ಕೊಡಿಸುವ ಆಮಿಷ: ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡಿ 12 ಲಕ್ಷಕ್ಕೂ ಹೆಚ್ಚು ವಂಚನೆ



Source link

Leave a Reply

Your email address will not be published. Required fields are marked *