Miracle Gold ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ದೇವರಿಗೆ ಹರಕೆ ಹೊತ್ತ 4 ತಿಂಗಳ ಬಳಿಕ ಪವಾಡ | Miracle After Prayer Lost Gold Worth Rs 15 Lakh Found 4 Months After Being Sold As Scrap

Miracle Gold ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ದೇವರಿಗೆ ಹರಕೆ ಹೊತ್ತ 4 ತಿಂಗಳ ಬಳಿಕ ಪವಾಡ | Miracle After Prayer Lost Gold Worth Rs 15 Lakh Found 4 Months After Being Sold As Scrap



Miracle Gold ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ದೇವರಿಗೆ ಹರಕೆ ಹೊತ್ತ 4 ತಿಂಗಳ ಬಳಿಕ ಪವಾಡ | Miracle After Prayer Lost Gold Worth Rs 15 Lakh Found 4 Months After Being Sold As Scrap

ಗುಜುರಿ ಜೊತೆ ಗೊತ್ತಿಲ್ಲದೆ ₹15 ಲಕ್ಷ ಚಿನ್ನವೂ ಹೋಯ್ತು, ಮನೆ ಕ್ಲೀನ್ ಮಾಡಿ ಬೇಡದ ವಸ್ತುಗಳನ್ನು ಗುಜುರಿಗೆ ಮಾರಾಟ ಮಾಡಲಾಗಿತ್ತು. ಇದರಲ್ಲಿ ಚಿನ್ನವೂ ಹೋಗಿತ್ತು. ದೇವರಿಗೆ ಹರಕೆ ಹೊತ್ತ ಬಳಿಕ ನಡೆಯಿತು ಪವಾಡ 

ಫರೀದಾಬಾದ್ (ಫೆ.19) ಮನೆ ಕ್ಲೀನ್ ಮಾಡುವಾಗ ಖರೀದಿಸಿದ್ದ ಚಿನ್ನದ ಬಾಕ್ಸ್ ಕೂಡ ಬೇಡದ ವಸ್ತು ಎಂದು ಗೋಣಿ ಚೀಲದಲ್ಲಿ ಹಾಕಲಾಗಿದೆ. ಹಲವು ಬಾಕ್ಸ್, ಪುಸ್ತಕ, ಪೇಪರ್, ಮೆಟಲ್ ಸೇರಿದಂತೆ ಕೆಲ ಬೇಡದ ವಸ್ತುಗಳನ್ನು ಚೀಲದಲ್ಲಿ ಕಟ್ಟಿ ಗುಜುರಿಗೆ ನೀಡಲು ಕುಟುಂಬ ನಿರ್ಧರಿಸಿತ್ತು. ಇದರಂತೆ ಗುಜುರಿ ವ್ಯಾಪಾರಸ್ಥರು ಬಂದಾಗ ಕಟ್ಟಿಟ್ಟ ವಸ್ತುಗಳನ್ನು ತೂಕ ಮಾಡಿ ಗುಜುರಿಗೆ ಮಾರಾಟ ಮಾಡಲಾಗಿತ್ತು. ಆದರೆ ಈ ಗುಜುರಿಯಲ್ಲಿ ಗೊತ್ತಿಲ್ಲದೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನವೂ ಹೋಗಿತ್ತು. ಕೆಲ ದಿನಗಳ ಬಳಿಕ ಚಿನ್ನವೂ ಗುಜುರಿಯಲ್ಲಿ ಹೋಗಿದೆ ಅನ್ನೋದು ಕುಟುಂಬಕ್ಕೆ ಅರಿವಾಗಿದೆ. ಹೀಗಾಗಿ ಗುಜುರಿ ವ್ಯಾಪಾರಿಯನ್ನು ಸಂಪರ್ಕಿಸಿ ಕೇಳಿದ್ದಾರೆ. ಹುಡುಕಾಡಿದರೂ ಗುಜುರಿ ವ್ಯಾಪಾರಿಗೆ ಸಿಗಲಿಲ್ಲ. ತೀವ್ರ ಬೇಸರಗೊಂಡ ಕುಟುಂಬ ಕೊನೆಗೆ ದೇವರಿಗೆ ಹರಕೆ ಒಪ್ಪಿಸಿ ನಷ್ಟ ಮರೆಯಲು ಪ್ರಯತ್ನಿಸಿತು. ದೇವರಿಗೆ ಪ್ರಾರ್ಥಿಸಿದ ಬಳಿಕ ನಾಲ್ಕು ತಿಂಗಳಲ್ಲೇ ಪವಾಡ ನಡೆದ ಘಟನೆ ಉತ್ತರ ಪ್ರದಶದ ಫರೀದಾಬಾದ್‌ನಲ್ಲಿ ನಡೆದಿದೆ.

ರಟ್ಟಿನ ಬಾಕ್ಸಿನಲ್ಲಿಟ್ಟ ಚಿನ್ನ

ಅಶೋಕ್ ಶರ್ಮಾ ಮನೆಯ ಎಲ್ಲಾ ಸದಸ್ಯರು ಕಳೆದ ವರ್ಷ ಕಂಭ ಮೇಳಕ್ಕೆ ಹೋಗಲು ನಿರ್ಧರಿಸಿದ್ದರು. ಕೆಲ ದಿನಗಳ ಕಾಲ ಮನೆಯಲ್ಲಿ ಯಾರು ಇರುವುದಿಲ್ಲ ಅನ್ನೋ ಕಾರಣಕ್ಕೆ ಮನೆಯಲ್ಲಿದ್ದ ಕೆಲ ಚಿನ್ನದ ಆಭರಣ, ರಿಂಗ್ , ಚೈನ್‌ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಸ್ವೀಟ್ ಬಾಕ್ಸ್ ರೀತಿಯ ಬಾಕ್ಸ್‌ನಲ್ಲಿ ಇಡಲಾಗಿತ್ತು. ಇದನ್ನು ಮನೆಯ ಗೋದ್ರೇಜ್ ಬದಲು ಬೇರೆಡೆ ಇಡಲಾಗಿತ್ತು.

ಕುಂಭ ಮೇಳಕ್ಕೆ ಹೋಗುವ ಕಾರಣ ಚಿನ್ನವನ್ನು ಬೇರೆಡೆ ಇಡಲಾಗಿತ್ತು. ಕುಂಭ ಮೇಳದಿಂದ ಬಂದು ಬದುಕು ಎಂದಿನಂತೆ ಸಾಗಿತ್ತು. ಅಶೋಕ್ ಶರ್ಮಾ ಮನೆಯ ಸದಸ್ಯರು ಕಳೆದ ವರ್ಷದ ದೀಪಾವಳಿ ಹಬ್ಬವನ್ನು ಸಂಭ್ರಮಿದಿಂದ ಆಚರಿಸಲು ಮುಂದಾಗಿದ್ದಾರೆ. ಹೀಗಾಗಿ ಇಡೀ ಮನೆ ಶುಚಿಗೊಳಿಸಲು ಮುಂದಾಗಿದ್ದಾರೆ. ಮನೆಯ ಎಲ್ಲಾ ಸದಸ್ಯರು ಮನೆ ಶುಚಿಗೊಳಿಸಿದ್ದಾರೆ. ಈ ವೇಳೆ ಕೆಲ ರಟ್ಟಿನ ಬಾಕ್ಸ್, ಪುಸ್ತಕ, ಪೇಪರ್ ಸೇರಿದಂತೆ ಹಲವು ಬೇಡದ ವಸ್ತುಗಳನ್ನು ತೆಗೆದು ಗೋಣಿ ಚೀಲದಲ್ಲಿ ತುಂಬಿಸಲಾಗಿತ್ತು. ಈ ವೇಳೆ ಮನೆಯ ಸದಸ್ಯರೊಬ್ಬರು ಗೊತ್ತಿಲ್ಲದೆ ಚಿನ್ನ ಇದ್ದ ಬಾಕ್ಸ್‌ನ್ನು ಗೋಣಿಚೀಲದಲ್ಲಿ ತುಂಬಲಾಗಿತ್ತು.

ಗುಜುರಿಗೆ ಹಾಕಿದ್ದ ಕುಟುಂಬಸ್ಥರು

ನಾಲ್ಕೈದು ಗೋಣಿಚೀಲದಲ್ಲಿ ಬೇಡದ ವಸ್ತುಗಳಿದ್ದ ಕಾರಣ ಗುಜುರಿ ವ್ಯಾಪಾರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಗುಜುರಿ ವ್ಯಾಪಾರಿ ಗೋಣಿ ಚೀಲಗಳನ್ನು ತೂಗಿ ಅದಕ್ಕೆ ಬೆಲೆ ನೀಡಿ ತೆಗೆದುಕೊಂಡು ಹೋಗಿದ್ದಾರೆ. ಇದಾದ ಕೆಲ ದಿನಗಳ ಬಳಿಕ ಚಿನ್ನ ಹುಡುಕುವಾಗ ನಾಪತ್ತೆಯಾಗಿದೆ. ಕುಟುಂಬ ಸದಸ್ಯರನ್ನು ವಿಚಾರಿಸಿದಾಗ ಎಲ್ಲಾ ಬಾಕ್ಸ್‌ಗಳನ್ನು ಗೋಣಿ ಚೀಲದಲ್ಲಿ ತುಂಬಿಸಿರುವುದಾಗಿ ಗೊತ್ತಾಗಿದೆ. ತಕ್ಷಣವೇ ಗುಜುರಿ ವ್ಯಾಪಾರಿಯನ್ನು ಅಶೋಕ್ ಶರ್ಮಾ ಸಂಪರ್ಕಿಸಿದ್ದಾರೆ. ಇತ್ತ ವ್ಯಾಪಾರಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಎಲ್ಲೂ ಸಿಗಲಿಲ್ಲ.

ದೇವರಿಗೆ ಪೂಜೆ ಸಲ್ಲಿಸಿದ ಕುಟುಂಬ

ಈ ಕುರಿತು ದೂರು ನೀಡಲು ಸಾಧ್ಯವಿಲ್ಲ. ಏನು ಮಾಡಲಿ ಎಂದ ಕುಟುಂಬ ಕೊನೆಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿತ್ತು. ಬಳಿಕ ನಷ್ಟದ ನೋವು ಮರೆಯುವ ಪ್ರಯತ್ನ ಮಾಡಿತ್ತು. ಇದೀಗ ನಾಲ್ಕು ತಿಂಗಳ ಬಳಿಕ ಅಚಾನಕ್ಕಾಗಿ ಪೊಲೀಸ್ ಠಾಣೆಯಿಂದ ಕರೆ ಬಂದಿದೆ. ತಕ್ಷಣವೆ ಹೊರಟು ಹೋದ ಅಶೋಕ್ ಶರ್ಮಾಗೆ ಅಚ್ಚರಿ ಕಾದಿತ್ತು. ಕಳೆದು ಹೋದ ಚಿನ್ನ ಪತ್ತೆಯಾಗಿತ್ತು. ಗುಜುರಿ ವ್ಯಾಪಾರಿ ಚಿನ್ನವನ್ನು ಪೊಲೀಸ್ ಠಾಣೆಗೆ ಮರಳಿಸಿ ಈ ರೀತಿ ಅಶೋಕ್ ಶರ್ಮಾ ಸಂಪರ್ಕಿಸಿದ್ದರು. ಅವರ ಮರು ಸಂಪರ್ಕ ಸಾಧ್ಯವಾಗುತ್ತಿಲ್ಲ. ಈ ಚಿನ್ನವನ್ನು ಅಶೋಕ್ ಶರ್ಮಾ ಕುಟುಂಕ್ಕೆ ತಲುಪಿಸುವಂತೆ ಗುಜುರಿ ವ್ಯಾಪಾರಿ ಮನವಿ ಮಾಡಿದ್ದಾರೆ. ಗುಜುರಿ ವ್ಯಾಪಾರಿ ರಾಶಿ ಹಾಕಿದ್ದ ಗುಜುರಿ ಹಂತ ಹಂತವಾಗಿ ಮಾರಾಟ ಮಾಡುವಾಗ ಚಿನ್ನನದ ಬಾಕ್ಸ್ ಸಿಗುತ್ತಾ ಎಂದು ಚೆಕ್ ಮಾಡತ್ತಲೇ ಹೋಗಿದ್ದಾರೆ. ಕೊನೆಗೂ ಚಿನ್ನ ಸಿಕ್ಕಿದೆ.



Source link

Leave a Reply

Your email address will not be published. Required fields are marked *