Woman case ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, 20 ನಿಮಿಷದ ಬಳಿಕ 4ನೇ ಮಹಡಿಯಿಂದ ಜಂಪ್ | Woman Leaps From Hotel Window Minutes After Check In Companion Detained Delhi

Woman case ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, 20 ನಿಮಿಷದ ಬಳಿಕ 4ನೇ ಮಹಡಿಯಿಂದ ಜಂಪ್ | Woman Leaps From Hotel Window Minutes After Check In Companion Detained Delhi



Woman case ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, 20 ನಿಮಿಷದ ಬಳಿಕ 4ನೇ ಮಹಡಿಯಿಂದ ಜಂಪ್ | Woman Leaps From Hotel Window Minutes After Check In Companion Detained Delhi

ಯುವಕನೊಂದಿಗೆ ಹೊಟೆಲ್ ರೂಂ ಹೊಕ್ಕ ಯುವತಿ, ಕೆಲ ಹೊತ್ತಿನ ಬಳಿಕ 20ರ ಹರೆಯದ ಯುವಿತಿ ಹೊಟೆಲ್‌ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾಳೆ. ತಕ್ಷಣವೇ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ದೆಹಲಿ (ಫೆ.13) ಹದಿ ಹರೆಯದ ಯುವಕ ಹಾಗೂ ಯುವತಿ ಇಬ್ಬರು ಖುಷಿ ಖುಷಿಯಿಂದ ಹೊಟೆಲ್ ರೂಂ ಒಳಹೊಕ್ಕಿದ್ದಾರೆ. ಡೋರ್ ಕ್ಲೋಸ್ ಮಾಡಿದ್ದಾರೆ. ಕೆಲವೇ ಹೊತ್ತಲ್ಲಿ 20ರ ಹರೆಯದ ಯುವತಿ ನಾಲ್ಕನೇ ಮಹಡಿಯಲ್ಲಿದ್ದ ಹೊಟೆಲ್ ರೂಂ ಕಿಟಕಿಯಿಂದ ಕೆಳಕ್ಕೆ ಹಾರಿದ ಘಟನೆ ದೆಹಲಿಯ ಫರ್ಶ್ ಬಜಾರ್‌ನಲ್ಲಿ ನಡೆದಿದೆ. ಯುವತಿಯನ್ನು ಸ್ಥಳೀಯರು, ಹೊಟೆಲ್ ಸಿಬ್ಬಂದಿ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಡಿರುವ ಯುವತಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?

ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ 22ರ ಹರೆಯದ ಯುವಕ, ದೆಹಲಿಯ ಸುಂದರಿ ನಗರದ ನಿವಾಸಿ 20ರ ಹರೆಯದ ಯುವತಿ ಜೊತೆ ಫರ್ಶ್ ಬಜಾರ್‌ನಲ್ಲಿರುವ ಸಂತೋಷ್ ರೆಸಿಡೆನ್ಸಿ ಹೊಟೆಲ್‌ಗೆ ತೆರಳಿದ್ದಾರೆ. ರೂಂ ಬುಕ್ ಮಾಡಿ ಇಬ್ಬರು ಹೊಟೆಲ್ ಕೊಠಡಿಗೆ ತೆರಳಿದ್ದಾರೆ. ಇಬ್ಬರು ಹೊಟೆಲ್ ರೂಂಗೆ ತೆರಳಿ ಬಾಗಿಲ ಕ್ಲೋಸ್ ಮಾಡಿದ್ದಾರೆ. ಸರಿಸುಮಾರು 20 ನಿಮಿಷಗಳ ಬಳಿಕ ಪರಿಸ್ಥಿತಿ ಬದಲಾಗಿದೆ. ಯುವತಿ ಹೊಟೆಲ್ ಕಿಟಕಿ ಮೂಲಕ ಕೆಳಕ್ಕೆ ಹಾರಿದ್ದಾಳೆ.

ಯುವತಿ ಜಂಪ್ ಮಾಡಲು ಕಾರಣವೇನು

ಯವಕನ ಜೊತೆ ಖುಷಿಯಾಗಿ ಹೊಟೆಲ್ ರೂಂ ಸೇರಿಕೊಂಡ ಯುವತಿ ದಿಢೀರ್ ಕೆಳಕ್ಕೆ ಹಾರಲು ಕಾರಣವೇನು ಅನ್ನೋದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಹೊಟೆಲ್ ಕೊಠಡಿಯಲ್ಲಿ ಯುವತಿ ಹಾಗೂ ಯುವಕ ಕೆಲ ವಿಚಾರ ಕುರಿತು ವಾಗ್ವಾದ ನಡೆಸಿದ್ದಾರೆ. ವಾಗ್ವಾದ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಯುವತಿ ಆಕ್ರೋಶದಿಂದ ಕೆಳಕ್ಕೆ ಹಾರಿದ್ದಾಳೆ ಎಂದು ವರದಿಯಾಗಿದೆ.

ಯುವಕ ಪೊಲೀಸರ ವಶಕ್ಕೆ

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 22ರ ಹರೆಯದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರೆ. ಇತ್ತ ಯುವತಿ ಪ್ರಾಣಾಪಾಯದಿಂದ ಪಾರಾದರೂ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹಲವು ಮೂಳೆ ಮುರಿದಿದೆ. ಹೀಗಾಗಿ ಸುದೀರ್ಘ ಚಿಕಿತ್ಸೆಯ ಅವಶ್ಯಕತೆ ಇದೆ. ಸದ್ಯ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಯುವತಿ ಹೇಳಿಕೆ ದಾಖಲಿಸಲಾಗಿಲ್ಲ. ಇತ್ತ ಫಾರೆನ್ಸಿಕ್ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳ ಪರಿಶೀಲನೆ ನಡೆಸಿದೆ.

ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಹೊಟೆಲ್ ರೂಂನಲ್ಲಿ ಬುಕಿಂಗ್ ಕುರಿತು ದಾಖಲೆಗಳನ್ನು ಪೊಲೀಸರು ತರಿಸಿಕೊಂಡಿದ್ದಾರೆ. ಇತ್ತ ಯುವತಿ ಪೋಷಕರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಯುವತಿ ಪೋಷಕರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

Scroll to load tweet…



Source link

Leave a Reply

Your email address will not be published. Required fields are marked *