Headlines

Deepak Kumar ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ | Deepak Kumar Gym Faces Boycott 150 Members Drop To 15 After Mohammad Deepak Stand

Deepak Kumar ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ | Deepak Kumar Gym Faces Boycott 150 Members Drop To 15 After Mohammad Deepak Stand



Deepak Kumar ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ | Deepak Kumar Gym Faces Boycott 150 Members Drop To 15 After Mohammad Deepak Stand

ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ,ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ, ಸೋಶಿಯಲ್ ಮೀಡಿಯಾ, ಕಾಂಗ್ರೆಸ್, ಸಿಪಿಎಂ ನಾಯಕರಿಗೆ ಹೀರೋ ಆದ ದೀಪಕ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ

ನವದೆಹಲಿ (ಫೆ.10) ದೀಪಕ್ ಕುಮಾರ್ ಆಗಿದ್ದಾಗ ಹಲ್ಕ್ ಜಿಮ್ ಸೆಂಟರ್‌ನಲ್ಲಿ ಬರೋಬ್ಬರ 150 ಸದಸ್ಯರಿದ್ದರು. ಎಲ್ಲವೂ ಚೆನ್ನಾಗಿತ್ತು. ಯಾವಾಗ ಮೊಹಮ್ಮದ್ ದೀಪಕ್ ಆಗಿ ಬದಲಾದಂತೆ 150 ಮಂದಿ ಇದ್ದ ಜಿಮ್‌ ಸದಸ್ಯರ ಸಂಖ್ಯೆ ಕೇವಲ 15ಕ್ಕೆ ಇಳಿಕೆಯಾಗಿದೆ. ಇದೀಗ ಮೊಹಮ್ಮದ್ ದೀಪಕ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಮೊಹಮ್ಮದ್ ದೀಪಕ್ ಇತ್ತೀಚೆಗೆ ಉತ್ತರಖಂಡದಲ್ಲಿ ಭಾರಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ದೀಪಕ್ ಕುಮಾರ್.

ಬದ್ರಿನಾಥ್ ಕೋಟ್ದಾರ್ ರಸ್ತೆಯಲ್ಲಿರುವ ಹಲ್ಕ್ ಜಿಮ್ ಮಾಲೀಕ ದೀಪಕ್. ಈತನ ಅಸಲಿ ಹೆಸರು ದೀಪಕ್ ಕುಮಾರ್. ಆದರೆ ಇತ್ತೀಚೆಗೆ ಬಜರಂಗದಳ ಗುಂಪು 70 ವರ್ಷದ ವಿಕಿಲ್ ಅಹಮ್ಮದ್ ಬಟ್ಟೆ ಅಂಗಡಿಗೆ ನುಗ್ಗಿತ್ತು. ಬಾಬಾ ಸ್ಕೂಲ್ ಡ್ರೆಸ್ ಅನ್ನೋ ಬಟ್ಟೆ ಅಂಗಡಿಗೆ ನುಗ್ಗಿತ್ತು. ಕಾರಣ ಈ ಹೆಸರು ಸಿದ್ಧಬಲಿ ಬಾಬಾ ದೇವಸ್ಥಾನದ ಹೆಸರನ್ನು ಬಳಸಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದಾಳಿ ನಡೆಸಿತ್ತು. ಈ ವೇಳೆ ವಿಕಿಲ್ ಅಹಮ್ಮದ್ ಪರವಾಗಿ ನೆರವಿಗೆ ಧಾವಿಸಿದ್ದೇ ಈ ದೀಪಕ್ ಕುಮಾರ್.

ನಾನು ಮೊಹಮ್ಮದ್ ದೀಪಕ್

ವಿಕಿಲ್ ಅಹಮ್ಮದ್ ಶಾಪ್ ಮೇಲೆ ಬಜರಂಗದಳ ಸದಸ್ಯರು ದಾಳಿ ಮಾಡುತ್ತಿದ್ದಂತೆ ದೀಪಕ್ ಅಡ್ಡಬಂದು ಅಹಮ್ಮದ್ ನೆರವಿಗೆ ನಿಂತಿದ್ದ. ಈ ಈ ವೇಳೆ ಬಜರಂಗದಳ ಸದಸ್ಯರು ಯಾರು ನೀನು ಎಂದು ಕೇಳಿದಾಗ ನಾನು ಮೊಹಮ್ಮದ್ ದೀಪಕ್ ಎಂದು ಉತ್ತರಿಸಿದ್ದ. ಈ ವಿಡಿಯೋಗಳು ಬಾರಿ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮೊಹಮ್ಮದ್ ದೀಪಕಿ ಹೀರೋ ಆಗಿದ್ದ. ಇತ್ತ ಸಿಪಿಎಂ ಸಂಸದ ಬ್ರಿಟ್ಟಾಸ್ ಈತನ ಜಿಮ್‌ಗೆ ಬೇಟಿ ನೀಡಿ ಬೆಂಬಲ ಸೂಚಿಸಿದ್ದರು. ಇಷ್ಟೇ ಅಲ್ಲ ಸದಸ್ಯತ್ವ ನೋಂದಾಯಿಸಿಕೊಂಡಿದ್ದರು. ಹಲವು ನಾಯಕರು ದೀಪಕ್ ಬೆಂಬಲಕ್ಕೆ ನಿಂತಿದ್ದರು.

ಈ ಹುರುಪಿನಲ್ಲಿ ತಾನು ಮೊಹಮ್ಮದ್ ದೀಪಕ್, ಏನಿವಾಗ ಎಂದು ಹಿಂದೂ ಸಂಘಟನೆಗಳ ಹಲವು ಸದಸ್ಯರಿಗೆ ಪ್ರಶ್ನೆ ಮಾಡಿದ್ದ ಮೊಹಮ್ಮದ್ ದೀಪಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಹಲವರು ಈತನ ಜಿಮ್ ಸದಸ್ಯತ್ವ ರದ್ದುಗೊಳಿಸಿದ್ದಾರೆ. ಹಲವು ಪೋಷಕರು ತಮ್ಮ ಮಕ್ಕಳನ್ನು ಹಲ್ಕ್ ಜಿಮ್‌ಗೆ ಕಳುಹಿಸಲು ನಿರಾಕರಿಸಿದ್ದಾರೆ. ಹೀಗಾಗಿ 150 ಸದಸ್ಯರಿದ್ದ ಈ ಹಲ್ಕ್ ಜಿಮ್‌ನಲ್ಲಿ ಇದೀಗ 15 ಮಂದಿ ಮಾತ್ರ ಉಳಿದಿದ್ದಾರೆ. ಜಿಮ್‌ಗೆ ಬಾಡಿಯಾಗಿ ಪ್ರತಿ ತಿಂಗಳು 40,000 ರೂಪಾಯಿ ಪಾವತಿಸಬೇಕಿದೆ. ಇತ್ತ ಮನೆಯ ಸಾಲ ಪ್ರತಿ ತಿಂಗಳು 16,000 ರೂಪಾಯಿ ಕಟ್ಟಬೇಕಿದೆ. ಇತ್ತ ಜಿಮ್ ಆದಾಯ ಕೊರತೆಯಾಗಿರುವ ಕಾರಣ ಆರ್ಥಿಕ ಸಂಕಷ್ಟ ತೀವ್ರಗೊಳ್ಳುತ್ತಿದೆ.



Source link

Leave a Reply

Your email address will not be published. Required fields are marked *